ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುರುಡುತನದಿಂದ ವೃದ್ಧ ಪತಿಯನ್ನು ಹೊಂದುವದರಿಂದಲೋ, ಗಂಡನ ಮೇಲೆ ಪ್ರೇಮವಿಲ್ಲದಿರುವದರಿ೦ದಲೋ, ಕಾಮಜೀವನಲ್ಲಿ ತೃಪ್ತಿ ಹೊಂದದೆ ಕೆಲವು ದುಷ್ಟಯರ ಸಹವಾಸದಿಂದ ಕೃತ್ರಿಮ ಮೈಥುನವನ್ನು ಕಲಿತು ಕೊಳ್ಳುವರು. ಅದಕ್ಕೆ ಅವರು ತಮ್ಮ ಮೂತ್ರಮಾರ್ಗದ ಮೇಲಡೆಗಿರುವ ಚಂದ್ರನಾಡಿ (Clitoris) ಯನ್ನು ವಿವಿಧ ಸಾಧನಗಳಿಂದ ಉತ್ತೇಜನಗೊ ಳಿಸಿಕೊಳ್ಳುವರು. ಅದರಿಂದ ಅವರ ನರಗಳೆಲ್ಲ ದುರ್ಬಲವಾಗಿ, ಬಂಜೆ ಯರೂ, ಕುಸಂತತಿಗಳೂ, ಸೂತಿಕಾರೋಗವುಳ್ಳವರೂ ಆಗುವರು. ಆದ್ದರಿಂದ ನಮ್ಮ ತರುಣ ತರುಣಿಯರಿಗೆ ಬಾಲ್ಯದಿಂದಲೂ ಕಾಮ ಜೀವನದ ಶಾಸ್ತ್ರೀಯ ವ್ಯಾಸಂಗ ಮಾಡಿಸಿ, ಅದರ ದುರುಪಯೋಗದಿಂದ ಉಂಟಾಗುವ ಅಪಾಯಗಳನ್ನು ಚನ್ನಾಗಿ ಅವರ ಮನದಲ್ಲಿ ಬಿಂಬಿಸಿದರೆ, ಅವರು ಸದ್ಗುಣಿಗಳ ತಗಿ ತಮ್ಮ ಸಮಾಜದೇಶಗಳಿಗೆ ಕೀರ್ತಿಯನ್ನು ತರುವ ಸ್ತ್ರೀ ಪುರುಷರಾಗುವರು. * ೬ನೇ ಪ್ರಶ್ನೆ :-ಕೃತ್ರಿಮ ಮೈಥುನಕ್ಕೂ ಸಂಭೋಗಕ್ಕೂ ಪರಿಣಾಮದಲ್ಲಿ ವ್ಯತ್ಯಾಸವೇನು ? ಕಾಮವಿಕಾರದಿಂದ ಉತ್ಪನ್ನ ವಾದ ವೀರ್ಯವು ಹೇಗೂ ದೇಹಕ್ಕೆ ಪುನಃ ಸೇರುವುದಿಲ್ಲ. ಅದನ್ನು, ಸಂಭೋಗಕ್ಕೆ ಅವಕಾಶವಿಲ್ಲದವರು ಯಾವಾಗಾದರೊಮ್ಮೆ ಕೃತ್ರಿಮ ಮೈಥುನದಿಂದ ಹೊರಗೆ ಹಾಕಬಾರದೇಕೆ ? ಉತ್ತರ:-ಮೊದಲು ಅದಕ್ಕೆ ಕೃತ್ರಿಮ ಮೈಥುನ' ವೆಂಬ ಹೆಸರೇಕೆ ಬಂತೆಂಬುದನ್ನು ವಿಚಾರಮಾಡುವಾ. (೧) ಕಾಮ ಭಾವನೆಯು ಹುಟ್ಟಿದ ಕೂಡಲೆ ಲಿಂಗೋದ್ರೇಕವಾಗಬಾರದು. ಹಾಗೆ ಆಗುವದಾದರೆ ಕಾಮಶಾಸ್ತ್ರದ ಲೇಖಕರೂ ಕಾದಂಬರಿಗಳ ಓದುಗರೂ ಲಿಂಗೋದ್ರೇಕದ ರೋಗದಿಂದಲೇ ನರಳಬೇಕಾದೀತು. (೨) ಅದಕ್ಕೆ ತನ್ನ ಪ್ರಿಯನ ಅಥವಾ ಪ್ರಿಯಳ ಸಾಮಾಜ್ಯವು ಅಗತ್ಯ (ಸ್ತ್ರೀಯರಿಗೂ ಹಿಂದೆ ಹೇಳಿದ ಚಂದ್ರನಾಡಿಯು ಲಿಂಗದಂತೆ ನಸುಗೆಂಪಾಗಿ ಇರುತ್ತದೆ. ಅದೂ ಕೂಡ ಕಾಮೋದ್ರೇಕ ವಾದಾಗ ಪುರುಷ ಸಾಮಾನ್ಯವಾದರೆ ಲಿಂಗದಂತೆಯೇ ಉದ್ರೇಕವಾಗುವದು) (೩) ಉದ್ರಿಕ್ತವಾದ ಲಿಂಗವು ಇನ್ನೂ ಬಲಗೊಳ್ಳಬೇಕಾದರೆ ಸ್ತ್ರೀಯರ