________________
೧೩ (೮) ದೇಹಕ್ಕೆ ಆಯಾಸವಾಗುವಂತೆ ಯಾವದಾದರೂ ಆಟ ಅಥವಾ ವ್ಯಾ ಯಾಮದಲ್ಲಿ ದಿನಾಲು ಸ್ವಲ್ಪ ವೇಳೆ ಕಳೆಯಬೇಕು. (೯) ಒಳ್ಳೆ ವಿದ್ಯಾ ನಂತರಾದ ಹರ್ಷಶೀಲರಾದ ಗೆಳೆಯರನ್ನು ಸಂಪಾದಿಸಬೇಕು. (೧೦) ಬುದ್ಧಿಯನ್ನು ಹೆಚ್ಚಿಸುವ ವಿವಿಧ ಸ್ಪರ್ಧೆಗಳಲ್ಲಿ ಹೊಟ್ಟೆ ಕಿಚ್ಚಿಲ್ಲದೆ ಯತ್ನಿಸ ಬೇಕು. (೧೧) ಹೆಂಗಸರಿಂದ ದೂರ ಓಡಿಹೊಗುವದಕ್ಕಿಂತ ಅವರೊಡನೆ ಬೌದ್ದಿಕ ಸಂಬಂಧವನ್ನಿಡಬೇಕು, ವಿವಿಧ ವಿಷಯಗಳ ಮೇಲೆ ಚರ್ಚೆ ಮಾಡಬೇಕು. ಅದರಿಂದ ಜಯಾಭಿಲಾಷೆಯು ಹೆಚ್ಚಿ ಕಾಮವು ಅಜ್ಞಾತ ವಾಗಿ ಮಾಯವಾಗುವುದು, ಸ್ಪರ್ಧೆಯನ್ನು ಹುಟ್ಟಿಸುವ ಆಟಗಳನ್ನು ಅವ ರೊಡನೆ ಆಡುತ್ತಿರಬಹುದು. (೧೨) ನಿದ್ರೆ ಕೆಡಬಾರದು. () ಕಾಮೋ ತೇಜಕ ಸಿನಿಮಾ, ನಾಟಕ, ಕಾದಂಬರಿಗಳನ್ನು ನೋಡಬಾರದು. (೧೪) ಆಹಾರದಲ್ಲಿ ಉಪ್ಪು, ಹುಳಿ, ಖಾರ ಹೆಚ್ಚಾಗಿರಬಾರದು. (೧೫) ಮಿತಿ ವಿಾರಿ ಊಟಮಾಡಬಾರದು. (೧೬) ಅಜೀರ್ಣವಾಗದಂತೆಯೂ ದಿನಾಲು ಮಲ ಶುದ್ಧಿಯಾಗುವಂತೆಯೂ ನೋಡಿಕೊಳ್ಳಬೇಕು. (೧೭) ಸಮಾಜ ದೇಶಧರ್ಮಗಳ ಸೇವೆಯಲ್ಲಿ ಪ್ರತ್ಯಕ್ಷ ಭಾಗಿಯಾಗಬೇಕು. (೧೨) ತಡೆ ದರೆ ತಣ್ಣೀರಿನ ಸ್ನಾನ ಮಾಡಬೇಕು. (೧) ಬಿರುಸಾದ ಹಾಸಿಗೆಯಲ್ಲಿ ಮಲಗಬೇಕು. (೨೦) ಎತ್ತರವಾದ ತಲೆದಿಂಬು ಇಟ್ಟುಕೊಳ್ಳಬಾರದು ಮತ್ತು (೨೧) ಲಿಂಗಾತವಾಗಿ ಮಲಗಬಾರದು. ಏಕೆಂದರೆ ಕರಳುಗಳ ಹಿಂಭಾಗದಲ್ಲಿ ವೀರ್ಯಾಶಯಗಳಿವೆ. ಮೇಲೆ ಬರೆದ ಎರಡು ಕಾರಣಗಳಿಂ ದಲೂ ಕರಳಿನ ಛಾರವು ಅವುಗಳ ಮೇಲೆ ಬಿದ್ದು ಸ್ವ ಲನವಾಗುವ ಸಂಭವವಿದೆ ಆದ್ದರಿಂದ ಒಂದು ಮಗ್ಗಲಾಗಿ ಮಲಗುವುದು ಒಳ್ಳೇದು. (೨೨) ಮತ್ರಹೊಯ್ಯದೆ ಮಲಗಬಾರದು. ಏಕೆಂದರೆ ಮೂತ್ರಾಶಯವು ತುಂಬಿದ್ದರೆ ವೀರ್ಯಾಶಯವು, ಕರಳು ಮತ್ತು ಮೂತ್ರಾಶಯದ ಮಧ್ಯದಲ್ಲಿ ಹಿಚುಕಲ್ಪಡುವದು. (೨೩) ಮಲಗುವಾಗ ನೀರು ಕುಡಿಯಬಾರದು. (೨೪) ಊಟವಾದ ಕೂಡಲೆ ಮಲಗಬಾರದು; ಕನಿಷ್ಟ ೪-೫ ಘಂಟೆಗಳಾ ದರೂ ಅಂತರವಿರಬೇಕು. (೨೫) ಜನನೇಂದ್ರಿಯವನ್ನು ದಿನಾಲು ಬೆಳಿಗ್ಗೆ ತಣ್ಣೀರಿಂದ ತೊಳೆಯಬೇಕು; ಲಿಂಗದ ಮುಂದೊಗಲು (Preptice) ಮತ್ತು ಮಣಿ (Glans) ಯ ಮಧ್ಯದಲ್ಲಿರುವ ಕಸರನ್ನು ತೊಳೆಯಬೇಕು.