ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಕ್ಕೆ ಮುಂದಿನ ಪ್ರಶ್ನೆಯನ್ನು ನೋಡಿರಿ). ಆದರೆ ಶಾಸ್ತ್ರೀಯ ದೃಷ್ಟಿ ಯಿಂದ ರಜಸ್ಸು ಹರಿಯುತ್ತಿರುವವರೆಗೂ ಮೇಲಿನ ಎಲ್ಲ ನಿಯಮಗಳನ್ನೂ ಅಗತ್ಯವಾಗಿ ಪಾಲಿಸಬೇಕು. ಬಹುತರವಾಗಿ ಮನೆಯಲ್ಲಿ ಎಲ್ಲರಿಗೂ ಊಟವಾದಮೇಲೆ ಮುಟ್ಟಾದ ವರಿಗೆ ಬಡಿಸುವದುಂಟು. ಅದು ಯೋಗ್ಯವಲ್ಲ. ಅವರಿಗೆ ವೇಳೆಗೆ ಸರಿಯಾಗಿ ಬಿಸಿಯಾದ ಒಳ್ಳೆ ಆಹಾರವನ್ನು ಕೊಡಲೇಬೇಕು. ಮುಟ್ಟೆ೦ಬುದು ಒಂದು ರೋಗವಲ್ಲ. ಅದು ಸ್ತ್ರೀಯರ ದೇಹಧರ್ಮವಾದ್ದರಿಂದ ಆ ಸಮಯ ದಲ್ಲಿ ಅವರಿಗೆ ನಿತ್ರಾಣವೆನಿಸಬಾರದು; ಯಾವ ವಿಧದ ನೋವೂ ಶೂಲೆಗಳೂ ಇರಬಾರದು. ಹಾಗಿದ್ದ ಪಕ್ಷದಲ್ಲಿ ಅದು ರೋಗವೆಂದರಿತು ಅದಕ್ಕೆ ಯೋಗ್ಯ ವಾದ ಉಪಾಯವನ್ನು ಕೂಡಲೆ ಮಾಡ ಬೇಕು. (ರಜಸ್ರಾವವು ನಿಲ್ಲದೆ ಸಂಭೋಗವನ್ನು ಮಾಡಬಾರದು ನಿಂತಮೇಲೆ ಕೂಡ ೨-೩ ದಿನ ವಿಶ್ರಾಂತಿ ಯನ್ನು ಕೊಡುವದು ಒಳ್ಳೆದು. ಮುಟ್ಟಾಗುವ ಮೊದಲೇ ಅಧೋರೋಮ (Pubic hair) ಗಳನ್ನು ತೆಗೆದಿರಬೇಕು. ಇಲ್ಲದಿದ್ದರೆ ಅದಕ್ಕೆ ರಜಕ್ಕೂ, ಲ೦ಗೋಟಿಯ ಹತ್ತಿಕೊಂಡು ಬಿಡಿಸಿಕೊಳ್ಳುವಾಗ ಬಹಳ ನೋವಾಗುವದು. ಅದಕ್ಕೆ ಉಪಾಯವನ್ನು ಪುಸ್ತಕದ ಕೊನೆಯ ಭಾಗದಲ್ಲಿ ನೋಡಿರಿ. - ೧೦ನೇ ಪ್ರಶ್ನೆ :-ಮುಟ್ಟಾದಾಗ ಮೈಲಿಗೆ ಇದೆಯೇ? ಆಗ ಹೊರಗೆ ಕೂತುಕೊಳ್ಳಬೇಕೆ ? ಉತ್ತರ:-ಮುಟ್ಟೆಂದರೇನು ಎಂಬುದನ್ನು ತಿಳಕೊಂಡಮೇಲೆ ಈ ಪ್ರಶ್ನೆಯೇ ಅಬದ್ಧವೆನಿಸುವದು. 'ಮುಟ್ಟ೦ಬುದು ರೋಗವಲ್ಲ; ಸ್ತ್ರೀಯರ ದೇಹಧರ್ಮ'ವೆಂದು ಹಿಂದೆ ಹೇಳಿದೆ. ಒಂದುವೇಳೆ ರೋಗವೆಂದೇ ತಿಳಿದರೆ, ಮೈಲಿಗೆಯ ಭಾವನೆಗೆ ಕಾರಣವೇನು ? ಕಾಲರಾ, ಸೈಗು ರೋಗಿಗಳನ್ನು ನಾವು ದೂರವಿಡುವದಿಲ್ಲವೋ ? ಎಂದು ಕೇಳಬಹುದು. ಹೌದು; ಆದರೆ ಅವು ಸಾಂಕ್ರಾಮಿಕ ಆಂದರೆ ಒಬ್ಬರಿಂದ ಒಬ್ಬರಿಗೆ ಹರಡಿತ ರೋಗಗಳು. ಹಾಗೆ ಒಂದು ಮನೆಯಲ್ಲಿ ಒಬ್ಬಳು ಮುಟ್ಟಾದರೆ ಎಲ್ಲ ಹೆಂಗಸರೂ ಮುಟ್ಟಾ ಗುವರೋ ? ಕಾಲರಾ, ಪ್ಲೇಗುಗಳಲ್ಲಿ ಕೂಡ ಡಾಕ್ಟರರು, ವೈದ್ಯರು ರೋಗಿ ಗಳನ್ನು ಮುಟ್ಟಿದರೂ ಅವರಿಗೇಕ ರೋಗ ಬರುವದಿಲ್ಲ ? ಮೈಲಿಗೆಯೆಂದು