ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆದರೆ ಆ ವಿವೇಚನೆಯು ಯಾರಿಗೆ ? ಸತ್ಯವನ್ನು ಶೋಧಿಸಿ ಆಚರಿಸ ಲೆತ್ನಿಸುವವರಿಗೆ, ವಿವೇಕರಹಿತ ಗೊಡ್ಡು ಆಚಾರಗಳನ್ನು ( ಬಿಟ್ಟರೆ ಕೆಟ್ಟ ವ್ರ' ಎಂಬ ಕುರುಡುನಂಬಿಕೆಯಿಂದ, ಎದೆಗವಚಿಕೊಂಡೇ ಕೆಡುವವರಿಗೆ, ನಮ್ಮ ವಿವೇಚನೆಯು ಧರ್ಮಲಂಡರ ಬೊಗಳಿಕೆ ಎನಿಸುವದು. ಮುಟ್ಟಾದ ಹೆಂಗ ಸೆಂದರೆ ಹೊಲೆಯರಿಗಿಂತ ಕಡೆಯಂತೆ ಈ ಧರ್ಮಮೂಢರಿಗೆ; ಅವರ ನೆರಳು ಬಿದ್ದರೆ ಮಕ್ಕಳಿಗೆ ಜ್ವರಬರುತ್ತದಂತೆ. ಅಕಟಾ ! ಧರ್ಮದ ಹೆಸರಿನಲ್ಲಿ ಮುಟ್ಟಾದ ಹೆಂಗಸರಿಗೆ ವೇಳೆಗೆ ಸರಿಯಾಗಿ ಕೂಳುಹಾಕದೆ, ಕಟ್ಟೆಯ ಮೇಲೋ ದನದ ಕೊಟ್ಟಿಗೆಯಲ್ಲೇ, ಜವಳು ನೆಲದ ಕತ್ತಲಕೋಣೆಯಲ್ಲೇ ಮಲಗಗೊಟ್ಟು ವರ್ಷವರ್ಷಕ್ಕೂ ಲಕ್ಷಾವಧಿ ಹೆಂಗಸರನ್ನು ನಾನಾರೋಗ ಗಳಿಗೆ ಬಲಿಗೊಡುತ್ತಿರುವರಲ್ಲ ! ಇ೦ಥ ಯಾವ ಮತಾಚರಣೆಯೂ ಇಲ್ಲದ ವಿದೇಶಿಯರು ಸಹಸ್ರಾರು ಮೈಲು ದೂರದಿಂದ ಬಂದು ನಮ್ಮನ್ನು ಆಳಿ ತುಳಿದು ಅರೆಯುತ್ತಿರುವರು; ಅದೀಗ ನಮ್ಮ ಧರ್ಮ ಭಕ್ತಿಗೆ ಸಿಕ್ಕ ಪ್ರಸಾದ. ಮಿಕ್ಕ ಸಮಯದಲ್ಲಿ ಕಾಮವಾಸನೆಯಿಂದ ಅವರ ಸುತ್ತು ಮುತ್ತು ಮುಗಿ ಬೀಳುವ ಗಂಡಂದಿರು, ಮುಟ್ಟಾದ ಹೆಂಡಂದಿರು ಜೀವದಿಂದಿರುವರೋ ಹೇಗೆ ಎಂಬುದನ್ನು ಕೇಳುವವರು ಕೂಡ ಅಪರೂಪ. ವಸ್ತುತಃ ಮುಟ್ಟಾ ದಾಗ ಅವರಿಗೆ ಚೆನ್ನಾಗಿ ಗಾಳಿ ಬೆಳಕು ಬರುವ ಬೆಚ್ಚಗಿನ ಕೋಣೆಯನ್ನು ಕೊಟ್ಟು ಹೊತ್ತಿಗೆ ಸರಿಯಾಗಿ ಆಹಾರವನ್ನಿತ್ತು ಸುಖೋಪಚಾರಗಳನ್ನು ಮಾಡಬೇಕು. ಅವರಿಗೆ ರೋಲಿಯರೆನ್ನುವದಕ್ಕಿ೦ತ, ಅವರ ಯೋಗಕ್ಷೇಮ ವನ್ನು ಶಾಸ್ತ್ರೀಯವಾಗಿ ಮಾಡುವ ಜ್ಞಾನವಿಲ್ಲದ, ಜ್ಞಾನವಿದ್ದರೂ ಅಂಧ ಶ್ರದ್ದೆಯ ಉರುಲು ಹಾಕಿ ಬಂದಿರುವ ಹೇಡಿಗಳಿಗೇ ಆ ನಾಮಧೇಯವು ಸಲ್ಲುವದೆಂದರೆ ಹೆಚ್ಚು ಕಟೂಕ್ತಿಯಾಗದು. ಏಕೆಂದರೆ ಜ್ಞಾನವುಳ್ಳವನೇ ಜಾತಿವಂತನು; ಮತ್ತು ಜ್ಞಾನದ ಇರುವಿಕೆಯು ವಿವೇಕಸಮ್ಮತ ಕರ್ಮದಲ್ಲಿ ಕಂಡುಬರಬೇಕಲ್ಲದೆ ಇನ್ನೆಲ್ಲಿ ? ವಾಚಕರೇ ಮುಟ್ಟಿನ ನಿಜಸ್ಥಿತಿಯನ್ನು ತಿಳಿದಮೇಲಾದರೂ, ನಿಮ್ಮ ಮನೆಯಲ್ಲಿಯೂ, ನಿಮ್ಮ ಮಿತ್ರ ಬಂಧುಗಳ ಮನೆಯಲ್ಲಿಯೂ, ಧರ್ಮದ ಹೆಸರಿ ನಲ್ಲಿ ಮೆರೆಯುವ ಹುಚ್ಚು ಆಚಾರಹಿಂಸೆಗಳನ್ನು ನಿಲ್ಲಿಸಿ ನಿಮ್ಮ ಅಕ್ಕ ತಂಗಿ