ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ೧೩ನೇ ಪ್ರಶ್ನೆ :- ನಪುಂಸಕತೆಗೆ ಕಾರಣವೇನು ? ಅದನ್ನು ನಿವಾರಗೊಳಿಸಲು ಉಪಾಯವೇನು ? ಉತ್ತರ:-ನಪುಂಸಕತೆಯಂದರೆ ಲಿಂಗವು ಉದ್ರೇಕವಾಗದಿರುವದು; ಉದ್ರಿಕ್ತವಾದರೂ ಬೇಗ ಸಣ್ಣದಾಗಿಬಿಡುವದು. ಅದಕ್ಕೆ ಕಾರಣಗಳು(೧) ಮುಷ್ಟಿಮೈಥುನ ಮೊದಲಾದ ಅಯೋಗ್ಯಾಭ್ಯಾಸಗಳಿಂದ ಲಿಂಗದ ಸ್ನಾಯುಗಳೆಲ್ಲ ದುರ್ಬಲವಾಗುವದರಿಂದ ಅದು ಉದ್ರೇಕಗೊಳ್ಳುವದಿಲ್ಲ. (೨) ಒಂದುವೇಳೆ ಉದ್ರೇಕವಾದರೂ, ಅದರ ಬಲವು ಯೋನಿಯ ಸಂಕೋ ಚವನ್ನು ವಿರೋಧಿಸಿ ತನ್ನ ಉದ್ರೇಕವನ್ನು ಹೆಚ್ಚು ಹೊತ್ತು ಇಟ್ಟು ಕೊಳ್ಳ, ಲಿಕ್ಕೆ ಆಗದಿರುವದು. (೩) ಚಿಂತಾ, ಶೋಕ, ಭಯ ಮೊದಲಾದ ಭಾವ ಗಳು ಮನವನ್ನಾಳುತ್ತಿರುವಾಗ ಸಂಭೋಗವನ್ನು ಆರಂಭಿಸಿದರೆ ಲಕ್ಷವು ಬೇರೆಕಡೆಗೆ ಹೋಗಿ ಉದ್ರಿಕೈಲಿಂಗವು ಕೂಡಲೆ ಸಣ್ಣದಾಗಿಬಿಡುವದು. (೪) ವಸ್ತುತಃ ಸಂಭೋಗವನ್ನು ವೀರ್ಯಾಶಯವು ತುಂಬಿಕೊಳ್ಳದೆ ಆರಂ ಭಿಸುವದು ಪ್ರಕೃತಿಗೆ ವಿರುದ್ಧ, ವೀರ್ಯಾಶಯವು ತು೦ಬಿರದಿದ್ದರೆ ಲಿಂಗವು ಸಾಕಷ್ಟು ಬಲವಾಗಿ ಉದ್ರಿಕ್ತವಾಗದು; ಅದು ತುಂಬಿದಾಗ ಹುಟ್ಟಿದ ನೈಜ ವಾದ ಉದ್ರೇಕವೂ ಜ್ಞಾತವಾಗಿ ತನ್ನ ಮನದ ಉತ್ತೇಜನವೂ ಸಿಕ್ಕರೆ ಉದ್ರಿಕ್ತವಾದ ಲಿಂಗವು ವೀರ್ಯಸ್ಕಲನವಾಗದ ಸಂಭೋಗದಲ್ಲಿ ಸಣ್ಣ ದಾಗದು, (೫) ಪ್ರಥಮ ಸಮಾಗಮದಲ್ಲಿ ಮನದ ಅತಿ ಉದ್ವೇಗದಿಂದ ಸ್ತ್ರೀಯನ್ನು ಮುಟ್ಟಿದ ಕೂಡಲೆ ಸ್ವಲನವಾಗುವದುಂಟು. ಆದರೆ ಅದು ರೋಗವಲ್ಲ. (೬) ಹುಟ್ಟಿದಾಗಿನಿಂದ ಅ೦ಡ ಮತ್ತು ವೀರ್ಯಜನಕಾಂಗಗಳ ದೋಷದಿಂದ ಕೆಲವರಲ್ಲಿ ಸಹಜ ನಪುಂಸಕತೆಯೂ ಇರುತ್ತದೆ. ಇದರ ಮೇಲೆ ಯಾವ ಔಷಧವೂ ನಡೆಯಲಾರದು. ಇದರಲ್ಲಿ ಚಿಂತಾ, ಶೋಕ, ಭಯದಿಂದ ಹುಟ್ಟಿದ ನಪುಂಸಕತೆಯೂ, ಪ್ರಥಮ ಸಮಾಗಮದ ನಪುಂಸಕತೆಯೂ ರೋಗಗಳಲ್ಲ, ಅವುಗಳನ್ನೇ ಮನ ಗೆ ಹಚ್ಚಿಕೊಂಡು ಕೆಲವು ತರುಣರು ಬಹಳವಾಗಿ ಕೊರಗುವರು. ಅದಕ್ಕೆ ತಮ್ಮ ನಪುಂಸಕತೆ ಹೇಗೆ ಹುಟ್ಟಿ ತೆಂಬುದನ್ನು ತಾವೇ ಶಾಂತವಾಗಿ ಯೋಚಿಸಿ ತಮ್ಮ ಮನವನ್ನು ತಿದ್ದಿ ಕೊಂಡು ಬಿಟ್ಟರೆ ಅವರಿಗೆ ಸುಖವಾಗುವದರಲ್ಲಿ