________________
೨೬ `ಪ್ರೇಕವಾದಾಗಲೆಲ್ಲ ಕಾಮಲೀಲೆಯಲ್ಲಿ ತೊಡಗುವದು ಯೋಗ್ಯವಲ್ಲ. ಆದ ರಿಂದ ಮೂತ್ರಾಯದ ಎಷ್ಟೋ ರೋಗಗಳು ಹುಟ್ಟುತ್ತವೆ. ಅಕಾಲದಲ್ಲಿ ಉದ್ರೇಕವಾಗುವದಕ್ಕೆ ಯೋಗ್ಯ, ಕಾರಣವನ್ನು ನಿವಾರಿಸುವ ಚಿಕಿತ್ಸೆ ಯನ್ನು ಕೂಡಲೆ ಮಾಡಿಕೊಳ್ಳಬೇಕು. ವೀರ್ಯಾಶಯವು ತುಂಬಿ, ರಾತ್ರಿ ಮನವು ಶಾಂತವಾಗಿದ್ದಾಗ, ಅಜ್ಞಾತವಾಗಿ ಕಾಮಕೇಂದ್ರದ ನರವನ್ನು ಉದ್ರೇಕಿಸಿ, ವಿವಿಧ ಸ್ವಪ್ನವನ್ನು ಹುಟ್ಟಿಸಿ ಲಿಂಗೋದ್ರೇಕವಾಗುವದು. ಅದು ಬೇಕಾದರೆ ಕಾಮಲೀಲೆಗೆ ಯೋಗ್ಯವಾದ ಸಮಯವೆಂದು ಹೇಳ ಬಹುದು. ೧೫ನೇ ಪ್ರಶ್ನೆ :-ಮಲಮೂತ್ರ ವಿಸರ್ಜನ ಸಮಯದಲ್ಲಿ ವೀರ್ಯಸ್ಕಲನವಾಗುವದು ರೋಗವೋ ? ಉತ್ತರ :- ಅದಕ್ಕೆ ಎರಡು ಕಾರಣಗಳಿರುವವು-(೧) ಮೊದಲು ಹೇಳಿದಂತೆ ವೀರ್ಯಾಶಯವು ತುಂಬಿದಮೇಲೂ ಸಂಭೋಗವನ್ನಾಚರಿಸ ದಿದ್ದರೆ, ಸ್ವಪ್ನ ಸ್ಟಲನವಾಗದಿದ್ದರೆ ಮೂತ್ರವಿಸರ್ಜನ ಕಾಲದಲ್ಲಿ ವೀರ್ಯವು ಹರಿದುಬರಬಹುದು. (೨) ದೊಡ್ಡ ಕರಳಿನ ಕೊನೆಯ ಭಾಗದಲ್ಲಿ ಮೂಲ ಬದ್ಧತೆಯಿಂದ, ಗಟ್ಟಿಯಾದ ಮಲವು ಸಂಚಿತವಾಗಿ ವೀರ್ಯಾಶಯವನ್ನು ಒತ್ತುವದರಿಂದ ವೀರ್ಯವು ಬರಬಹುದು. ಆದರೆ ಇವೆರಡು ಕಾರಣ ಗಳಲ್ಲಿಯೂ, ಮಲಮೂತ್ರಗಳನ್ನು ವಿಸರ್ಜಿಸುವಾಗ, ತಿಣಿಕಿದರೆ ಮಾತ್ರ (Straining) ವೀರ್ಯವು ಹೊರಗೆ ಬರುವದು. ಆದ್ದರಿಂದ ತಿಣಿಕವಿದ್ದರೂ, ಮಲಮೂತ್ರ ವಿಸರ್ಜನೆಗೆ ಕೂತ ಕೂಡಲೆ ವೀರ್ಯವು ತನ್ನಷ್ಟಕ್ಕೆ ತಾನೇ ಹರಿದು ಹೊರಗೆ ಬರುತ್ತಿದ್ದರೆ ಅದು ರೋಗವೆಂದು ತಿಳಿಯಬೇಕು. ಮತ್ತು ಸ್ವಪ್ನ ಸ್ಥಲನವೂ ಆಗುತ್ತಿದ್ದರೂ ಅಥವಾ ಸಂಭೋಗವನ್ನೂ ಮಾಡುತ್ತಿದ್ದರೂ, ಮಲಶುದ್ದಿಯು ಸರಿಯಾಗಿ ಆಗುತ್ತಿದ್ದರೂ ಮೇಲೆ ಹೇಳಿದಂತೆ ವೀರ್ಯವು ಹರಿದು ಬರುತ್ತಿದ್ದರೆ ಅದೂ ರೋಗವೆಂದರಿತು ಚಿಕಿತ್ಸೆ ಮಾಡಬೇಕು. ೧೬ನೇ ಪ್ರಶ್ನೆ :-ನೀರ್ಯಸ್ತಂಭಕ ಹಾಗೂ ವಾಜೀಕರಣ ಔಷಧಗಳನ್ನು ಉಪಯೋಗಿಸಬಹುದೋ ? ಉಪಯೋಗಿಸಬಹು