ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಕಾಶಕರ ಮುನ್ನುಡಿ ದೇಹದ ವ್ಯಾಪಾರಗಳು ಸಾಮಾನ್ಯವಾಗಿ ಮಾನವ ಸಮಾಜದಲ್ಲಿ ಹಿಂದುಮುಂದಿಲ್ಲದೆ ನಡೆಯುತ್ತವೆ. ಅವುಗಳಿರುವದರ ಕಾರಣವೇನು ; ಅವು ಗಳನ್ನು ನಡೆಸುವ ಅಂಗಗಳ ರಚನೆಯು ಹೇಗಿದೆ ; ಅವುಗಳ ಉಪಯೋಗ ಗಳಾವವು, ವಿಲೋಭನೆಗಳಾವವು, ಉದ್ದೇಶಗಳಾವವು; ಅವುಗಳ ಭೋಗ ದಿಂದಾಗುವ ಇಷ್ಟನಷ್ಟಗಳಾವವು ; ಭೋಗದ ರೀತಿನೀತಿಗಳಾವವು ; ವ್ಯಕ್ತಿ ಗೂ ಸಮಾಜಕ್ಕೂ ಇವುಗಳ ಭೋಗತ್ಯಾಗಗಳಿಂದಾಗುವ ಹಿತಾಹಿತಗಳಾ ವವು ?-ಎಂಬ ವಿಷಯಗಳ ಕಡೆಗೆ ಎಲ್ಲಿ ಮನಸ್ಸು ಹರಿದು ವಿಚಾರಿಸುವ ದಿಲ್ಲವೋ, ಅಲ್ಲಿ ಅವನತಿಯು ತಪ್ಪಿದ್ದೇ ಅಲ್ಲ ಎಂದು ನಿಶ್ಚಯವಾಗಿ ಹೇಳ ಬಹುದು. ಈ ಪ್ರಶ್ನೆಗಳನ್ನು ಬಿಡಿಸುವದೇ ಈ ಚಿಕ್ಕ ಪುಸ್ತಕದ ಪ್ರಯತ್ನ. ಇದನ್ನು ನಮ್ಮ ಸಂಘಕ್ಕೆ ಬರೆದುಕೊಟ್ಟಿದ್ದಕ್ಕಾಗಿ ಆಯುರ್ವೇದ ವಿದ್ವಾನ್ ಶ್ರೀ ಗೋಪಾಲಕೃಷ್ಣರಿಗೆ ಆಭಾರಿಯಾಗಿದ್ದೇವೆ.