ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫ ಅಕಾಲದಲ್ಲಿಯೂ ಅತಿಯಾಗಿಯೂ ಉ೦ಡರೆ ಆಜಿ'ರ್ಣವಾಗುವದೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಅಜೀರ್ಣದ ಕಾರಣವು ಗೊತ್ತಿದೆಯೆಂದು ಅದಕ್ಕೆ ಔಷಧಗಳನ್ನು ಹುಡುಕದೆ ಬಿಟ್ಟಿಲ್ಲ. ಜನರು ಆಹಾರ ನಿಯಮವನ್ನೆ ಖಾರಿಬಿಟ್ಟಾರು ಎಂಬ ಭಯದಿಂದ, ಅಜೀರ್ಣ ನಿವಾರಣೆಗೆ ಉಪಾಯಗಳನ್ನು ಹುಡುಕಿ ತೆಗೆಯದಿದ್ದರೆ, ಇಂದು ಬೇಗ ಗುಣ ಪಡಿಸಬಹುದಾದ ಅಜೀರ್ಣವು, ಚಿಕಿತ್ಸೆಯಿಲ್ಲದೆ ಮಹಾರೋಗಗಳ ರೂಪ ವನ್ನು ತಾಳಿಬಿಡಬಹುದಿತ್ತು. ಇದೇ ವಿಮರ್ಶೆಯನ್ನು ಸಂತಾನನಿರೋಧದ ಕಡೆಗೆ ಹೊರಳಿಸಿದರೆ, ಅದಕ್ಕೆ ಯಾರೂ ವಿವೇಕದಿಂದ ವಿರೋಧಿಸಲಿಕ್ಕೆ ಸಾಧ್ಯವೇ ಇಲ್ಲ; ಮತ್ತು ವಿವೇಕವಿಲ್ಲದ ವಿರೋಧವು ಒ೦ದು ದಿನ ಕಾಲ ಸಾಗರದಲ್ಲಿ ಗುಟುಕರಿಸಿ ಸಾಯಲೇಬೇಕು. ಯಾವದೇ ಒಂದು ವಸ್ತುವಿನ ದುರುಪಯೋಗಕ್ಕೆ ಅದನ್ನು ಉಪಯೋ ಗಿಸುವ ವ್ಯಕ್ತಿಯ ಕುಕೃತ ಬುದ್ದಿಯೇ ಕಾರಣ. ಆದ್ದರಿಂದ ವಸ್ತುವಿನ ಪ್ರಚಾರದ ಸಂಗಡ ಬುದ್ದಿಯನ್ನು ತಿದ್ದುವ ವಿಚಾರವೂ ನಡೆಯಬೇಕು. ಮತ್ತು ಆ ವಸ್ತುವಿನ ಅಗತ್ಯವು ಅನೈಸರ್ಗಿಕ ಕಾರಣಗಳಿಂದ ಹುಟ್ಟಿದ್ದರೆ ಆ ಕಾರಣಗಳನ್ನು ಕಿತ್ತೊಗೆಯಲೆತ್ನಿಸಬೇಕು. ಆದರೆ ಕಾರಣಗಳು ನಾಶ ವಾಗುವವರೆಗೆ ಅವುಗಳ ಪರಿಣಾಮಗಳನ್ನು ಸಹಿಸುತ್ತಿರುವದು ಮಾನವ್ಯದ ಲಕ್ಷಣವಲ್ಲ. ಆದ್ದರಿಂದ ಸಂತಾನನಿರೋಧದ ಅನೈಸರ್ಗಿಕ ಮೂಲ ಕಾರಣ ಗಳನ್ನೂ ಕಿತ್ತೊಗೆಯಬೇಕು. ಅವುಗಳಿಂದ ಈಗಾಗಲೆ ಆಗಿರುವ ದುಷ್ಪರಿ ಸಾಮಗಳನ್ನೂ ನಿವಾರಿಸಬೇಕು. ಮತ್ತು ಅದರ ದುರುಪಯೋಗವಾಗ ದಂತೆ ಜನತೆಗೆ ಯೋಗ್ಯ ಶಿಕ್ಷಣವನ್ನೂ ಕೊಡಬೇಕು, ಇನ್ನು ಸಂತಾನನಿರೋಧವು ಯಾವಾಗ ಅವಶ್ಯವೆನಿಸುವದೆಂದರೆ:(೧) ಸ್ತ್ರೀಯು ಸ್ವಾಭಾವಿಕವಾಗಿಯಾಗಲಿ, ರೋಗದ ಮೂಲಕವಾಗಿಯಾ ಗಲಿ, ಗರ್ಭವನ್ನು ಧರಿಸಲಿಕ್ಕೂ, ಅದನ್ನು ಪೋಷಿಸಲಿಕ್ಕೂ ಸಾಕಷ್ಟು ಶಕ್ತಿ ಇಲ್ಲದಿರುವಾಗ, (೨) ಒಂದು ಮಗುವನ್ನು ಹೆತ್ತು ಪುನಃ ತೀರ ಕಡಿಮೆ ಯೆಂದರೆ ಎರಡು ವರ್ಷಗಳವರೆಗೆ ಮತ್ತೊಂದು ಮಗುವನ್ನು ಆರೋಗ್ಯವಾ ಗಿಯೂ ಶಕ್ತಿಯುಕ್ತವಾಗಿಯೂ ಪೋಷಿಸಲು ಗರ್ಭಕೋಶಕ್ಕೆ ಶಕ್ತಿ ಸಾಲದು. ಆದರೆ ಎರಡುವರ್ಷಗಳವರೆಗೆ ಸ್ತ್ರೀ ಪುರುಷರು ಸಂಭೋಗದಿಂದ ದೂರ ಇರ