ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಿಕಿತ್ಸಾ ಭಾಗ ಕೆಳಗೆ ಬರೆದ ಔಷಧಗಳು ಯಾವ ಕಾರಣದಿಂದಲೇ ಆಗಲಿ ಉಂಟಾದ ವೀರ್ಯದೋಷಗಳನ್ನು ಹೋಗಲಾಡಿಸುವವು. ಈ ಔಷಧಗಳನ್ನು ತೆಗೆದು ಕೂಳುತ್ತಿರುವಾಗ, ಉಪ್ಪು, ಹುಳಿ, ಖಾರಗಳನ್ನು ಕಡಿಮೆ ಮಾಡುವದು ಒಳ್ಳೆದು. ಇಲ್ಲದಿದ್ದರೆ ಔಷಧಗಳ ಪರಿಣಾಮವು ತೃಪ್ತಿಕರವಾಗಿ ಸಿಕ್ಕಲಿ ಕ್ಕಿಲ್ಲ. ಇದರಲ್ಲಿ ಕೆಲವು ಸಿದ್ದವಾದ ಔಷಧಗಳನ್ನು ಸೂಚಿಸಿದೆ. ಅವು 'ಪ್ರೇಮ ಚಿಕಿತ್ಸಾ ಸೇವೆ, ಪೋಸ್ಟ್ ತುಂಗಭದ್ರಾ' ಈ ವಿಳಾಸಕ್ಕೆ ಬರೆದರೆ ಸುಲಭ ಕ್ರಯಕ್ಕೆ ಸಿಕ್ಕ ಬಹುದು. ವೀರ್ಯದೋಷ:-ಇದಕ್ಕೆ (೧) ಅಜೀರ್ಣವು ಕಾರಣವಾಗಿದ್ದರೆ ಹಿಂಗು--ಜೀರಿಗೆ-- ಕರಿಜೀರಿಗೆ-ಸೈಂಧವಲವಣ-ಅಜವಾನ-ಶುಂಠಿ-ಹಿಪ್ಪಲಿಮೆಣಸು ಇಮ್ಮನ್ನು ಸಮಭಾಗ ತೆಗೆದುಕೊಳ್ಳಬೇಕು. ಹಿಂಗನ್ನು ಮೊದಲು ತುಪ್ಪದಲ್ಲಿ ಕಂಪಾಗುವವರೆಗೆ ಹುರಿಯಬೇಕು. ನಂತರ ಉಳಿದವುಗಳೊಡನೆ ಸೇರಿಸಿ ಪುಡಿ ಮಾಡಬೇಕು. ಇದಕ್ಕೆ ಹಿಂಗ್ಯಾಷ್ಟಕಚೂರ್ಣವೆಂದು ಹೆಸರು. ಇದನ್ನು ದಿನಾಲು ಊಟದಲ್ಲಿ ಮೊದಲನೆ ಅನ್ನದ ತುತ್ತಿನಲ್ಲಿ ೧/೮ ರಿಂದ೧/೪ ತೊಲೆಯವರೆಗೆ, ತುಪ್ಪದೊಡನೆ ಸೇರಿಸಿ ತಿನ್ನಬೇಕು. ಇದರಿಂದ ಅಜೀ ರ್ಣವು ಗುಣವಾಗುವದಲ್ಲದೆ, ಮಲಬದ್ಧತೆ, ಹೊಟ್ಟೆಶೂಲೆ, ಆಮ್ಲಪಿತ್ತ (ಎದೆ ಯಲ್ಲಿ ಹುಳಿ ಸುಡುವದು) ಮೊದಲಾದ ರೋಗಗಳೂ ಗುಣವಾಗುವವು. ಪ್ರತಿ ಯೊಬ್ಬರ ಮನೆಯಲ್ಲಿ ಯಾವಾಗಲೂ ಸಿದ್ಧವಾಗಿರಬೇಕಾದ ಔಷಧವಿದು. (೨) ಮಲಬದ್ಧತೆಯು ಹೊರಕಡೆಗೆ ಅಥವಾ ಶೌಚಕ್ಕೆ ಸರಿಯಾಗಿ ಆಗದಿರುವದು) ಕಾರಣವಾಗಿದ್ದರೆ:-(ಅ) ರಾತ್ರಿ ಮಲಗುವಾಗ ಒಂದು ಪಾವು ಬಿಸಿ ಆಕಳ ಹಾಲಿನಲ್ಲಿ ಸುಮಾರು ೩ ತೋಲಾ ಆಕಳ ತುಪ್ಪವನ್ನು ಹಾಕಿ ಕುಡಿಯಬೇಕು. (ಆ) ತೆಂಗಿನ ಕಾಯಿಯನ್ನು ಹೆರೆದು (ತುರಿದು) ಒಂದು ಬಟ್ಟೆಯಲ್ಲಿ ಹಾಕಿ ಹಿಂಡಿದರೆ ಹಾಲು ಬರುವದಷ್ಟೆ, ಅದನ್ನು ಸುಮಾರು ೫ ತೋಲೆಯಷ್ಟು ದಿನಾಲು ಬೆಳಿಗ್ಗೆ ಕುಡಿಯಬೇಕು. ಇದರಿಂದ ಭೇದಿಯ ಸರಿಯಾಗಿ ಆಗುವದಲ್ಲದೆ ಅದು ಪುಕಾರಕ ಆಹಾರವೂ ಆಗಿದೆ. (ಇ) ಅಳಲೆ ಕಾಯಿಯ ಸಿಪ್ಪೆ ೩ ತೊಲಾ ಪುಡಿಮಾಡಿ ಒಂದು ಪಾವು ನೀರಿನಲ್ಲಿ ಹಾಕಿಡಬೇಕು. ೩ ಘಂಟೆಯಾದಮೇಲೆ ಆ ನೀರನ್ನು