ರುಹಿದ, ಮುಂಚಿನಜನ ಪಂಚರೂಪಗಳಲ್ಲಿ ಮನೆಮಾಡಿಕೊಂಡಿ
ರುವ, ಪಂಚಾಶರಣ ವಾಚ್ಯ, ಪಂಚಮೂರುತಿಯ ಪದ
ಗಳಿಗೆ ಅರ್ಪಿಸಿರಲು; ಈ ಪಂಚಪುಷ್ಪಗಳಿಂದ ಪೊರಮಟ್ಟ,
ಪ್ರಕೃಷ್ಟ ಪರಿಮಳವೆಂಬ, ಪಂಚಾಮೃತವನ್ನು, ಪಂಚಶರನನ್ನು
ಗೆಲಿದ, ಪಂಚವದನನೈಯ್ಯನಲ್ಲಿ ವಿರಾಜಿಸುವ, ಪಂಚಾಶ್ಯವದ
ನನ ನಿಷ್ಕಿ೦ಚನ ಭಕ್ತರೇ ಪಾನಮಾಡಿರುವರಲ್ಲದೆ, ಪ್ರಪಂಚ
ವನ್ನವಲಂಬಿಸಿದವರಿಗೆ, ಈ ಪಂಚಾಮೃತವು, ರುಚಿಸಲಿಲ್ಲ
ವೆಂಬುದು ಸಿದ್ಧವಾದದ್ದು. ಆದರೂ, ಸತ್ಪುರುಷರ ಸುಕವನ
ಗಳೆಂಬ ಸುಮನಸದಲ್ಲಿರುವ, ಪಂಚಾಮೃತದ ಸೇವನೆಯಿಂದ
ಪಂಚೇಂದ್ರಿಯಗಳಿಗೆ ಪುಷ್ಟಿಯನ್ನೂ ಆನಂದವನ್ನೂ ಉಂಟು
ಮಾಡುತ್ತ, ಮಾಡುತ್ತ, ಪ್ರಬಲತಮವಾದ, ಪ್ರಪಂಚಾಬ್ಧಿಯಲ್ಲಿ
ಮುಳುಗಿ, ಕೃಶವಾದ ದುರ್ಬಲ ಮನಸ್ಸಿಗೆ, ಪರಮಾತ್ಮನ
ಪಾದಾರವಿಂದದಲ್ಲಿ ಕ್ರಮೇಣವಾಗಿ ಭಕ್ತಿಯಂಬುವ, ಅಭಿ
ರುಚಿಯನ್ನುಂಟುಮಾಡುವದು ಇದರ ನೈಜಗುಣವು. ಇಂತು,
ಪಂಚಾಮೃತದ ಗುಣವಾದರೂ, ಅಧಿಷ್ಟಾನವನ್ನವಲಂಬಿಸಿ
ಯೇ ತರತಮದಿಂದ ವ್ಯಕಾವ್ಯಕ್ತವಾಗುವದು. ಇಂತಹ
ಅಮೃತಪೂರಿತವಾದ ಪುಷ್ಪಗಳು ಸರಿಯಾಗಿ ಒಂದೇ ಜಾತಿಯ
ಸುಮನಸಗಳಿದ್ದರೂ (ಶ್ರೀಪ್ರಾಣೇಶ ವಿಠಲರ ಕೀರ್ತನಗಳೆಂಬ)
ಪಂಚಮ ಪುಷ್ಪವು ಮಾತ್ರ ಅನೇಕ ವರ್ಣಗಳಿಂದಲೂ ದಳ
ಗಳಿಂದಲೂ, ಸುಶೋಭಿತವಾಗಿ ಅದರ, ಸುಗಂಧಮಕರಂದವು
ಸರ್ವ ದೇಶದಲ್ಲಿಯೂ ವ್ಯಾಪಿಸಿದ್ದಕ್ಕಾಗಿ, ಅನೇಕ ಭಗವದ್ಭಕ್ತ
ರುಗಳೆಂಬ ಷಟ್ಟದಗಳು ಅದರಲ್ಲಿದ್ದ ಅಮ್ಮತವನ್ನು ಸವಿಯ
ಪುಟ:ಕಾಳೀಸ್ವಯಂವರ.djvu/೯
ಈ ಪುಟವನ್ನು ಪರಿಶೀಲಿಸಲಾಗಿದೆ
--- ೨ ---