ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೀಖಂಡ ಕೇಳು ತಂಕಲಗಿಬಂದ ಅಗಸ್ತ್ರನು ವೃದ್ದಗಂಗಯಾಥ ಗೋದಾವರಿ ಯಲ್ಲಿ ನ್ಯಾಸವು ಮಾಡಿ ಈ ಕಾಶಿದುಂಬಿಟ್ಟ ಸಂತಾನವಂ ಬಿಡಲಿಲ್ಲ, ಬ ಡಗನಿಂದ ಬಂದ ಘಳಿಯನಾಲಿಂಗಿಸಿ ಕಾಶಿಯು ಚನ್ನಾಗಿದ್ದೀತೆ ಎಂದು ಕೇಳುವನು, ನಿಲ್ಲುತ್ತಲೂ, ಮೊರೆಯಿಡುತ್ತಲೂ ಸಾಡುತ್ತಲೂ ಎಡವು ತಲೂ, ಕುಳ್ಳಿರುತಲೂ, ನಾನಾಕಡೆಯಲ್ಲಿಯೂ ತಿರುಗುತ್ತಾ ತಪೋಧ ನನಾದ ಅಗಸ್ತ್ರನು ಶರತ್ಕಾಲದ ಚಂದ್ರನ ನೂರುಮುಡಿ ಕಾಂತಿಯುಳ್ಳ ಕೋಲಾಸುರನ ಸಂಹರಿಸಿದ ಕೊಲ್ಲಾಪುರದ ಲಕ್ಷ್ಮಿ ಯಂ ಕಂಡು ನನು ಸ್ವಾರವಂಮಾಡಿ ಸೋತವಂ ಮಾಡಲುವಕ ಮಿಸಿದನು, ಎಲೆ ಲೋ ಕಮಾತೆ ಕಮಲಾಕ್ಷಿ ವಿಷ್ಣುವಿನ ಹೃದಯದಲ್ಲಿಯ ಅಂಥಾಸಮುದ್ರರಾ ಜನ ಮಗಳಾದಂಥಾ ಕಮಲಗರ್ಭ ದಂತ ಕಾಂತಿವುಳ್ಳಂಥಾ ಲಕ್ಷ್ಮೀದೇ ವಿಯ ನಮಸ್ಕಾರ, ವಿಷ್ಣುವಿನಲ್ಲಿ ಲಕ್ಷ್ಮಿದೇವಿಯಾಗಿಯೂ, ಚಂರ್ದನಲ್ಲಿ ಕಾಲತಿಯಾಗಿಯೂ, ಸೂರನಲ್ಲಿ ಪ್ರಭೆಯಾಗಿಯೂ, ಇರುವಂಥಾ ನಿನಗೆ ನಮಸ್ಕಾರ, ಆದಿಶಕ್ತಿಯೇ ನೀನು ನಿನ್ನಿಂದ ಬ್ರಹ್ಮನು ಸ್ಮಗಕರ ನಾನು, ವಿಷ್ಣುವು ನಿನ್ನಿಂದಾ ಬಿಲಕನಾದನು, ನೀ ಬಿಟ್ಟ ಜಗನ ರುದ್ರನು ಸಂಹರಿಸುವನ್ನು ಉತ್ಪತ್ತಿ ಸ್ಥಿತಿಸಂಹಾರಗಳಿಗೆ ಕಾರಣಳೂ ನೀನು, ನಿನ್ನಿಂದ ನಿಷ್ಟು ಅಧಿಕಾರಿಯಾದನು, ನಿನ್ನ ಕಟಾಕ್ಷವುಳ್ಳ ವನೆ ಶೂರನು, ವಿವೇಕಿಯು ಗುಣವಂತನು, ಧನುವುಳ್ಳವನು ಮಾನ್ಯ ನು ಕುಲರವಕಲಾವಂತನು ಶುಚಿಯಾದವನ್ನು ಆನೆ ಕುದುರೆ, ಪುರುಷರು ೩ ಯರು ಮಕ್ಕಳು, ಮನೆ ಅನ್ನ, ರತ್ನ, ವಶು ಪಕ್ಷಿ, ಭೂಮಿ, ತೃಣ ಮೊದಲಾದ ವಸ್ತುಗಳಲ್ಲಿ ನೀನಿರಲಾಗಿಯೆ ರಮ್ಯವಾಗಿಹುದು, ನೀನು ಇಲ್ಲದೆ ಇದ್ದರೆ ಅಶುಚಿ ಅಲಕ್ಷ್ಮಿಯು, ಶ್ರೀವಿಷ್ಣು ವಿದ್ಯುನಿ ನವ, ಕಮಲೇ ಕಮಲಾಲಯೇ ಪದೆ ರಮ್ಮೆ ಅವತಕುಂಭಧಾರಿಣಿ, ಎಂದು ನಿತ್ಯವೂ ಪೂಜಿಸುವರ್ಗೆ ದುಃಖವೆತ್ತಣದೆಂದು ಸೊತ್ರವಂ ಮಾಡಿ ೩ ವುರುಷರೀರ್ವರು ಸಾಷ್ಟಾಂಗ ನಮಸ್ಕಾರವಂಮಾಡಲು ಏಳೆಅಗಸ್ಯ ಏಳು ಲೋಪಾಮುದ್ರೆ ನೀವು ಮಾಡಿದ ನಮುಸ್ಕಾರದಿಂ ದೆನಗೆ ಸಂತೋಷವಾಯಿತು ನಿಮಗೆ ಬೇಕಾದ ವರಗಳ ಬೇಡಿಕೊಳ್ಳಿರಿ