ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಮಿಂಚಿನಬಳ್ಳಿ ಸುದ್ದಿ ಬಂದಿತು. ಲಕ್ಷಣರಾಯರ ಗೆಳೆಯರಾದ ಬಾಳಾಸಾಹೇಬರು ಕೊಲ್ಲಾಪುರದ ದಿವಾಣರಿದ್ದರು. ಅಲ್ಲದೆ ಸ್ವತಃ ಛತ್ರಪತಿ ಶಾಹೂಮಹಾ ರಾಜರು ಕೂಡ ಲಕ್ಷ್ಮಣರಾಯರ ಬಗ್ಗೆ ಒಳ್ಳೆ ಅಭಿಪ್ರಾಯದವರಾಗಿದ್ದರು. ಅವರ ಲಾಭ ಪಡೆದು ಕೊಲ್ಲಾಪುರದಲ್ಲಿಯ ನೂರಾರು ಹಳೆಯ ತೋಫುಗಳನ್ನು ದೊರಕಿಸಿದರು, ವಾಡಿಯ ಸಬಾಂಗಣದಲ್ಲೆಲ್ಲ ತೋಫೇ ತೋಫು. “ಜಗತ್ತಿನಲ್ಲಿ ಶಾಂತತೆಯು ನೆಲೆಗೊಳ್ಳಬೇಕಾದರೆ, ಜಗತ್ತಿನಲ್ಲಿಯ ಕತ್ತಿಕಠಾರಿಗಳನ್ನೆಲ್ಲ ಕರಗಿಸಿ ಕುಡಗಳನ್ನು ಮಾಡಬೇಕು” ಎಂಬರ್ಥದ ಒಂದು ಇಂಗ್ಲೀಷ ವಚನವುಂಟು. ಈ ಸಂದೇಶವನ್ನು ಯಾರಾದರೂ ಕೃತಿಯಲ್ಲಿಳಿಸಿ ದ್ದರೆ ಅವರು ಲಕ್ಷ್ಮಣರಾಯರು, ಶತ್ರುಗಳ ಮೇಲೆ ಬೆಂಕಿಯ ಮಳೆಯನ್ನೇ ಸುರಿಸುವ ನೂರಾರು ತೋಪುಗಳನ್ನೊಡೆದು ಲಕ್ಷ್ಮಣರಾಯರು ಸಾವಿರಾರು ರಂಟೆಗಳನ್ನು ಮಾಡಿದರು. ಬಣ್ಣಗಳು ದೊರೆಯದಾದವು, ರಂಟೆಗಳಿಗೆ ಬಣ್ಣವನ್ನೆಂತು ಕೊಡ ಬೇಕೆಂಬ ಪ್ರಶ್ನೆಯು ಬಂದಿತು. ಆಗ ಲಕ್ಷಣರಾಯರು ಭಟ್ಟಿಯನ್ನು ಹಾಕಿ ಕ್ಯಾವೀ ಹಾಗು ಎಣ್ಣೆಗಳಿಂದ ಕ್ಯಾಪೀ ಬಣ್ಣವನ್ನೇ ಸಿದ್ದ ಮಾಡಿದರು, ರಂಟೆಗಳು ಜಟ್ಟಿಯಂತೆ ಕ್ಯಾವೀ ಬಣ್ಣದಿಂದ ಶೋಭಿಸಹತ್ತಿದವು.

  • ಕಲ್ಲಿದ್ದಲಿ ದೊರೆಯುವದು ಕಷ್ಟವಾಯಿತು. ಶಕ್ಯವಿದ್ದಷ್ಟು ಕಟ್ಟಿಗೆಯ ಇದ್ದಲಿಯ ಮೇಲೆಯೇ ಕೆಲಸ ಸಾಗಿಸಬೇಕೆಂಬ ವಿಚಾರದಿಂದ ಕೋರೆಗಾವದಿಂದ ಸ್ವಲ್ಲು ದೂರದಲ್ಲಿರುವ ಒಂದು ದೊಡ್ಡ ಹಳೇ ಅಡವಿಯನ್ನು ಕೊಂಡರು. ಡ್ರಾಯಡೆಸ್ಟಿಲೇಶನ್ ಪದ್ಧತಿಯಿಂದ ಕಟ್ಟಿಗೆಯ ಇದ್ದಲಿಗಳನ್ನು ಮಾಡಹತ್ತಿ - ದೂರು, ಈ ಆಧುನಿಕ ಪದ್ದತಿಯನ್ನು ಶ್ರೀ ಸಾಲಿಗ್ರಾಮ ಎಂಬುವವರು ಜಪಾನಕ್ಕೆ ಹೋಗಿ ಕಲಿತು ಬಂದಿದ್ದರು. ಅವರು ರಾಧಾ ನಗರದಲ್ಲಿ ಇದರ ಭಟ್ಟಿಯನ್ನು ಹಾಕಿದ್ದರು. ಲಕ್ಷ್ಮಣರಾಯರು ಅಲ್ಲಿಗೆ ಹೋಗಿ ಅದನ್ನು ನೋಡಿ ಬಂದರು, ಈ ರೀತಿಯಾಗಿ ಇದ್ದಲ್ಲಿ ಮಾಡುವಾಗ ಕಟ್ಟಿಗೆಯಿಂದ ಹೊರಬರುವ ಒಂದು ಬಗೆಯ ಡಾಂಬರಿನಂಥ ಎಣ್ಣೆಗೆ ಪೇಟೆಯಲ್ಲಿ ಒಳ್ಳೆ ಬೆಲೆ ಇದ್ದಿತು.

• ಇದ್ದಲಿ ಪೂರೈಕೆಗಾಗಿ ಇನ್ನೊಂದು ಮಾರ್ಗವನ್ನು ಹುಡುಕಿದರು. ಕುಂಡಲ ಸ್ಟೇಶನ್ನಿನಲ್ಲಿ ಇಂಜನಿನಲ್ಲಿಯ ಬೂದಿ ಪರ್ವತಪ್ರಾಯವಾಗಿ ಬಿದ್ದಿತ್ತು. " ಅದನ್ನು ಲಕ್ಷ್ಮಣರಾಯರು ಕೊಂಡರು. ಅದನ್ನು ಚಾಳಿಸಿ ಬರುವ ಇದ್ದ