ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದರ ಅಡಿಗಲ್ಲನ್ನು ಯಾರು ಹಾಕಿದರು, ಅವರ ಗುಣಕರಗಳಾವವು, ಅವರಿಗೆ ಬಂದ ಅಡ್ಡಿ ಅಡಚಣಿಗಳು ಯಾವವು, ಅವುಗಳನ್ನು ಅವರು ಯಾವ ಧೈರ್. ಸಾಹಸಗಳಿಂದ ಎದುರಿಸಿದರು, ಇವುಗಳ ಕತೆ ಎಲ್ಲರಿಗೂ ಗೊತ್ತಿರುವದು ಅವಶ್ಯವಿದ್ದರೂ ಈ ವರೆಗೆ ಸಾಧ್ಯವಾಗಿಲ್ಲ. ಆ ದೃಷ್ಟಿಯಿಂದ ಈ ಚರಿತ್ರೆಯು ಬಹಳ ಉಪಯುಕ್ತವೂ ಮಹತ್ವದ್ದೂ ಆಗಿದೆ. - ನನ್ನ ಸುದೈವದಿಂದ ಈ ಚರಿತ್ರನಾಯಕರು ನನಗೆ ತುಂಬಾ ಪರಿಚಿತರು. ನನ್ನ ಕಣ್ಣೆದುರಿಗೆಯೆ ಅವರು ಒಂದೊಂದು ಹೆಜ್ಜೆಯನ್ನು ಮುಂದಿಡುತ್ತಾ ತಮ್ಮ ಉದ್ಯೋಗದ ನಿಚ್ಚಣಿಕೆಯನ್ನು ಮೇಲೇರುತ್ತ ಹೋದರು, ಆಗಾಗ್ಗೆ. ಅವರು ನನಗೆ ಬೆಟ್ಟಿಯಾಗುತ್ತಿದ್ದರು. ಅವರ ಸಾದಾ ಜೀವನ, ಪ್ರೇಮದ ಸ್ವಭಾವ, ಸತತೋದ್ಯೋಗಶೀಲತೆ, ಸ್ಥಿರಪ್ರತಿಜ್ಞರಾಗಿರುವ ಅವರ ದೃಢತೆ, ಇವು ನನ್ನ ಕಣ್ಣು ಮುಂದೆ ಕಟ್ಟಿದಂತಿವೆ. ಈ ಚರಿತ್ರಲೇಖಕರಾದ ಶ್ರೀ ಶಂಕರರಾಯರೂ ನನಗೆ ತುಂಬಾ ಪರಿಚಿತರು. ಅವರು ಈ ಚರಿತ್ರೆಯನ್ನು ಇಷ್ಟು ಸುಂದರವಾಗಿ ಬರೆದು ನಮ್ಮೆಲ್ಲರ ಮೇಲೆ ಬಹಳ ಉಪಕಾರ ಮಾಡಿದ್ದಾರೆ. ಒಬ್ಬ ಮಹಾವ್ಯಕ್ತಿ ತನ್ನ ಜೀವನ ವನ್ನು ಉಚ್ಚ ಧೈಯಕ್ಕಾಗಿ ಮೀಸಲಿಟ್ಟು, ಅವತಾರ ಕಾವ್ಯವನ್ನು ಮುಗಿಸಿ ಕಾಲದ ಉದರದಲ್ಲಿ ಮಾಯವಾಗುತ್ತಾನೆ, ಅವನ ವ್ಯಕ್ತಿಪರಿಚಯವನ್ನು ಇತರರಿಗೆ ಮಾಡಿಕೊಡುವ ಭಾರ, ಆಯಾ ವ್ಯಕ್ತಿಯ ಮಹತ್ವ ಹಾಗೂ ಮಹತ್ತರ ಕಾರ ಇವುಗಳನ್ನು ಬಲ್ಲವರ ಮೇಲೆಯೇ ಇರುವದು, ಆ ಹೊಣೆ ಯನ್ನು ಶ್ರೀ ಶಂಕರರಾಯರು ಚನ್ನಾಗಿ ಪೊರೈಸಿದ್ದಾರೆ. ಇದರ ಲಾಭವನ್ನು ಮರಾಠಿ ಭಾಷಾ ಭಾಷೆಗಳು ಈಗಾಗಲೆ ಉಂಡಿದ್ದಾರೆ ಈಗ ಅದನ್ನು 'ಮಿಂಚಿನ ಬಳ್ಳಿತೆಯ ಮುಖಾಂತರ ಕನ್ನಡ ಬಾಂಧವರಿಗೂ ನೀಡಲಾಗಿದೆ, ಕೀರಿಶೇಷ. ರಾದ ಲಕ್ಷ್ಮಣರಾಯರು ಉಭಯ ಭಾಷೆಗಳನ್ನು ಬಲ್ಲವರು. ಅವರು ಕರಾಟಕ, ಮಹಾರಾಷ್ಟ್ರ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ತಮ್ಮ ಸೇವೆ ಸಲ್ಲಿಸಿದವರು, ಆ ಯಂತ್ರಯೋಗಿಗಳ ಈ ಚರಿತ್ರೆ ಸಕಲರಿಗೂ ಸಲ್ಲಲಿ, ಎಲ್ಲರೂ ಇದರಿಂದ ಪ್ರಯೋಜನ ಪಡೆಯಲಿ. ಬೆಂಗಳೂರು ೧೨-೧೯೬೧ } ರಂಗನಾಥ ದಿವಾಕರ