ವಿಶಿಂಚಿನಬಳ್ಳಿ ಈ ಸುದ್ದಿಯು ಪ್ರಿನ್ಸಿಪಾಲರಿಗೆ ತಿಳಿಯಿತು, ಅವರು ಇಬ್ಬರನ್ನೂ ಕರೆಸಿ ಇಂತಹ ಸ್ಪರ್ಧೆಯನ್ನು ಇನ್ನೊಮ್ಮೆ ಮಾಡಬಾರದೆಂದು ಹೇಳಿದರು. ಇಂಗ್ಲಂಡದ ರಕ್ತವು ನಾಳನಾಳದಲ್ಲಿ ಹರಿಯುತ್ತಿದ್ದ ಪ್ರಿನ್ಸಿಪಾಲರಿಗೆ ಅಮೇರಿಕೆಯ ಹೆಚ್ಚಳವು ಸಹಿಸುವದೆಂತು ? ಇದೇ ಸುಮಾರಿಗೆ ಎಡಿಸನ್ನನು ಅಮೇರಿಕೆಯಲ್ಲಿ ಫೋನೋಗ್ರಾಫಿಸ ಶೋಧವನ್ನು ಮಾಡಿದನು. ಆ ವೇಳೆಯಲ್ಲಿ ಈಗಿನಂತಹ ದುಂಡನ್ನ ಪ್ಲೇಟು ಗಳಿರಲಿಲ್ಲ. ಪೋಳು, ಕೊಳವೆಯ ಮೇಲೆ ಸೂಜಿಯಿಂದ ತಮಗೆ ಬೇಕಾದ ಹಾಡುಗಳನ್ನು ಬರೆದು, ಅದನ್ನು ಮರಳಿ ಕೇಳುವ ವ್ಯವಸ್ಥೆ ಇದ್ದಿತು. ಅಕ್ಷಣ ರಾಯರ ಮನಸ್ಸನ್ನು ಇದು ಆಕರ್ಷಿಸಿತು, ಕೂಡಲೇ ಅವರು ವಿಲಾಯಿತಿ. ಯಿಂದ ಈ ಯಂತ್ರವನ್ನು ತರಿಸಿ ಪ್ರಯೋಗಮಾಡಿ ತೋರಿಸಿದರು. ಕೀಲಿ ಕೊಟ್ಟೂಡನೆ ಹಾಡಲು ಪ್ರಾರಂಭಿಸುವ ಯಂತ್ರವನ್ನು ನೋಡಲು ಸಾವಿರಾರು ಜನರು ಅಚ್ಚರಿಯಿಂದ ನೆರೆಯಹತ್ತಿದರು, ಆ ಕಾಲಕ್ಕೆ ಅದು ಎಷ್ಟು ಆಕರ್ಷಕ ವಾಗಿತ್ತೆಂಬುದನ್ನು ಊಹಿಸಿಯೇ ತಿಳಿಯಬೇಕು. ಒಮ್ಮೆ ಗ್ರಾಂಡ ಮೆಡಿಕಲ್ ಕಾಲೇಜದ ಜಂತು ಶಾಸ್ತ್ರಜ್ಞರಾದ ಡಾ. ರಾವ್ ಅವರು ತಮ್ಮ ಪ್ರಯೋಗ ಶಾಲೆಗೆ ತರಿಸಿದ ಸೂಕ್ಷ್ಮ ದರ್ಶಕ ಯಂತ್ರ ವನ್ನು ತೆಗೆದುಕೊಂಡು 'ಲಕ್ಷಣರಾಯರ ಕಡೆಗೆ ಬಂದರು, ಈ ಕೆಟ್ಟ ಯಂತ್ರವನ್ನು ಸರಿಪಡಿಸಲು ಅವರಿಗೆ ಯಾರೂ ದೊರೆತಿರಲಿಲ್ಲ. ಅಕ್ಷ ಣರಾಯರು ಯಂತ್ರವನ್ನು ಸೂಕ್ಷವಾಗಿ ನಿರೀಕ್ಷಿಸಿದ ನಂತರ ಸರಿದಾಡುವ ಎಷ್ಟೋ ಭಾಗಗಳಿಗೆ ತಿರುಪುಗಳನ್ನು ವಿರುದ್ದವಾಗಿ ಕೊರೆಯುವ ಸಂಭವ ವಿದೆಯೆಂಬ ಸಂಗತಿಯು ರಾಯರಿಗೆ ಹೊಳೆಯಿತು, ಕೂಡಲೇ ಅವರು ವಿರುದ್ದವಾಗಿ ತಿರುಗಿಸ ಹತ್ತಿದೊಡನೆ ಯಂತ್ರವು ನಡೆಯಹತ್ತಿತು. ಡಾಕ್ಟರ ರಾಯರಿಗೆ ಪರಮಾನಂದವಾಯಿತು, ಇದರಿಂದ ತಾ! ರಾಯರ ಹಾಗೂ ಲಕ್ಷ ಣರಾಯರ ಗೆಳೆತನವು ಹೆಮ್ಮರವಾಗಿ ಬೆಳೆದು ನಿಂತಿತು. ಡಾಕ್ಟರರು ಲಕ್ಷ್ಮಣರಾಯರನ್ನು ಮೇಲಿಂದ ಮೇಲೆ ಕರೆಯಿಸಿಕೊಂಡು ಅವರಿಗೆ ಅನೇಕ ಜಂತುಗಳ ಪರಿಚಯವನ್ನು ಮಾಡಿಕೊಡುತ್ತಿದ್ದರು, ಮತ್ತು ತಮಗೆ ಬೇಕಾಗುವ ಉಪಕರಣಗಳನ್ನು ಲಕ್ಷ್ಮಣರಾಯರಿಂದ ಮಾಡಿಸಿಕೊಳ್ಳುತ್ತಿದ್ದರು. ಈ ಗೆಳೆತನದ ಬೆಲೆಯು ಅಪಮೌಲ್ಯವಾಗಿದ್ದಿ ತು, ಮುಂಬಯಿಯಲ್ಲಿ ಪ್ಲೇಗಿನ ಹಾವಳಿಗೆ ಲಕ್ಷ್ಮಣರಾಯರ ಧರ್ಮಸತ್ನಿಯು ತುತ್ತಾದರು, ಆಗ ಡಾ.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.