30 ಮಿಂಚಿನಬಳ್ಳಿ ಬೆಳಗಾವಿಯ ವರೆಗೆ ಎತ್ತಿನ ಗಾಡಿಯಲ್ಲಿ ಬರಬೇಕಾಗುತ್ತಿದ್ದಿತು. ಲಕ್ಷಣ. ರಾಯರು ಲಗ್ನಕ್ಕಾಗಿ ಮನೆಯವರನ್ನೆಲ್ಲ ಕರೆದುಕೊಂಡು ಅಸೋಗಾಕ್ಕೆ ಬಂದರು, ಕುಂದಗೋಳದ ಟೇ೦ಬೆಯವರ ಮನೆತನವೇ ಕನೈಯ ಸೋದರ ಮಾವನ ಮನೆ, ಅಲ್ಲಿಯೇ ಹುಡಿಗೆಯು ಬೆಳೆದಿದ್ದಳು. ಆದುದರಿಂದ ಟೇ೦ಬೆಯ ವರ ಹಿರಿತನವು ಲಗ್ನದಲ್ಲಿರುವದು ಸ್ವಾಭಾವಿಕವಿದ್ದಿತು, ಲಕ್ಷ್ಮಣರಾಯರ ಅಣ್ಣಂದಿರಾದ ರಾಮೂಅಣ್ಣಾ, ವಾಸುದೇವರಾವ ಹಾಗೂ ಗಂಗಾಧರಸಂತ ಈ ಮೂವರೂ ಟೇ೦ಬೆಯವರ ಮನೆತನದ ಕನ್ನೆಯರನ್ನೇ ಮದುವೆಯಾಗಿದ್ದರು. ಆದುದರಿಂದ ಅಸೋಗಾದಲ್ಲಿ ನೆರೆದ ಈ ಕರಾಡೀ ಜನರೆಲ್ಲ ಪೂರ್ವ ಪರಿಚಿತರಾಗಿರುವದು ಸ್ವಾಭಾವಿಕವಾಗಿದ್ದಿತು. - ಸ್ವಲ್ಪದರಲ್ಲಿಯೇ ಹೇಳಬೇಕೆಂದರೆ, ಈ ಅಗ್ನವು ಒಂದು ಕುಟುಂಬದ ಸ್ನೇಹ ಸಮ್ಮೇಲನದಂತೆ ಆಲ್ಲಾದಕರವಾಗಿದ್ದಿತು. ಅಸೋಗಾ ಒಂದು ಚಿಕ್ಕ ಹಳ್ಳಿಯಾದರೂ ಮಲಪ್ರಭಾ ನದಿಯ ದಂಡೆಯ ಗುಡ್ಡದ ಓರೆಯಲ್ಲಿದ್ದುದರಿಂದ ಅದಕ್ಕೆ ರಮಣೀಯತೆಯು ಉಂಟಾಗಿದ್ದಿತು. ಗುಡ್ಡವು ದಟ್ಟಡವಿಯಿಂದ ತುಂಬಿದ್ದಿತು, ಎಲ್ಲಿ ನೋಡಿದಲ್ಲಿ ಹಲಸು, ಮಾವು, ನೇರಲ ಮರಗಳು ಫಲ ಭರಿತವಾಗಿ ಕಂಗೊಳಿಸುತ್ತಿದ್ದವು, ಅವುಗಳಲ್ಲಿ ಈ ಊರು ಅಡಗಿದ್ದಿತು. ಮಲಪ್ರಭೆಯ ಸೌಂದರವನ್ನು ಎಂತು ಬಣ್ಣಿಸುವದು ? ನದಿಯು ಟಿಸಿಲೊಡೆದು ಒಂದು ಸರಳು ಗುಡ್ಡಗಳ ಕಲ್ಲುಬಂಡೆಗಳಲ್ಲಿ ಜಿಗಿಯುತ್ತ, ಭೋರ್ಗರೆಯುತ್ತ ಒಂದು ಚಿಕ್ಕ ಕಂದರದಲ್ಲಿ ಧುಮುಕುತ್ತಿದೆ. ಇನ್ನೊಂದು ಸರಳು ಮಗ್ಗಲಿನ ಬೈಲು ಪ್ರದೇಶದಲ್ಲಿ ಶಾಂತವಾಗಿ ಹರಿಯುತ್ತಿದೆ. ಲಗ್ನಕ್ಕೆ ಕೂಡಿದ ಜನರೆಲ್ಲ ತಮ್ಮ ಈಸುವ ಬಯಕೆಯನ್ನು ಪೂರ್ಣ ಮಾಡಿಕೊಂಡರು, ಊಟ, ಉಪಹಾರ, ಹಾಸ್ಯ, ಆಟ ನೋಟಗಳಲ್ಲಿ ನಾಲ್ಕು ದಿನ ಆನಂದದಲ್ಲಿ ಕಳೆದು, ತಮ್ಮ ತಮ್ಮ ಊರುಗಳಿಗೆ ಮರಳಿದರು. ಈ ಅಗ್ರ ಸಮಾರಂಭವನ್ನು ಕಂಡು ಕಾಶೀನಾಥಪಂತರ ಹೃದಯವು ಆನಂದದಿಂದ ತುಂಬಿ ಬಂದಿತು, ಮಕ್ಕಳೆಲ್ಲರೂ ಸದ್ಗುಣಿಗಳೂ ಕೀರ್ತಿಶಾಲಿಗಳೂ ಉದ್ಯೋಗಶೀಲರೂ ಆದುದನ್ನು ಕಂಡು ಯಾವ ತಂದೆಗೆ ಧನ್ಯತೆ ಎನಿಸಲಿಕ್ಕಿಲ್ಲ ! ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅದರಲ್ಲಿಯೂ ಎಲ್ಲರಂತೆ ಶಾಲೆಗೆ ಹೋಗದೆ ನಡುವೆಯೇ ಶಾಲೆಯನ್ನು ಬಿಟ್ಟು, ಹೊಸ ಮಾರ್ಗವನ್ನು ಹಿಡಿದ, ಲಕ್ಷ್ಮಣರಾಯರ ಬಗ್ಗೆ ಅವರಿಗೆ ಬಹು ಚಿಂತೆ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.