೨೯ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು | ಲಕ್ಷಣರಾಯರು ಮಗ್ನರಾಗಿದ್ದರು, ವಿಚಾರಾಂತ್ಯದಲ್ಲಿ ಕೋಟುಗಳಿಗೆ ಬೇಕಾ ಗುವ ಬಿರಡಿಗಳನ್ನು ಮಾಡಲು ನಿಶ್ಚಯಿಸಿದರು. ಯಾವುದೇ ಕಾರವನ್ನು ಪ್ರಾರಂಭಿಸುವ ಮೊದಲು ಅದಕ್ಕೆ ಬೇಕಾಗುವ ಜ್ಞಾನ ಹಾಗೂ ಸಾಧನಗಳನ್ನು ಅವರು ಪೂರ್ಣ ವಿಚಾರ ಮಾಡುತ್ತಿದ್ದರು, ಅವರು ಬಿರಡಿ ಮಾಡುವದನ್ನು ನಿಶ್ಚಯಿಸಿದ ಕೂಡಲೇ ಪೇಟೆಗೆ ಹೋಗಿ ಎಷ್ಟು ಬಗೆಯ ಬಿರಡಿ ಇರುವವೆಂಬು ದನ್ನು ನಿರೀಕ್ಷಿಸಿದರು. ಅವುಗಳಲ್ಲಿ ತಾವು ಎಂಥವುಗಳನ್ನು ಸಿದ್ದಪಡಿಸಲು ಸಾಧ್ಯವೆಂಬುದನ್ನು ಗೊತ್ತು ಪಡಿಸಿದರು, ಅವುಗಳಿಗೆ ಬೇಕಾಗುವ ಯಂತ್ರ ಗಳಾವವು ? ಕಚ್ಚಾಮಾಲು ಎಲ್ಲಿ ದೊರೆಯುವದು ? ಇತ್ಯಾದಿ ಸಂಗತಿಗಳನ್ನು ಮಾಸಿಕ ಪುಸ್ತಕಗಳಿಂದ ಕಲೆಹಾಕಿದರು. ಇರಾಣದಿಂದ ಸಿಂಪುಗಳನ್ನು ತರಿ ಸಿದರು, ಕೋಚೀನದಿಂದ ಗರಟೆಗಳು ಬಂದವು. ಇಷ್ಟೆಲ್ಲ ಪ್ರಯತ್ನ-ಪ್ರಯೋಗ ಗಳು ನಡೆದುದು ಲಕ್ಷಣರಾಯರ ಚಿಕ್ಕ ಕೋಣೆಯಲ್ಲಿಯೇ ರಾಯರು ಅನೇಕ ಬಗೆಯ ಬಿರಡಿಗಳನ್ನು ಒಹು ಸುಂದರವಾಗಿ ಸಿದ್ದಪಡಿಸಿದರು. ರಾಯರ ಪ್ರಯೋಗವು ಯಶಸ್ವಿಯಾದ ಬಗ್ಗೆ ಯೂ ಉತ್ಕೃಷ್ಟವಾದ ಒಗ್ಗೆಯೂ ಅನೇಕ ಮಹನೀಯರಿಂದ ಅಭಿನಂದನೆಗಳು ಬಂದವು. ಆದರೆ ಈ ಸ್ವದೇಶಿ ವಸ್ತುಗಳಿಗೆ ಪೇಟಯಲ್ಲಿ ಬೇಡಿಕೆಯೇ ಬರಲಿಲ್ಲ. ಮನೋಹರವಾದ ವಿದೇಶಿ ವಸ್ತುಗಳು ಪೇಟೆಯನ್ನೆಲ್ಲ ವ್ಯಾಪಿಸಿದ್ದವು. ಈ ವ್ಯಾಪಾರವೆಲ್ಲ ಪಾರ್ಶಿಗಳ ಕೈಯಲ್ಲಿದ್ದಿತು. ಪರದೇಶಿ ವಸ್ತುಗಳ ಬಗ್ಗೆ ಮೋಹ, ಸ್ವದೇಶಿ ವಸ್ತುಗಳ ಬಗೆಗೆ ತಿರಸ್ಕಾರಗಳು ಜನರಲ್ಲಿ ತುಂಬಿದ್ದವು. ಇಂತಹ ಪರಿಸ್ಥಿತಿಯಲ್ಲಿ ಈ ಬಿರಡಿ ಕಾರಖಾನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವದು ಬಹು ಕಷ್ಟವೆಂದು ಬೇರೆ ಹೇಳಬೇಕೆ ? ಆದರೆ ಲಕ್ಷ್ಮಣರಾಯರು ಇದಕ್ಕೆ ಎದೆ ಗುಂದಲಿಲ್ಲ. ವಿದೇಶೀ ವಸ್ತುಗಳನ್ನು ಸ್ಪರ್ಧಿಸುವ ವಸ್ತುಗಳನ್ನು ನಿರ್ಮಿಸಿದರೆ ಇಂದಿಲ್ಲ ನಾಳೆ ಅವು ಪೇಟೆಯಲ್ಲಿ ತಮ್ಮ ಪ್ರಸ್ತವನ್ನು ಬೆಳೆಸುವವೆಂದು ಅವರು ಭಾವಿಸಿದ್ದರು. ಆದರೆ ಈ ಕಾರಖಾನೆಯನ್ನು ನಡೆಯಿಸಲು ಭಂಡವಲವನ್ನು ಎಲ್ಲಿಂದ ತರಬೇಕೆಂಬ ಪ್ರಶ್ನೆಯೇ ಅವರನ್ನು ಬಾಧಿಸಹತ್ತಿತು. ಲಕ್ಷ್ಮಣರಾಯರ ಹಿತಚಿಂತಕರೂ ಅವರನ್ನು ಪ್ರೀತಿಸುವವರೂ ಆದ ಬಾಪೂರಾವ ಅಠಲೆಯವರು ಆ ಕಾಲದಲ್ಲಿ ಬಡೋದೆಯ ನಾಯಬ ದಿವಾಣರಾಗಿದ್ದರು. ಅವರು ಲಕ್ಷ್ಮಣ ರಾಯರ ಸಂಕಟವನ್ನರಿತು ಬಡೋದೆಯ ಒಬ್ಬ ಸಾಹುಕಾರನಿಂದ ತಮಗೆ ಸಾಕಷ್ಟು ಸಹಾಯವು ದೊರೆಯಬಹುದೆಂದ, ತಿಳಿಸಿವರು, ಕೂಡಲೇ ಶಿಕ್ಷಣ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.