4೧ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಗಾದರು, ಇದನ್ನರಿತ ರಾಧಾಬಾಯಿಯವರು ಕೋಣೆಯೊಳಗೆ ಬಂದು ಪತಿದೇವರಿಗೆ- “ಯಂತ್ರವನ್ನು ತರಿಸಲು ತಮಗೆ ಹಣ ಬೇಕಾಗಿದೆಯೆಂದು ಕೇಳಿದೆ. ನಾನೇನಾದರೂ ಅಲ್ಪ ಸ್ವಲ್ಪ ಸಹಾಯ ಮಾಡಬಹುದೇ ?” ಎಂದು ಅಂದರು. ಲಕ್ಷ್ಮಣರಾಯರು ಚಕಿತರಾಗಿ ಪ್ರಶ್ನಾರ್ಥಕ ಮುದ್ರೆಯಿಂದ ಪತ್ನಿಯ ಕಡೆಗೆ ನೋಡಹತ್ತಿದರು. ರಾಧಾಬಾಯಿಯವರು ಹೆಚ್ಚು ಮಾತಾಡದೆ ಕೈಯಲ್ಲಿಯ ಬಂಗಾರದ ಬಳೆ (ನಾಟಲಿ) ಗಳನ್ನು ತೆಗೆದು ಪತಿಯ ಮುಂದೆ ಇಟ್ಟರು. ಅದನ್ನು ಕಂಡು ಲಕ್ಷ್ಮಣರಾಯರ ಹೃದಯವೂ ತುಂಬಿ ಬಂದಿತು. ಅವರು ಭಾವನಾಪರವಶರಾದುದನ್ನು ಇಂದಿನ ವರೆಗೆ ಯಾರೂ ಕಂಡಿದ್ದಿಲ್ಲ. ಇಂದು ಅವರ ದೃಷ್ಟಿಯಲ್ಲಿ ಹೊಸ ತೇಜವು ಹೊಳೆಯಿತು. “ ಈಗ ನಾನು ಈ ಬಳೆಗಳನ್ನು ತೆಗೆದುಕೊಳ್ಳುವೆ. ಒಂದಿಲ್ಲೊಂದು ದಿನ ಇವುಗಳ ಎರಡರಷ್ಟು ತೂಕದ ಬಳೆಗಳನ್ನು ನಿನಗೆ ತೊಡಿಸುವೆ ?” ಎಂದು ಅಂದರು. ಯಂತ್ರಗಳೂ ಬಂದವು, ಔಷಧದ ಪೆಟ್ಟಿಗೆಗಳನ್ನು ತಯಾರು ಮಾಡುವ ಕಾರ್ಯವು ಪ್ರಾರಂಭವಾಯಿತು. ಇಬ್ಬರು ಹುಡುಗರು ಕೈಯಲ್ಲಿ ದುಡಿಯ ಹತ್ತಿದರು. ಸಿದ್ದವಾದ ಮಾಲು ಸ್ನೇಹಿತರಾದ ಡಾಕ್ಟರರಲ್ಲಿಯೂ ಔಷಧದ ಅಂಗಡಿಕಾರರಲ್ಲಿಯೂ ಮಾರಹತ್ತಿದವು, ಗೆಳೆಯರಿಂದ ತೆಗೆದುಕೊಂಡ ಹಣ ವನ್ನು ಮೂರು ನಾಲ್ಕು ವರ್ಷಗಳಲ್ಲಿ ಮುಟ್ಟಿಸಿ ಋಣಮುಕ್ತರಾದರು. ಕಾರಖಾನೆಯು ಸುವ್ಯವಸ್ಥಿತವಾಗಿ ನಡೆದು ಲಕ್ಷಣರಾಯರಿಗೆ ಕೀರ್ತಿಯನ್ನು ತಂದಿತು. “ತಾನೊಂದು ಬಗೆದರೆ ದೈವವು ಮತ್ತೊಂದು ಬಗೆಯುವದು?” ಎಂಬಂತೆ ೧೮೯೬ ರಲ್ಲಿ ಮುಂಬಯಿಯಲ್ಲಿ ಸ್ಟೇಗದ ಹಾವಳಿಯು ಆರಂಭವಾಯಿತು. ಈ ಪ್ಲೇಗ ಬೇನೆಯು ಅನೇಕ ಜನರನ್ನು ಬಲಿ ತೆಗೆದುಕೊಳ್ಳಹತ್ತಿತು. ಜನರು ಭಯಗ್ರಸ್ತರಾಗಿ ಊರು ಬಿಡಹತ್ತಿದರು, ಪ್ಲೇಗದ ಮೂಲಕ ಶಾಲೆ ಕಾಲೇಜು ಗಳು ಮುಚ್ಚಲ್ಪಟ್ಟವು, ಉದ್ಯೋಗ ವ್ಯವಹಾರಗಳ ಮೇಲೆ ಇದರಿಂದ ಭಯಂಕರ ಪರಿಣಾಮವಾಯಿತು. ಇದರ ಶಕವು ಲಕ್ಷಣರಾಯರ ಕಾರಖಾನೆಗೂ ಬಡಿಯಿತು. ಲಕ್ಷ್ಮಣರಾಯರ ಪತ್ನಿಯಾದ ರಾಧಾಬಾಯಿಯವರಿಗೂ ಪ್ಲೇಗವು ಒಂದಿತು. ಡಾ. ರಾವ್ ಇವರ ಸಹಾಯದಿಂದ ಮೃತ್ಯು ಮುಖದಿಂದ ಅವರು ಹೇಗೆ ಪಾರಾದರೆಂಬುದನ್ನು ಹಿಂದೆ ವಿವರಿಸಿದ್ದೇವೆ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.