ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಮೊದಲೇ ಅರಿತಿದ್ದ ಮೂಲಕ ಬಾಳಾಸಾಹೇಬರ ಕರೆಯನ್ನು ಆನಂದದಿಂದ ಒಪ್ಪಿಕೊಂಡರು, ಮತ್ತು ಅದನ್ನು ಒಳ್ಳೆ ಸುಂದರ ರೀತಿಯಿಂದ ಮಾಡಿ ತೋರಿಸಿದರು. ಈ ಕೆಲಸ ಮುಗಿಸಿ ಬೆಳಗಾವಿಗೆ ಬರುವಷ್ಟರಲ್ಲಿಯೇ ಶ್ರೀಮಂತರಿಂದ ಇನ್ನೊಂದು ಪತ್ರವು ಬಂದಿತು. “ ಯಮಾಯಿ ದೇವಸ್ಥಾನದ ಎದುರಿಗೆ ಏಳೆಂಟು ನೂರು ಜನರು ಕೂಡುವ ಒಂದು ದೊಡ್ಡ ಮಂಟಪವನ್ನು ಕಟ್ಟಿಸ ಬೇಕೆಂದು ದೊಡ್ಡ ಮಹಾರಾಜರು ಇಚ್ಚಿಸುತ್ತಿದ್ದಾರೆ. ಆ ಕಟ್ಟಡದ ಗುತ್ತಿಗೆ (ಕಾಂಟ್ರಾಕ್ಷ) ಹಿಡಿಯುವ ಇಚ್ಛೆಯು ತಮಗೆ ಇದ್ದರೆ ಅದು ತಮಗೇ ಸಿಗಬಹುದು' ಎಂದು ಸೂಚಿಸಿದ್ದರು. - ಈ ದೊಡ್ಡ ಸುಸಂಧಿಯು ತಾನಾಗಿಯೇ ಬಂದಿತ್ತು, ಇದು ಅವರ ಕರ್ತೃತ್ವಶಕ್ತಿಗೆ ಆಹ್ವಾನವೂ ಆಗಿದ್ದಿತು. ರಾಯರಿಗೆ ಇಂತಹ ಕಾರ್ಯದ ಅನುಭವವೂ ಇರಲಿಲ್ಲ. ಅವರು ಚಿಕ್ಕ ಮನೆಯನ್ನು ಕೂಡ ಕಟ್ಟಿರಲಿಲ್ಲ. ಇದೂ ಅಲ್ಲದೆ ಇಂತಹ ದೊಡ್ಡ ಗುತ್ತಿಗೆ ಹಿಡಿಯಲು ಹಣವು ಎಲ್ಲಿಂದ ಬರಬೇಕು ? ಹೀಗಿದ್ದರೂ ರಾಯರು ಬಹಳ ವಿಚಾರ ಮಾಡಿ ಮಂಟಪದ ನಕ್ಷೆಯನ್ನೂ ಅದಕ್ಕೆ ಬೇಕಾಗುವ ಹಣದ ಅಂದಾಜನ್ನೂ ಸಿದ್ಧಪಡಿಸಿ ಔಂಧಕ್ಕೆ ಕಳಿಸಿಕೊಟ್ಟರು. ಅವು ಮುಟ್ಟಿದೊಡನೆ ಬಾಳಾಸಾಹೇಬರು “ ನೀವು ಕಳುಹಿಸಿದ ನಕ್ಷೆಯು ಮಹಾರಾಜರ ಮನಸ್ಸಿಗೆ ಬಂದಿದೆ, ನೀವು ಮಾಡಿದ ಅಂದಾಜಿನಂತೆ ನಿಮಗೆ ಕೆಲಸದ ಗುತ್ತಿಗೆ ಕೊಡಲು ಮಹಾರಾಜರು ಮನಸ್ಸು ಮಾಡಿದ್ದಾರೆ. ಈ ಕೆಲಸವನ್ನು ನೀವು ಉತ್ಕೃಷ್ಟ ರೀತಿಯಿಂದ ಪೂರ್ಣ ಮಾಡುವಿರೆಂದು ನನಗೆ ನಂಬಿಗೆಯಿದೆ, ಈ ಕಾರ್ಯವನ್ನು ಪ್ರಾರಂಭಿಸುವದಕ್ಕೆ ೧೭,೦೦೦ ರೂಪಾಯಿಗಳನ್ನು ಮುಂಗಡ ಕೇಳಿದ್ದೀರಿ, ಈ ವಿಷಯದಲ್ಲಿ ನೀವು ಮೂವರೂ ಬಂಧುಗಳ ಭೆಟ್ಟಿಯಾದ ನಂತರವೇ ನಿರ್ಣಯ ತೆಗೆದುಕೊಳ್ಳಲಾಗುವದೆಂದು ಮಹಾರಾಜರು ಹೇಳಹತ್ತಿದ್ದಾರೆ, ಆದುದರಿಂದ ನೀವು ಮೂವರೂ ಕಿನ್ನಾಯಿಗೆ ಬರಬೇಕು” ಎಂದು ಬರೆದಿದ್ದರು. ರಾಮರಾವ, ವಾಸುದೇವರಾವ, ಮತ್ತು ಲಕ್ಷಣರಾವ ಈ ಮೂವರೂ ಬಂಧುಗಳು ಕಾಯಿಗೆ ಹೋಗಿ ಶ್ರೀರಾಮಮಂದಿರದಲ್ಲಿ ಮಹಾರಾಜರನ್ನು ಕಂಡು ವಂದಿಸಿ, ಎದುರಿಗೆ ನಿಂತುಕೊಂಡರು. ಮಹಾರಾಜರು-ಕತ್ತನ್ನು ಏನಾದರೂ ಕೇಳಬಹುದೆಂದು ಅವರು ಭಾವಿಸಿದ್ದರು. ಆದರೆ ಮಹಾರಾಜರು