ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ತಮ್ಮ: ಗುಡಿಸಲಿನ, ಹತ್ತಿರದ ಹೊಲದಲ್ಲಿ ಒಂದು ಸಣ್ಣ ಭಟ್ಟಿಯನ್ನು ಕಟ್ಟ ದರು, ಲೋಂಡಾದಿಂದ ಎರಕ ಹೊಯ್ಯುವ ಉಸುಕನ್ನು ' ಮತ್ತು ಅಗ್ನಿ ಶ್ಯಾಮಕ ಮಣ್ಣನ್ನು ತಂದರು. ೪ ಚೀಲ ಶುದ್ಧ ಕಲ್ಲಿದ್ದಲಿಯನ್ನು ಸಂಗ್ರ ಹಿಸಿದರುಬೀಡು ಕರಗಿಸುವ ಕೆಲಸಕ್ಕೆ ಸುರುವಾಯಿತು, ಆದರೆ ಅನುಭವವು ಯಾರಿಗಿದ್ದಿತು ? ಅದರಲ್ಲಿಯೂ ಬೀಡಿನ ಭಟ್ಟಿಯು ಸೂಕ್ಷ ಹೆಣ್ಣಿನಂತೆ. ಪಾತ್ರೆಯಲ್ಲಿ ರಸವನ್ನು ಸರಿಯಾಗಿಡುವದು ಬಹು ಕಷ್ಟ, ಗಾಳಿ ಸ್ವಲ್ಪು ಕಡಿಮೆಯಾದರೆ ಇಲ್ಲವೆ ರಸ ತೆಗೆಯಲು ತಡವಾದರೆ ಅದು ಕೆಟ್ಟ ತೆಂದೇ ತಿಳಿಯ ಬೇಕು, ಆದರೆ ಲಕ್ಷಣರಾಯರು ಇದಕ್ಕೆ ಎದೆಗುಂದಲಿಲ್ಲ. ಮೊದಲಿನ ಸೋಲುಗಳಿಗೆ ಬಗ್ಗಲಿಲ್ಲ. ಭಟ್ಟಿಯ ಬೆನ್ನೂ ಬಿಡಲಿಲ್ಲ. ಆಗುವ ತಪ್ಪುಗಳ ನೆಲ್ಲ ಅಮೇರಿಕೆಯ “ಫೌಂಡ್ರಿ” ಪತ್ರಿಕೆಯ ಸಾರಾಯಣದಿಂದ ತಪ್ಪಿಸಿದರು. ಕೊನೆಗೊಮ್ಮೆ ಮನಸ್ಸಿಗೊಪ್ಪುವಂತೆ ರಂಟೆಯ ಭಾಗಗಳು ಸಿದ್ಧವಾಗಿ ಹೊರ ಬಿದ್ದಾಗ ಮಾತ್ರ ಅವರ ಮನಸ್ಸಿಗೆ ಸಮಾಧಾನವಾಯಿತು. - ತಮ್ಮ ಚಿಕ್ಕ ಕಾರಖಾನೆಯಲ್ಲಿಯೇ ಸಿದ್ದವಾದ ಮೊದಲಿನ ಆರು ರಂಟೆ ಗಳನ್ನೆಲ್ಲ ಜೋಡಿಸಿ, ಬಣ್ಣ ಹಚ್ಚಿ ಸಿದ್ದವಾದೊಡನೆಯೇ • ಕೇಸರಿ' ಹಾಗೂ “ಜ್ಞಾನಪ್ರಕಾಶ'ಗಳಲ್ಲಿ ಜಾಹೀರಾತು ಪ್ರಕಾಶಿಸಹತ್ತಿತು. ಆದರೆ ಈ ರಂಟೆಗಳು ಕಾರಖಾನೆಯಿಂದ ಹೊರಬೀಳುವ ಲಕ್ಷಣಗಳೇ ಕಾಣಲಿಲ್ಲ. ಗಿರಾಕಿಗಳ ಸುಳಿವೇ ಇಲ್ಲ. ಬೆಲೆಯಿಲ್ಲದೇ ಪ್ರಯೋಗಕ್ಕೂ ಕೂಡ ಯಾರೂ ಮುಂದೆ ಬರಲಿಲ್ಲ, ಆಗ್ರಹದಿಂದ ಯಾರನ್ನಾದರೂ ಕರೆತಂದು ರಂಟೆಯನ್ನು ತೋರಿಸಿದರೆ, "ರಾಯರೇ ನಮ್ಮಂತಹರಿಗೆ ಇದು ಉಪಯೋಗವಿಲ್ಲ. ನಮ್ಮ ಅಣ್ಣ ಮುಂದಿರು ಎಂದಾದರೂ ಇಂತಹ ರಂಟೆಯಿಂದ ಭೂಮಿಯಲ್ಲಿ ಏಷ ಹಬ್ಬಿತು, ಇಲ್ಲವೆ ದನಗಳ ಪ್ರಾಣವಾದರೂ ಹೋದೀತು” : ಎಎಂದು ಅನ್ನುತ್ತಿದ್ದರು. ಈ ಕಾಡು ಕಲ್ಪನೆಗಳನ್ನು ಹೇಗೆ ದೂರ ಮಾಡಬೇಕೆಂಬುದೇ ದೊಡ್ಡ ಪ್ರಶ್ನೆಯಾಯಿತು. ಇಷ್ಟರಲ್ಲಿಯೇ ಇವರ ಹೊಲದ ಹತ್ತಿರವೇ ಮೈಲೀ ರಸವನ್ನೇ ಸಿದ್ದಪಡಿ ಸುವ (ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್) ಕೇಂದ್ರ ಸ್ಥಾಪಿಸಬೇಕೆಂದು ಸರಕಾರವು ನಿಗ್ಗರಿಸಿತು, ಅದರ ವ್ಯವಸ್ಥಾಪಕರಾದ ಮಿಸ್ಟರ ಹಚಿನಸನ್ನರು ಉಧಾರ ಮನಸ್ಸಿ ನವರು, ಲಕ್ಷ್ಮಣರಾಯರ ಕಲ್ಪಕತೆ ಹಾಗೂ ಕಾರ್ಯನಿಷ್ಠೆಗಳ ಬಗೆಹರರಲ್ಲಿ , - * * *