ದುykaನಿ ಕಿರ್ಲೋಸ್ಕರ ಲಕ್ಷ್ಮಣರಾಯರು ೪೩ ": ಪರ್ತಕವಾಗಿ ಹಣದ ತೊಂದರೆಯು ದೂರವಾದರೂ ಚಿಂತಡ ಮೂಲ ಕಾರಣವಾದ ರಂಟೆಗಳಿಗೆ ಬೇಡಿಕೆ ಬರಲಿಲ್ಲ, ಆದರೂ ರಂಟಿಗಳು ಧೂಳು ತಿನ್ನುತ್ತ ಬಿದ್ದಿದ್ದವು. ಕಬ್ಬಿಣರಂಟೆಯ ನಾಗನನ್ನು ಬಿಡಲು ಜನರಿಗೆ ಸಲಹೆಯನ್ನಿಯಹತ್ತಿದರು. ಈ ರಂಟೆಯ ರುಚಿಯು ಒಮ್ಮೆ ರೈತನಿಗೆ ಹತ್ತಿದರೆ ಸಾಕು, ತನ್ನಷ್ಟಕ್ಕೆ ತಾನೇ ಬೇಡಿಕೆಗಳು ಬರುತ್ತ ಹೋಗು ವವು ಎಂದು ರಾಯರ ನಿಶ್ಚಿತ ಮತವಿದ್ದಿತು. ಅದರಂತೆಯೇ ಒಂದು ದಿನ ಮಿರಜಕಡೆಯ ಜೋಶಿ ಎಂಬ ಜಮೀನದಾರರು ಈ ರಂಟೆಗಳ ಶೋಧಕ್ಕಾಗಿ ಬೆಳಗಾವಿಗೆ ಬಂದರು, ಅವರಿಗೆ ಈ ರ೦ಟೆಯ ಮನವರಿಕೆಯಾಗಿ ಆರೂ ರಂಟಿ ಗಳನ್ನು ಕೊಂಡುಕೊಂಡರು. ಅವರ ಬೆನ್ನು ಹಿಂದೆಯೇ ಪಾಲೂಸ ಹಳ್ಳಿಯ ನಾ೦ಡೂ ಪಾಟೀಲ ಎಂಬವರು ಬಂದು ೩೫ ರಂಟೆಗಳ ಬೇಡಿಕೆಯನ್ನು (ಆರ್ಡರ) ಇತ್ಯರು, ಲಕ್ಷ್ಮಣರಾಯರ ಭವಿಷ್ಯವು ಸತ್ಯವಾಯಿತು ತಾನು ಸಿದ್ದಪಡಿಸುವ ಮಾಲು ಯಾಂತ್ರಿಕ ದೃಷ್ಟಿಯಿಂದ ನಿರ್ದುಷ್ಟವೂ ಬಾಳಿಕೆ ಬರುವಂಥದೂ ಇರಬೇಕೆಂದು ಅವರು ಮೊದಲಿನಿಂದಲೂ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದಲೇ ರಂಟೆಯ ರಚನೆಯ ಶಾಸ್ತ್ರವನ್ನು ಅವರು ಸೂಕ್ಷ್ಮವಾಗಿ ಅಭ್ಯಸಿಸಿದ್ದರು. ಲಕ್ಷ್ಮಣರಾಯರು ರಂಟೆಯನ್ನು ಪರೀಕ್ಷಿಸುವದಕ್ಕಾಗಿ ಒಂದು ಜಗ್ ಯಂತ್ರವನ್ನೇ ಸಿದ್ಧ ಮಾಡಿದ್ದರು, ಅದರಲ್ಲಿ ತಂಟೆಯು ಸೂಕ್ಷ್ಮವಾಗಿ ಪರೀಕ್ಷಿಸಿದ ನಂತರವೇ ಅದು ಹೊರಬರುತ್ತಿತ್ತು, ಅಕ್ಷಣರಾಯರು ಶ್ರೀಮಾನ್ ಜೋಶಿಯವರಿಗೆ ತಮ್ಮ ರಂಟೆಗಳ ಬಗ್ಗೆ. ಬಂಗ ಅನುಭವಗಳನ್ನು ತಿಳಿಸಲು ಬರೆದರು, “ಎರೆ ಭೂಮಿಗಳಿಗೆ ಇದಕ್ಕಿಂತಲೂ ಭಾರವಾದ ರಂಟೆಗಳ ಅವಶ್ಯಕತೆ ಇದೆ' ಎಂದು ಜೋಶಿಯವರು ತಿಳಿ ಇದರು. ಅದರಂತೆ ರಂಟೆಗಳ ಕೆಲ ಭಾಗಗಳನ್ನು ಜಡಮಾಡಿ ಇರಿಸಿನ ಉದಳಕೆ ಯನ್ನು ಹೆಚ್ಚಿಸಿ ಅವಶ್ಯವಿದ್ದ ಸುಧಾರಣೆಗಳನ್ನೆಲ್ಲ ಮಾಡಿದರು. ಈ ಸುಧಾರಿಸಿದ ರಂಟೆಯನ್ನು ಒಕ್ಕಲತನದ ಖಾತೆಯ ಕಡೆಗೆ ಕಳಿಸಿ ಅವರ ಅಭಿಪ್ರಾಯವನ್ನು ಕೇಳಿದರು. ಮಿಸ್ಟರ ನಾಯಿಟ್, ಡಾಕ್ಟರ ಮ್ಯಾನ ರಂಥ ಯುರೋಪಿಯನ್ನರೇ ವರಿಷ್ಠಾಧಿಕಾರಿಗಳಾಗಿದ್ದರು, ಅವರ ಒಲವು ವಿಲಾಯತಿಯ ರಂಟೆಗಳ ಕಡೆಗೆ ಇರುವದು ಸ್ವಾಭಾವಿಕವಿದ್ದಿತು, ಅವುಗಳನ್ನೇ ತರಿಸಲು. ಅವರು ಉತ್ತೇಜನ ಕೊಡುತ್ತಿದ್ದರು. ದೇಶೀ ರಂಥಿಗಳ ಬಗೆಗೆ ಅವರ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.