ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಆದರೆ ನಾನು ಮರಳಿ ಬರುವದರೊಳಗಾಗಿ ನಿಮ್ಮ ಉತ್ತರವು ಸಿದ್ಧವಾಗಿ ಕಲಿ' ಎಂದ ಅಂದರು. ಈ ಪ್ರಶ್ನೆಯು ಬಹು ಕಠಿಣವಿದ್ದಿತು. ಔಂಧ ಸಂಸ್ಥಾನಕ್ಕೆ ಹೋಗುವ ವೆಂದರೆ ಎಲ್ಲಿಗೆ ? ರೇಲ್ವೆಯಿಂದ ದೂರದಲ್ಲಿ ಸ್ಥಳ ದೊರೆತರೆ, ಅದು ಸಿಕ್ಕರೂ ಸಿಗದಂತೆಯೇ, ಅಲ್ಲದೆ ಅದು ನಿರ್ಜನ ಪ್ರದೇಶವಾಗಿರಬಾರದು, ನೀರಿನ ಅನುಕೂಲತೆ ಸಾಕಷ್ಟಿರಬೇಕು. ರಹದಾರಿ, ಪೇಟೆ, ಪೋಸ್ಟ-ಕಚೇರಿ ಇವೆಲ್ಲ ಸಾಧನಗಳು ಉದ್ಯಮಕ್ಕೆ ಅವಶ್ಯ. ಹೀಗೆ ಒಂದಲ್ಲ ಎರಡಲ್ಲ ಅನೇಕ ವಿಚಾರ ತರಂಗಗಳು ತಲೆಯಲ್ಲಿ ಬಂದವು. ಆದರೆ ಅವೆಲ್ಲ ವಿಚಾರಗಳನ್ನು ತೂಗಿ ನೋಡಲು ಸನುಯನಿತ್ತೆಲ್ಲಿ? ಕೊನೆಗೆ ಆ ಮೂವರೂ ಕೂಡಿ ತಿಕ್ಕಾಡಿ, ವಿಚಾರಮಾಡಿ ಅನಾನುಕೂಲತೆಗಳಿದ್ದರೂ ರೇಲ್ವೆ ಸ್ಟೇಶನ್ ಮಾತ್ರ ಸಮೀಪ ವಿರುವಂಥ ವಿಶಾಲ ಸ್ಥಳವು ದೊರೆಯುವಂತಿದ್ದರೆ ಅದನ್ನು ಒಪ್ಪಬೇಕೆಂದು ನಿರ್ಣಯಕ್ಕೆ ಬಂದರು. ನಾಲೈದು ತಾಸುಗಳ ನಂತರ ಶ್ರೀಮಂತರ ಸ್ವಾರಿಯು ಮನೆಗೆ ಬಂದಿತು. ಲಕ್ಷ್ಮಣರಾಯರು ತಮ್ಮ ತೊಂದರೆಗಳನ್ನೆಲ್ಲ ಅವರ ಎದುರಿ ಗಿಡಲು ಶ್ರೀಮಂತರು ಔಂಧ ಸಂಸ್ಥಾನದ ನಕಾಶವನ್ನೇ ಅವರೆದುರಿಗೆ ಬಿಚ್ಚಿ ಟೂರು, ಇಡೀ ಸಂಸ್ಥಾನದಲ್ಲಿ ಕುಂಡಲರೋಡ ಎಂಬ ಚಿಕ್ಕ ಸ್ಟೇಶನ್ ಮಾತ್ರ ಇದ್ದಿತು. ಉಳಿದೆಲ್ಲ ವಿಚಾರಗಳಿಗೆ ಆಸ್ಪದವೇ ಇರಲಿಲ್ಲ. ಕೂಡಲೇ ಲಕ್ಷ್ಮಣ ರಾಯರು ಸ್ನೇಶನ್ ಸಮೀಪ ಇರುವ ಸ್ಥಳವನ್ನು ನಿರೀಕ್ಷಿಸಿ ಪೆನ್ಸಿಲಿನಿಂದ ಒಂದು ಚೌಕೋನವನ್ನು ತೆಗೆದು ಇಷ್ಟು ಸ್ಪಳವು ನಮಗೆ ದೊರೆತರೆ ನಾವು ನನ್ನು ಕಾರ್ಖಾನೆಯನ್ನು ಅಲ್ಲಿಗೆ ತರುವೆವು ಎಂದರು. ಆಗ ಶ್ರೀಮಂತರು ಕೂಡಲೇ “ಒಳ್ಳೇದು, ಆ ಸ್ಥಳವನ್ನು ನಿಮಗೆ ಇನಾಮು ಪತ್ರ ಮಾಡಿ ಕೊಡಲು ಈಗಲೇ ಆಜ್ಞಾಪಿಸುವೆ, ನೀವು ಮುಂದಿನ ಕಾಠ್ಯಕ್ಕೆ ಹತ್ತಿರಿ?” ಎಂದರು, ಎಂತಹ ಗೆಳೆತನವಿದು ! ಎಂತಹ ಉದ್ಯೋಗ ಪ್ರೀತಿ !!!
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.