ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಇಂತಹ ವಾತಾವರಣದಲ್ಲಿ ಸ್ಪಶ್ಯಾಸ್ಪೃಶ್ಯತೆಯಂತಹ ಹಿಂದಿನ ಯುಗದ ಕಲ್ಪನೆಗೆ ಸ್ಥಾನಕೊಡುವದು ತಪ್ಪಾದೀತು” ಎಂದು ಹೇಳಿದರು. ಇದನ್ನು ವಿರೋಧಿಸುವ ಧೈರ್ಯವು ಯಾರಿಗೆ ? ಲಕ್ಷಣರಾಯರು ಇದಕ್ಕಿಂತ ಮುಂದೆ ಹೋಗಿ ಸರ್ವ ಹಿಂದುಗಳಿಗೆ ಶ್ರಾವಣಿಯನ್ನೇರ್ಪಡಿಸಿದರು. ರಾಯರು ಸಾಧಿಸಿದ ಇನ್ನೊಂದು ಮಹತ್ವದ ಸುಧಾರಣೆಯೆಂದರೆ, ಕಿರ್ಲೋಸ್ಕರವಾಡಿಯಲ್ಲಿ ಸುರಾದೇವಿಗೆ ಸ್ಥಾನವಿಲ್ಲದಂತೆ ಮಾಡಿದುದು. ತಮ್ಮ ಕೆಲಸಗಾರರಲ್ಲಿ ಯಾರಿಗಾದರೂ ಈ ವ್ಯಸನವಿದೆ ಎಂದು ತಿಳಿದರೆ, ಅವ ನನ್ನು ಕರೆಯಿಸಿ ಅದರ ದುಷ್ಪರಿಣಾಮಗಳನ್ನು ತಿಳಿಸಿ ಹೇಳಿ, ಈ ವ್ಯಸನವನ್ನು ಬಿಡದಿದ್ದರೆ ಕೆಲಸಕ್ಕೆ ಎರವಾಗಬೇಕಾದೀತೆಂದೂ ಎಚ್ಚರಿಸುತ್ತಿದ್ದರು. ಅದರ ಸುಪರಿಣಾಮವೂ ಆಗುತ್ತಿತ್ತು. ಇಸ್ಪೀಟು ಎಂದರೆ ರಾಯರು ಸಿಟ್ಟು ಬೆಂಕಿ, ತಮ್ಮ ಮನೆಯವರು ಅಥವಾ ಕೆಲಸಗಾರರು ಯಾರೂ ಇಸ್ಪೀಟು ಆಡಕೂಡದೆಂದು ಅವರ ಕಟ್ಟಪ್ಪಣೆ. “ಮನರಂಜನೆಗಾಗಿ ಯಾವುದೇ ಆಟ ಆಡಬಹುದು, ಆದರೆ ವ್ಯಸನವನ್ನುಂಟು ಮಾಡುವಂಥದರಿಂದ ಮಾತ್ರ ದೂರವಿರಬೇಕು, ಏಕೆಂದರೆ ಇಂತಹ ಆಟಗಳ ಬಲೆಯಲ್ಲಿ ಮನುಷ್ಯನು ಸಿಕ್ಕು ಅದರ ಗುಲಾಮನಾಗುತ್ತಾನೆ, ಮತ್ತು ಅದರಲ್ಲಿ ಹಾಳಾಗುವ ವೇಳೆಯ ಪರಿವೆಯು ಕೂಡ ಅವನಿಗೆ ಉಳಿಯುವದಿಲ್ಲ.” ಎಂದು ಅನ್ನುತ್ತಿದ್ದರು. - ಹುಡುಗರು ಹುಡುಗರೆ ! ಒಮ್ಮೆ ಅವರು ಇಸ್ಪೀಟು ಆಡುತ್ತ ಕುಳಿತಾಗ. ರಾಯರ ಸ್ವಾರಿಯು ಬಂದಿತು. ಆಗ ಅವರ ಸಿಟ್ಟನ್ನು ಕೇಳಬೇಕೇ? ನಾಕ್ಖಾತೆ ಪರಶುರಾಮನ ಅವತಾರವೇ ! ಅವರು ನೆಟ್ಟಗೆ ಕಾರಖಾನೆಗೆ ಹೋfi ಇಂಜನು ಬಂದು ಮಾಡಿ ಹೊರಟು ಹೋದರು. ಆಗ ಹುಡುಗರೆಲ್ಲರೂ ಇನ್ನೊಮ್ಮೆ ಇಂತಹ ತಪ್ಪನ್ನು ಮಾಡುವದಿಲ್ಲೆಂದು ಪಶ್ಚಾತ್ತಾಪ ಪಟ್ಟಾಗ ಕಾರಖಾನೆಯು ಪ್ರಾರಂಭವಾಯಿತು. ತರುಣರೆಲ್ಲರೂ ಕೂಡಿ ಗಣೇಶೋತ್ಸವವನ್ನು ಆಚರಿಸುವೆನೆಂದೂ ಆಗ “ತೋತಯಾಚೆ ಬಂಡ' ಎಂಬ ನಾಟಕ ಮಾಡುವೆವೆಂದೂ ರಾಯರಿಗೆ ತಿಳಿಸಿದರು. ಅದಕ್ಕೆ ಅವರು ಸಂತೋಷದಿಂದ ಒಪ್ಪಿ ಅನುಕೂಲತೆ ಮಾಡಿ ಕೊಟ್ಟರು. ನಾಟಕವು ಯಶಸ್ವಿಯಾಯಿತು. ಕಾರಖಾನೆಯ ಹಿತಚಿಂತಕ ರಾದ ರಾಜಾಸಾಹೇಬ, ಗುತ್ತೀಕರ ಮೊದಲಾದವರು ಕಾರ್ಯಕ್ರಮಕ್ಕೆ ಉಪ