ಈ ಪುಟವನ್ನು ಪ್ರಕಟಿಸಲಾಗಿದೆ
ಪಾರ್ತಿಸುಬ್ಬನ ಸಮಸ್ಯೆ : ಹಿನ್ನೆಲೆ

ಸುಬ್ಬ ಅಥವಾ ಅಜ್ಞಾತ ಕವಿ) - ಎಂಬುದು ಒಂದು ಪಕ್ಷ- ಮೊದಲನೆಯ ಪಕ್ಷದಲ್ಲಿ ದಿ|ಕುಕ್ಕಿಲರು ಪ್ರಮುಖರು, ಎರಡನೆಯದರಲ್ಲಿ ದಿ| ಡಾ| ಕಾರಂತರು ಮುಖ್ಯರು.
ಈ ಚರ್ಚೆಯಲ್ಲಿ ದಿ| ಮಂಜೇಶ್ವರ ಗೋವಿಂದ ಪೈ, ದಿ| ಕೆ. ಪಿ. ವೆಂಕಪ್ಪ ಶೆಟ್ಟಿ, ಕಯ್ಯಾರ ಕಿಂಞಣ್ಣ ರೈ, ದಿ| ಬೈಕಾಡಿ ವೆಂಕಟಕೃಷ್ಣ ರಾವ್, ನೀರ್ಪಾಜೆ ಭೀಮ ಭಟ್, ಅಮೃತಸೋಮೇಶ್ವರ, ರಾಮಚಂದ್ರ ಉಚ್ಚಿಲ, ಸಿರಿಬಾಗಿಲು ವೆಂಕಪ್ಪಯ್ಯ ಮೊದಲಾ ದವರು ಭಾಗವಹಿಸಿದ್ದಾರೆ. ಈ ಚರ್ಚೆಯ ವಿವಿಧ ಮುಖಗಳನ್ನೂ, ಬೇರೆ ಬೇರೆ ಹಂತ ಗಳನ್ನೂ, ಡಾ| ಶಿವರಾಮ ಕಾರಂತರ ಯಕ್ಷಗಾನ ಬಯಲಾಟ' (೧೯೫೭ ಮತ್ತು ೧೯೬೩)ದಲ್ಲಿ, ನಮ್ಮ ಅಜಪುರ, ಮಧುಪುರ, ಮಧುರಸ್ಮೃತಿ' ಮೊದಲಾದ ಸಂಕಲನ ಗಳಲ್ಲಿ ಮತ್ತು ಚರ್ಚೆ ನಡೆದ ಕಾಲದ ನವಭಾರತ", "ನವಯುಗ", "ರಾಷ್ಟ್ರಮತ" ಮುಂತಾದ ಪತ್ರಿಕೆಗಳ ಸಂಚಿಕೆಗಳಲ್ಲಿ ಹಾಗೂ ದಿ| ಕುಕ್ಕಿಲ ಕೃಷ್ಣ ಭಟ್ಟರು ಸಂಪಾದಿಸಿದ 'ಪಾರ್ತಿಸುಬ್ಬನ ಯಕ್ಷಗಾನಗಳು” (ಮೈಸೂರು ವಿ. ವಿ. ಪ್ರಕಟನೆ, ೧೯೭೫) ಗ್ರಂಥ ದಲ್ಲೂ ಕಾಣಬಹುದು.

ಕಾರಂತರ ವಾದದ ಎರಡು ಹಂತಗಳು

ಡಾ| ಶಿವರಾಮ ಕಾರಂತರು, ತನಗೆ ಆಗ ದೊರೆತ ದಾಖಲೆಗಳನ್ನು ಅರ್ಥವಿಸಿಕೊಂಡ ರೀತಿಯಲ್ಲಿ, ಪಾರ್ತಿಸುಬ್ಬನು ಕವಿಯಲ್ಲ, ಅಜಪುರದ, ಸುಬ್ಬನೇ ಸಂಬಂಧಪಟ್ಟ ಪ್ರಸಂಗಗಳ ಕವಿ ಎಂದೇ ಪ್ರತಿಪಾದಿಸಿದರು. (ಯಕ್ಷಗಾನ ಬಯಲಾಟ, ೧೯೫೭) ಬಳಿಕ ಇತರರ ವಾದಗಳನ್ನು ಗಮನಿಸಿ, ಅವರಿಗೆ ದೊರೆತ ಹೊಸ ದಾಖಲೆಗಳ ಮತ್ತು ಹೊಸ ವಿಶ್ಲೇಷಣೆಗಳ ಆಧಾರದಲ್ಲಿ, ಪಾರ್ತಿಸುಬ್ಬನದೆಂದು ಹೇಳಲಾಗುವ ಪ್ರಸಂಗಗಳ ಕರ್ತೃ, ಪಾರ್ತಿಸುಬ್ಬನೂ ಅಲ್ಲ, ಅಜಪುರದ ಸುಬ್ಬನೂ ಅಲ್ಲ. ಅವನು ಅಜ್ಞಾತ ಕವಿ, ಕಣ್ವಪುರದ ಕೃಷ್ಣನ ಭಕ್ತ ಎಂಬ ನಿಲುವನ್ನು ತಾಳಿದರು. (ಯಕ್ಷಗಾನ ಬಯಲಾಟ, ೧೯೬೩ ಮತ್ತು ಯಕ್ಷಗಾನ, ಮೈಸೂರು ವಿಶ್ವವಿದ್ಯಾಲಯ ೧೯೭೫) ಮತ್ತು ಆತನ ಕಾಲವು ಕ್ರಿ. ಶ. ಸು. ೧೬೦೦ ಎಂಬ ಅಭಿಪ್ರಾಯಕ್ಕೆ ಬಂದರು.
ಹೀಗೆ, ಸಂಶೋಧನೆಯಲ್ಲಿ ಒಬ್ಬನ ಅಭಿಪ್ರಾಯಗಳು ಬದಲಾಗುವುದು ಸಹಜ. ಹೊಸ ಸತ್ಯಗಳ ಬೆಳಕಿನಲ್ಲಿ ಹಿಂದಿನ ಅಭಿಪ್ರಾಯಗಳ ಪರಿಷ್ಕರಣೆಯು, ಸಂಶೋಧನೆ ಯಲ್ಲಿ ಪ್ರಾಮಾಣಿಕವಾದ ಮಾರ್ಗ,
ಆದರೆ, ಯಕ್ಷಗಾನ ಪಂಚವಟಿ ಪ್ರಸಂಗದ ಬಹಳಷ್ಟು ಪ್ರತಿಗಳಲ್ಲಿ ಕಾಣಸಿಗುವ ಪಾರ್ವತೀನಂದನ' ಎಂಬ ಶಬ್ದಕ್ಕೆ ಡಾ| ಕಾರಂತರು ಸೂಕ್ತವಾದ ಮಾನ್ಯತೆ ಕೊಟ್ಟಿಲ್ಲ. ಅದನ್ನು ಸರಿಯಾದ ಕಾರಣವಿಲ್ಲದೆ, ಅವಗಣಿಸಿದ್ದಾರೆ.

ಕುಕ್ಕಿಲರ ವಾದದ ಎರಡು ಹಂತಗಳು

ಕುಂಬಳೆ ಪಾರ್ತಿಸುಬ್ಬನೇ ರಾಮಾಯಣ ಪ್ರಸಂಗಗಳು, ಐರಾವತ, ಕೃಷ್ಣ ಚರಿತೆ, ಸಭಾಲಕ್ಷಣ- ಕೃತಿಗಳ ಕರ್ತೃ ಎಂಬುದನ್ನು ಬಲವಾಗಿ ವಾದಿಸುತ್ತ ಬಂದ ಕುಕ್ಕಿಲರ ವಾದದಲ್ಲೂ ಎರಡು ಹಂತಗಳನ್ನು ಗುರುತಿಸಬಹುದು.
ಮೊದಲ ಹಂತದ ಅವರ ಬರಹಗಳಲ್ಲಿ (ರಾಷ್ಟ್ರಮತ ಸಾಪ್ತಾಹಿಕದಲ್ಲಿ ಬರದ ಲೇಖನಗಳು, ಕೋಟೆಕಾರಿನಲ್ಲಿ ಮಾಡಿದ ಭಾಷಣ ೧೯೬೨ (ಮುದ್ರಿತ) ಇತ್ಯಾದಿ).