ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೭೯

ಸತ್ಯವು । ಳ್ಳವರೊಳ್ ನಿ । ಮಿತ್ಯ ವ। ಕೇಳಿಕೊಳ್ಳಿ ।
ಮತ್ತಾವು । ದಕ್ಕೂ ಈಗ ಚಿತೈಸಿ । ಮನೆಗೆ ಬೇಗ ॥
ಕಾಣಲಿ । ಲ್ಲ ನಾನೆಂದು । ಆಣೆಯ । ಕೊಡುವ ನಿಮ್ಮ॥
ಜಾಣೆಯ । ರನ್ನ ಕಳವ । ಕಾಣಿಸಿ । ಕೊಡಿರ ಗೆಲವ ॥
ಧರೆಯೊಳು । ಕಣ್ವಪುರದ । ಕರುಣಿ ಶ್ರೀ । ಕೃಷ್ಣರಾಯನ ।
ಬರಿದ ದೂ ರುವುದೇಕೆ । ಮರುಳು ಹೆಮ್ಮೆ । ಕ್ಕಳಿರ ಜೋಕೆ!!!

ರಸವತ್ತಾದ ಈ ಸಂಭಾಷಣೆಯು ಇನ್ನೂ ಇಪ್ಪತ್ತು ಪದ್ಯಗಳಲ್ಲಿದೆ. ಕಡೆಗೆ 'ಬತ್ತಲೆ ನೀರ್ಗಿಳಿದ ಪ್ರಾಯಶ್ಚಿತ್ತವಾಗಿ ನೀವು ಸುರರ್ಗ ಭಕ್ತಿಯಿಂದ ನಮಿಸಿ'ದರೆ ವಸ್ತ್ರಗಳನ್ನು ಕೊಡುವೆ ಎಂದ ಮಾತಿಗೆ ಎಲ್ಲರೂ ದಡ ಹತ್ತಿ ಬಂದು ಹಾಗೆಯೆ ಮಾಡುತ್ತಾರೆ. ಆಗ ಇನ್ನೊಂದು ಯೋಚನೆ ಹೊಳೆಯಿತು ಕಳ್ಳ ಕೃಷ್ಣನಿಗೆ- ಒಬ್ಬಳ ಸೀರೆ ಇನ್ನೊಬ್ಬಳಿಗಾದರೆ? ಪ್ರಮಾದ! ಉಪಾಯವೇನು? ಅವರನ್ನೆ ಕೇಳುವುದು:

ಧಾರಿಣಿಯೊಳು । ಕಣ್ವಪುರದ । ಶ್ರೀ ರಂಗ ಗೋ । ಪಾಲನೆಂದ ।
ತೋರಿಸಿ ಸೀ । ರೆಯ ಗುರುತ ನಾರಿಯರ । ನಿಮ್ಮ ॥

ಎಲ್ಲರೂ ಬೇರೆಬೇರೆಯಾಗಿ ತಮ್ಮ ತಮ್ಮ ಸೀರೆಯ ರಂಗು, ಸರಗು, ಅಂಚು, ಕಂಬಿಗಳ ಗುರುತನ್ನು ಹೇಳುತ್ತಾರೆ. ಒಂದೆರಡು ಪದ್ಯಗಳನ್ನು ಓದುತ್ತೇನೆ:

ಆದಿತಾಳ:

ಹಳ್ಳಿಯವಳಲ್ಲ ನಾನು । ಹರ್ಷದಿಂದ ಉಟ್ಟಂಥದು ।
ಬೆಳ್ಳಿಯ ಕಂಬಿಯ ಸೀರೆ । ಲಾಲಿಸೋ ಬೇಗ ಪಾಲಿಸೊ ॥
ಅಚ್ಚುತಾನಂತ ಗೋವಿಂದ । ಅರಮನೆಯೊಳಗಿಂದ ।
ಮೆಚ್ಚಿಕೊಟ್ಟಂಥ ಸೀರೆಯ ತೋರಯ್ಯ- ಕೈಯೊಳ್ ತಾರಯ್ಯ ॥


ಕೊನೆಗಂತು ಎಲ್ಲರಿಗೂ ಅವರವರ ಸೀರೆಗಳು ಸಿಕ್ಕಿದುವು. ಎಲ್ಲರೂ ಉಟ್ಟುಕೊಂಡು 'ಬಹಳ ಹೊತ್ತಾಯಿತು ಇಂದು... ತಿಳಿದರೆ ಬೈಯುವರಮ್ಮ ಹಿರಿಯರೂ ಮನೆಯ ಕಿರಿಯರೂ' ಎಂದು ಗೋಪಿಯರು ಅವಸರದಿಂದೋಡುವಾಗ

ಮರದ । ಮೇಲಿಂ । ದಿಳಿದು ಕಣ್ವ । ಪುರದ ಸಿರಿಗೋ । ಪಾಲಕೃಷ್ಣ ॥
ನೆರೆದಗೊಲ್ಲ । ಹೆಂಗಳನೆಲ್ಲ । ನೋಡಿದ ಒಡಗೂಡಿದ ॥

ಭರತವಾಕ್ಯ
ವಾರ್ದಿಕ:

ಹರಿಯು ಈ ತೆರದಿ ಯಮುನಾನದಿಯ ತೀರದೂಳು ।
ತರುಣಿಯರನೊಡಗೂಡಿ ಸಂಗಡಲೆ ಗೋಕುಲಕೆ ।
ತೆರಳಿನಡೆತಂದು ಸುಖದಿಂದಿರ್ದನೆಂಬಲ್ಲಿ ಸಂಧಿ ಸಂಪೂ
ಅರಿತು ಕೇಳುವ ಪೇಳ್ವ ಪುಣ್ಯವಂತರ ಸಕಲ ।
ದುರಿತಮಂ ಪರಿಹರಿಸಿ ಕರುಣದಿಂ ಕಣ್ವಪುರ ।
ವರದ ಶ್ರೀಗೋಪಾಲಕೃಷ್ಣ ರಾಧಾರಮಣ ಪಾಲಿಸುವನ
ಓಂ ಸ್ವಸ್ತಿ

ತಾ. ೩೧-೫-೧೯೬
ಸಾಹಿತ್ಯ ಸಂಘ, ಕೋಟೆಕಾರು