ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಾ. ಎಂ. ಪ್ರಭಾಕರ ಜೋಶಿ- ಮಂಗಳೂರಿನ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರು. ಮೂಲತಃ ಕಾರ್ಕಳ ತಾಲೂಕಿನ ಮಾಳದವರು. ಎಂ. ಕಾಂ. (ಕರ್ನಾಟಕ ಐ.ಐ.) ಹಿಂದೀ ಸಾಹಿತ್ಯ ರತ್ನ (ಪ್ರಯಾಗ ವಿ.ವಿ.) ಮತ್ತು ಯಕ್ಷಗಾನದಲ್ಲಿ ಪಿಎಚ್‌.ಡಿ. (ಮಂಗಳೂರು ವಿ.ವಿ.) ಪದವೀಧರರು. ತಾಳಮದ್ದಲೆಯ ಅಗ್ರಪಂಕ್ತಿಯ ಅರ್ಥದಾರಿ, ಪ್ರಮುಖ ಯಕ್ಷಗಾನ ವಿಮರ್ಶಕ, ಸಂಶೋಧಕ, ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನ ಪದಕೋಶ, ವಾಗರ್ಥ, ಭಾರತೀಯ ತತ್ತ್ವಶಾಸ್ತ್ರ ಪರಿಚಯ- ಗ್ರಂಥಗಳ ಲೇಖಕ, ನಾಲ್ಕಾರು ಗ್ರಂಥಗಳ ಸಂಪಾದಕ. ಜಾನಪದ ಯಕ್ಷಗಾನ ಅಕಾಡೆಮಿಯ ಪುಸ್ತಕ ಪುರಸ್ಕಾರ, ಸಂದೇಶ ಪ್ರಶಸ್ತಿ ಸಹಿತ ಹಲವು ಮನ್ನಣೆಗಳು ಬಂದಿವೆ. ಶಿಕ್ಷಣ, ಸಾಹಿತ್ಯ, ಶಿಕ್ಷಕ ಸಂಘಟನೆ, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ನಿರತರು. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರ.