ಶೇಷಾನ್ ದೇವಗಣಾನ್ ಪ್ರಾಜ್ಞ ಸಾಪೂಪೋತ್ಕರಪಾಯಸೈ: |
ಶಿವವಿಷ್ಣು ಮಹೇಂದ್ರಾದ್ಯಾ: ಸಂಪೂಜ್ಯಾಃ ಕ್ಷೀರಮೋದಕೈ : ǁ
ಹೀಗೆ ಪ್ರತಿಯೊಂದು ದೇವತೆಗೂ ಪ್ರತ್ಯೇಕವಾಗಿ ಮಂತ್ರಪೂರ್ವಕವಾಗಿಯೇ ಸಮರ್ಪಿಸಬೇಕೆಂದಿದೆ. ಬಲಿಪೂಜೋಪಚಾರಗಳನ್ನು
ದೇವದೇವ ಮಹಾಯೋಗಿನ್ ಗಣೇಶ ತ್ರಿಪುರಾಂತಕ |
ಸಂಪ್ರಗೃಹ್ಯ ಬಲಿಂ ದೇವ ರಕ್ಷ ವಿಘ್ನಾತ್ ಸದೋಕ್ಷಿತಾತ್ ǁ
ದೇವಸೇನಾಪತೇ ಸ್ಕಂದ ಭಗವನ್ ಶಂಕರಪ್ರಿಯ |
ಪ್ರೀತೇನ ಮನಸಾ ದೇವ ಷಣ್ಮುಖ ಪ್ರತಿಗೃಹ್ಯತಾಂ ǁ
ನಾನಾನಿಮಿತ್ತ ಸಂಭೂತಾಃ ಪೌಲಸ್ಯಾಃ ಸರ್ವ ಏವ ತು |
ರಾಕ್ಷಸೇಂದ್ರಾ ಮಹಾಸಾಃ ಪ್ರತಿಗೃಹಂತ್ರಿಮಂ ಬಲಿಂ ǁ ಇತ್ಯಾದಿ.
ಇದರ ಅರ್ಥ ಸ್ಪಷ್ಟವೇ ಇದೆ. ವಿವರಿಸಬೇಕಾಗಿಲ್ಲವಷ್ಟೆ?
ಹೊಸತಾಗಿ ನಿರ್ಮಿಸಿದ ನಾಟ್ಯಶಾಲೆಯೊಳಗಾದರೆ ವಿಘೋಪಶಾಂತಿಗಾಗಿ ಹವನ ವನ್ನು ಮಾಡಬೇಕೆನ್ನುತ್ತಾನೆ. ನಾಟ್ಯಶಾಸ್ತ್ರದ ಆ ಪೂಜಾವಿಧಿಯ ವಿಧಾನಗಳನ್ನೆಲ್ಲ ನಾನು ಇಲ್ಲಿ ವಿವರಿಸಲಿಕ್ಕೆ ಹೋಗುವುದಿಲ್ಲ. ಅವುಗಳಲ್ಲಿ ಅತಿ ಮುಖ್ಯ ಲಕ್ಷಿಸಬೇಕಾಗಿರುವ ಇನ್ನು ಒಂದು ವಿಧಿಯನ್ನು ಮಾತ್ರ ಹೇಳಬೇಕು. ಯಾವುದೆಂದರೆ, ಆ ಸಂಧ್ಯಾಕಾಲದಲ್ಲಿ ರಂಗಸ್ಥಳವನ್ನು ದೀಪಿಕೆಗಳಿಂದ ನಮ್ಮಲ್ಲಿ ಇದನ್ನು 'ಕೋಲ್‌ರಿ' ಎನ್ನುತ್ತೇವೆ- ಬೆಳಗಿಸಿ, ಶಂಖ, ದುಂದುಭಿ ಮೃದಂಗಾದಿ ಸಕಲ ವಾದ್ಯ ನಿರ್ಘೋಷದೊಂದಿಗೆ ರಂಗಸ್ಥಳದಲ್ಲಿ ಕೋಳಿ ಅಂಕವನ್ನು ನಡೆಸಬೇಕೆಂಬುದು. ನಾಟ್ಯಶಾಸ್ತ್ರದ ಮೂರನೇ ಅಧ್ಯಾಯದ ಕೊನೆಗಿರುವ ಆ ಶ್ಲೋಕಗಳನ್ನು ಪರಿಭಾವಿಸಿರಿ :
ಪ್ರಗೃಹ್ಯ ದೀಪಿಕಾನ್ ದೀಪಾನ್ ಸರ್ವಂ ರಂಗಂ ಪ್ರದೀಪಯೇತ್ |
ಕ್ಷೇಡಿತೈ: ಸ್ಫೋಟಿತೈಶೈವ ವಲ್ಲಿತೈಶ್ಚ ಪ್ರಧಾವಿತೈ: ǁ
ಪಾದಾಯುಧ್ಯೆ: ಪ್ರಣುದಿತೈ: ರಂಗೇ ಯುದ್ಧಾನಿ ಕಾರಯೇತ್ |
ತತ್ರ ಭಿನ್ನಂ ಚ ಭಿನ್ನಂ ಚ ದಾರಿತಂ ಚ ಸಶೋಣಿತಂ |
ಕ್ಷತಪ್ರದೀಪ್ತ ಮಾಯಸ್ತಂ ನಿಮಿತ್ತಂ ವಿದ್ದಿ ಲಕ್ಷಣಂ ǁ
ಪಾದಾಯುಧಗಳೆಂದರೆ ಕೋಳಿಹುಂಜಗಳು, ಕೋಡಿತ ಎಂಬ ಶಬ್ದಕ್ಕೆ ಯುದ್ದೋ ತ್ಸಾಹದಿಂದ ಮಾಡುವ ವೀರೋದ್ಧಾರ, ಘರ್ಜನೆ (War cry, hissing, whistling) ಎಂದರ್ಥ. ಸ್ಫೋಟಿತವೆಂದರೆ ಗಾಳಿ ಹಾಕುವುದು, ರೆಕ್ಕೆ ಬೀಸಿ ಹುರಿದುಂಬಿಸುವುದು ಎಂದರ್ಥ. (Suddenly bursting winnowing with fan etc.), ವಶ್ಚಿತ ಎಂದರೆ ಮುಂದಕ್ಕೆ ನೆಗೆದು, ಕಾಲು ಕೆದರಿ ರೆಕ್ಕೆ ಬಡಿಯುವುದು ಎಂದರ್ಥ. ಪ್ರಣುದಿತೈಃ ಎಂದರೆ ಎದುರಾಗಿ ಕಾದುವ ಹುಂಜದ ಮುಂದಕ್ಕೆ ತಳ್ಳಲ್ಪಡುವುದು, ಮುನ್ನುಗ್ಗಿಸುವುದು ಎಂದರ್ಥ. ಇಂಗ್ಲಿಷಿನಲ್ಲಿ (to be leaped and gallopped, jumped, rounded up) (ನೋಡಿ : ಆಪ್ಟೆ, ಸಂಸ್ಕೃತ-ಇಂಗ್ಲಿಷ್ ಡಿಕ್ಷನರಿ) 'ಅಂಕ' ಶಬ್ದಕ್ಕೂ a sham fight, military show Dodds.ಎಂದರ್ಥ.
ಇಂದಿಗೂ ನಮ್ಮಲ್ಲಿ ನಡೆಯುತ್ತಿರುವ ಕೋಳಿ ಅಂಕದ ಪ್ರತ್ಯಕ್ಷ ಚಿತ್ರಣವಿದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಹಾಗೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆ ಎಂದರೆ ಭೂತದ ನೇಮ, ಕೋಲಗಳು ನಡೆಯುವ ರಂಗದಲ್ಲಿ ತಕ್ಕ ದಿನ