ಈ ಪುಟವನ್ನು ಪ್ರಕಟಿಸಲಾಗಿದೆ
ಕಾಲದ ವಿಚಾರ / ೨೦೧

ಬಡಗಕ್ರುಪಾ (ಪ್ಲಾ?) ಜ೧ ಬಂಡಾರಿಕುಂನ್ಯಂಣಜ
ಕೆಡಿಕಾವಿನ ಕುಷ್ಪಾಜ೧ ಕೊಡಿಯಂಮ ಲಿಂಗಂ
ಇಚಿಲಂಪಾಡಿ ರಗುವ ಜ೧ ಶಡಂಬಾರಿಶ್ರಗ
ಕಿದೂರ ಯೋಶ್ರ ಅಂ | ಜಲ್
ಅಂಗಡಿಮೊಗರು
ಪುತ್ತಿಗೆಯೊಶ್ರ ೧ ದೇಲಂಪಾಡಿ ಸುಬ್ಬಜ ೧
ಮುಗುವಿನ ಕ್ರುಷ್ಮಾ ೧ ಬಜಕೂಡಲ ಸುಬ್ಬಜ
ಕಾಟುಕುಕ್ಕೆ ವಿಷ್ಣುಜ ೧ ಅಂ | ಜ ೫
ಮೊಗ್ರಾಲಿಂದಾ
ಕಾಂಗುಳಿ ಕಾರುಮಾರ ಸುಬ್ಬಜ ೧
ಯೀಶ್ರ ಭಂಡಾರಿ ಜ೧ ಅಂ | ಜ೨
ಅನಂತಪುರ ಜ ೩ರ ವಿವರ ಸಂಕ್ಕೆ ಭಾಗೋತ್ರಜ ೧
ಪಾ | ಸುಬ್ಬನ ಯೊಶ್ರ ೧ ಬಡಗಕೃಷ್ಣಜ ೧ ಅಂ | ಜ ೩
ಶಿರುವಾಗಿಲು ಜ೧
ಕುದ್ರಪ್ಪಾಡಿ ಶ್ರಭಂಡಾರಿ ಜ ೧
ಅಂ | ಜ ೭

ಇಲ್ಲಿ ಕಾಣುವ ಪಿಂಗಳ ಸಂವತ್ಸರದ ಆ ದಿನವು ೧೭೯೭ನೆಯ ಇಸವಿ ಮೇ ತಿಂಗಳ ತಾ. ೧೪ನೇ ಭಾನುವಾರಕ್ಕೆ ಸರಿಯಾದದ್ದು. ಪ್ರಾಕು ದಾಖಲೆಯ ಪ್ರಕಾರ ಬರೆದ ಲೆಕ್ಕದ ನಕಲು ಎಂದಿದ್ದರೂ ಪಿಂಗಳ ಸಂವತ್ಸರದಲ್ಲಿ ನಡೆವ ಬಗ್ಗೆ ಬರೆದ ಲೆಕ್ಕವೆಂದಿರುವುದರಿಂದ, ಉತ್ಸವದ ವಿನಿಯೋಗದ ವಿವರಗಳ ಮಟ್ಟಿಗೆ ಪ್ರಾಕು ದಾಖಲೆಯಲ್ಲಿದ್ದದ್ದನ್ನ ಬರೆದುದಿರ ಬೇಕು ಹೊರತು ಕೆಲಸಕ್ಕೆ ಬರಬೇಕಾದ ಜನರ ಹೆಸರು ಉತ್ಸವ ನಡೆದ ಆ ಪಿಂಗಳ ಸಂವತ್ಸರದಲ್ಲಿ ಇದ್ದವರದೇ ಆಗಿರಬೇಕಲ್ಲದೆ ಪೂರ್ವಕಾಲದವರ ಹೆಸರನ್ನು ಬರೆದಿಡಲು ನ್ಯಾಯವಿಲ್ಲ. ಆದ್ದರಿಂದ ಇಲ್ಲಿ ಕಾಣುವ ಕಣಿಪುರ ಪಾರ್ತಿಸುಬ್ಬನು ಆ ಕಾಲದಲ್ಲಿದ್ದವ ನೆಂಬ ನಂಬಿಕೆಯುಂಟಾದುದು ಸಹಜವೇ ಆಗಿದೆ.

ಇದಕ್ಕೆ ಶಾಮೀಲಾಗಿ ಕಾಣುವ, ೧೮೨೭ನೆಯ ಇಸವಿಯ ಒಂದು ಕೋರ್ಟು ದಾಖಲೆ ಯನ್ನು ಅದೇ ಕೂಡಲು ಈಶ್ವರ ಶಾನುಭಾಗರು ಪ್ರಕಟಪಡಿಸಿದ್ದರು. ಅದರ ಪ್ರಕಾರ ಕಣಿಪುರ ಪೇಟೆಯಲ್ಲಿದ್ದ ಮಾನುದಾಸನೆಂಬವನ ತಮ್ಮ ಪಾರ್ತಿಸುಬ್ಬಣ್ಣನೆಂಬವನು ತನ್ನ ಬಾಬು 'ಮಾನುದಾಸ ಎಂಬ ವರ್ಗದ ಒಂದು ಹಿತ್ತಿಲನ್ನು ಆ ಕೂಡಲು ಮನೆಯ ಪೂರ್ವಿಕರಾದ ಪಾಡಿ ವೆಂಕಟೇಶ ಶ್ಯಾನುಭಾಗನ ಮಗ ಲಿಂಗಪ್ಪ ಎಂಬವನಿಗೆ ೧೮೨೬ನೆಯ ಇಸವಿ ವ್ಯಯ ಸಂವತ್ಸರದಲ್ಲಿ ಇಳಿದಾರ್ವಾರ (ಭೋಗ) ಮಾಡಿಕೊಟ್ಟಿರುತ್ತಿದ್ದ. ಆ ಸಂಬಂಧ ನಡೆದ ಕೋರ್ಟು ವ್ಯವಹರಣೆಯಲ್ಲಿ ಆ ಹಿತ್ತಿಲು, ವಾದಿಯಾಗಿದ್ದ ಲಿಂಗಪ್ಪನ ಸ್ವಾಧೀನ ಹೋಗಿತ್ತು. ಇದರಿಂದ, ಮೇಲೆ ಕಾಣಿಸಿದ ಮೂಡಪ್ಪದ ಲೆಕ್ಕದಲ್ಲಿರುವ ಪಾರ್ತಿಸುಬ್ಬನೇ ಈ ಪಾರ್ತಿಸುಬ್ಬಣ್ಣ ಹಾಗೂ ಅವನೇ ಕವಿ ಪಾರ್ತಿಸುಬ್ಬನೆಂಬ ನಂಬಿಕೆ ಮತ್ತೆ ಬಲಪಟ್ಟಿತು. ಕವಿ ಪಾರ್ತಿಸುಬ್ಬನೆಂದೇ ಪ್ರಸಿದ್ಧವಾಗಿದ್ದ ಒಂದು ಹಿತ್ತಿಲು ಕೂಡಲು ಮನೆಯವರಿಗೆ ಹೋಗಿದ್ದಿತ್ತೆಂಬುದರಿಂದ.

ಆದರೆ, ಆಮೇಲೆ ಸ್ವಲ್ಪ ಸಮಯ ದಾಟಿ ಅದೇ ಕೂಡಲು ಈಶ್ವರ ಶ್ಯಾನುಭಾಗರು, ತಮ್ಮಲ್ಲಿದ್ದ ಹಳೆಯ ದಾಖಲೆಗಳನ್ನೆಲ್ಲ ಶೋಧಿಸಿ ನೋಡಿದ್ದಲ್ಲಿ ಮೇಲಿನ ಕೋರ್ಟು