ಈ ಪುಟವನ್ನು ಪ್ರಕಟಿಸಲಾಗಿದೆ
ಕಥಕಳಿ / ೨೦೫

ಪ್ರಯೋಗಕ್ಕೆ ಬಂದ ಮೇಲೆಯೇ ಇದಕ್ಕೆ 'ಕಥಕಳಿ' ಎಂಬ ಹೆಸರು ವ್ಯವಹಾರಕ್ಕೆ ಬಂದಿರುವುದು. ಕಥಕಳಿ ಪ್ರಬಂಧಗಳಲ್ಲಿ ವೃತ್ತಗಳೂ, ತಾಳದ ಪದ್ಯಗಳೂ ಇರುವುದು ಹೊರತು ಗದ್ಯವಿರುವುದಿಲ್ಲ. ಪ್ರಾಯಶಃ ಎಲ್ಲವೂ 'ಮಣಿಪ್ರವಾಳ' ಭಾಷಾಶೈಲಿಯಲ್ಲಿ ರಚಿಸಲ್ಪಟ್ಟವು.

ಕೊಟ್ಟಾರಕರದ ರಾಜನು ತನ್ನ 'ರಾಮನಾಟ್ಟಂ' ಕೃತಿಗಳ ಆರಂಭಕ್ಕೆ, ತನ್ನನ್ನು ವಂಚಿ ರಾಜನಾದ ಕೇರಳವರ್ಮನ ತಂಗಿಯ ಮಗನೆಂದೂ ಶಂಕರ ಕವಿಯ ಶಿಷ್ಯನೆಂದೂ ಹೇಳಿಕೊಂಡಿರುತ್ತಾನೆ. ಆ ಸಂಸ್ಕೃತ ವೃತ್ತವು ಹೀಗಿದೆ :

ಪ್ರಾಪ್ತಾನಂತ ಘನಪ್ರಿಯಃ ಪ್ರಿಯತಮ ಶ್ರೀ ರೋಹಿಣೀ ಜನ್ಮನೋ |
ವಂಚಿಕ್ಷಾವರ ವೀರ ಕೇರಳ ವಿಭೋ ರಾಜ್ಯಃ ಸ್ವಸೋಃ ಸೂನುನಾ |
ಶಿಷ್ಯಣ ಪ್ರವರೇಣ ಶಂಕರಕವೇ ರಾಮಾಯಣಂ ತನ್ಯತೇ |
ಕಾರುಣ್ಯನ ಕಥಾಗುಣೇನ ಕವಯಃ ಕುರ್ವಂತು ತಾಂ ಕರ್ಣಯೋ ǁ

ಆ ಪ್ರಕಾರ ಕೇರಳವರ್ಮರಾಜನ ಸಮಕಾಲೀನನಾಗಿದ್ದು, ಕೃಷ್ಣ ವಿಜಯವೆಂಬ ಕಾವ್ಯದ ಕರ್ತೃವಾದ ಶಂಕರ ಕವಿಯು ಕೊಲ್ಲಂ ಶಕ ೬ನೇ ಶತಕದ ಮಧ್ಯಭಾಗದವ ನೆಂಬುದಕ್ಕೆ ಆಧಾರವಿರುವುದರಿಂದಲೂ, ಆಮೇಲೆ ಆಳಿದ ಕೇರಳವರ್ಮನ ಕಾಲದಲ್ಲಿ ಶಂಕರನೆಂಬ ಕವಿಯೊಬ್ಬನಿದ್ದನೆಂಬುದಕ್ಕೆ ಕೇರಳ ಸಾಹಿತ್ಯ ಚರಿತ್ರೆಯಲ್ಲಿ ಆಧಾರವಿಲ್ಲ ದಿರುವುದರಿಂದಲೂ ಕೊಟ್ಟಾರಕರದ ರಾಜನ ಕಾಲವು ಕೊಲ್ಲಂ ಶಕ ವರ್ಷ ೬೦೦-೭೦೦ ಅಥವಾ ಕ್ರಿ. ಶ. ೧೫೦೦-೧೬೦೦ರ ಮಧ್ಯಕಾಲವಿರಬೇಕೆಂದು ವಿದ್ವಾಂಸರು ನಿರ್ಣಯಿ ಸಿರುತ್ತಾರೆ.

ಸಂಸ್ಕೃತ ನಾಟಕಪ್ರಯೋಗವೆಂಬುದು ನಾಟ್ಯಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಆಂಗಿಕ, ವಾಚಿಕ, ಸಾತ್ವಿಕ, ಆಹಾರ್ಯ ಎಂಬ ನಾಲ್ಕು ವಿಧದ ಅಭಿನಯಗಳಿಂದ ಕೂಡಿದ್ದಾ ಗಿದ್ದರೆ ಕಥಕಳಿಯು ವಾಚಿಕಾಭಿನಯದಿಂದ ಸಂಪೂರ್ಣ ವಿರಹಿತವಾದ ಪ್ರಯೋಗವಾಗಿದೆ. ಆದರೆ, ಆರಂಭದೆಶೆಯಲ್ಲಿ ಇದು ಹೀಗಿದ್ದಿಲ್ಲವೆಂದೂ ಮಾತಿನ ಸಂಭಾಷಣೆ ಇಲ್ಲ ದಿದ್ದರೂ ಪದ್ಯಗಳನ್ನು ನಟರೇ ಹಾಡಿಕೊಂಡು ಕುಣಿಯುವ ಸಂಪ್ರದಾಯವಿದ್ದಿತೆಂದೂ ಕಥಕಳಿಯ ಚರಿತ್ರೆಯಿಂದ ತಿಳಿಯುವುದು. ಕ್ರಮೇಣ ನರ್ತನಕ್ಕೂ, ಅಂಗಾಭಿನಯಕ್ಕೂ ಹೆಚ್ಚಿನ ಪ್ರಾಶಸ್ತ್ರವನ್ನು ಕೊಡುವ ದೃಷ್ಟಿಯಿಂದ ಪದ್ಯಗಳನ್ನು ಹಾಡುವುದಕ್ಕಾಗಿ ಒಬ್ಬ ಪ್ರಧಾನ ಭಾಗವತನನ್ನೂ ಅವನ ಸಹಾಯಕ್ಕಾಗಿ 'ಸಂಗಡಿ' ಎಂಬುವನೊಬ್ಬ ಉಪಗಾಯಕ ನನ್ನೂ ನೇಮಿಸಿದ್ದಾಗಿದೆ. ಇದಲ್ಲದೆ ನರ್ತನ, ಹಸ್ತಾಭಿನಯ, ವೇಷರಚನೆ ಮುಂತಾದುವು ಗಳಲ್ಲಿಯೂ ಕಾಲಕಾಲಕ್ಕೆ ಕೆಲವೊಂದು ಸುಧಾರಣೆಗಳಿಗೆ ಒಳಪಡುತ್ತಾ ಬಂದಿರುವುದರಿಂದ ಇಂದಿನ ಕಥಕಳಿಯು ನಾಟ್ಯಶಾಸ್ರೋಕ್ತ ಲಕ್ಷಣಗಳಿಗಿಂತ ಬಹಳ ಮಟ್ಟಿಗೆ ಭಿನ್ನವೆಂದು ಕಾಣುವ ತನ್ನದೇ ಆದ ವಿಶಿಷ್ಟ ಸ್ವರೂಪವನ್ನು ಪಡೆದಿರುವುದು.

ಹಾಗೆ ಸುಧಾರಣೆಯನ್ನು ಮಾಡಿದವರಲ್ಲಿ ಕ್ರಮವಾಗಿ 'ವೆಟ್ಟತ್ತು ನಾಡಿ'ನ ಒಬ್ಬ ರಾಜನೂ, ಸ್ವತಃ ಕವಿಯೂ, ನಾಟ್ಯಶಾಸ್ತ್ರಜ್ಞನೂ ಆಗಿದ್ದ ಕೊಟ್ಟಾಯಂ ಎಂಬಲ್ಲಿಯ

ಇನ್ನೊಬ್ಬ ರಾಜನೂ ಕಮ್ಮಿಂಗಾಡು ನಂಬೂದಿರಿ ಮತ್ತು ಕಲ್ಲಡಿಕ್ಕಾಡು ನಂಬೂದಿರಿ


೧. Krishnan Nair, Attakatha-a Critical Study, Oriental Research Institute, Madras.