೨೧೬ / ಕುಕ್ಕಿಲ ಸಂಪುಟ
ಪ್ರವೃತ್ತಿ ಕಡಮೆಯಾಗುತ್ತ ಬಂದಿರುವುದರಲ್ಲಿ ಆಶ್ಚರ್ಯವಿಲ್ಲ. ದೊರಕಿದ್ದ ನಾಟ್ಯಶಾಸ್ತ್ರದ ಪ್ರತಿಗಳಲ್ಲಾದರೂ ಅದೆಷ್ಟೋ ತಪ್ಪುಗಳೂ, ಪಾಠದೋಷಗಳೂ, ಗ್ರಂಥಪಾತಗಳೂ, ಪ್ರಕ್ಷೇಪಗಳೂ ಹಚ್ಚೆ ಹಜ್ಜೆಗೂ ಕಂಡುಬರುವುದರಿಂದ ಮೂಲಗ್ರಂಥವನ್ನು ತಿಳಿದುಕೊಳ್ಳು ವುದು ಪ್ರಯಾಸವೇ ಆಗಿತ್ತು. ಮೂಲದ ಎಷ್ಟೋ ಪಾರಿಭಾಷಿಕ ಸಂಜ್ಞೆಗಳ ನಿಜಾರ್ಥವನ್ನು ಹುಡುಕುವುದು ಅಷ್ಟೇ ಕಷ್ಟವಾಗಿತ್ತು. ವ್ಯಾಖ್ಯಾನಗಳೂ ಉಪಲಬ್ಧವಿರಲಿಲ್ಲ. ಇಂದೀಗ ಹಾಗಲ್ಲ; ಅಭಿನವಗುಪ್ತಾಚಾರ್ಯನ ವ್ಯಾಖ್ಯಾನವು, ಹರಿಮುರಿಯಾಗಿಯಾದರೂ ದೊರೆತಿರುವುದರಿಂದ ಸ್ವಲ್ಪಮಟ್ಟಿಗೆ ಬೆಳಕು ಬಿದ್ದಂತಾಗಿದೆ. ಅದರ ಸಹಾಯದಿಂದ ನಾವೀಗ ನಾಟ್ಯಶಾಸ್ತ್ರವನ್ನು ಆಮೂಲಾಗ್ರ ಪರಿಶೀಲಿಸಿದಲ್ಲಿ, ನಾಟ್ಯದಲ್ಲಿ ನೃತ್ಯಗೀತಗಳ ಯೋಜನೆ ಹಾಗೂ ಔಚಿತ್ಯವೇನಿದೆ ಎಂಬುದನ್ನು ತಿಳಿಯಬಹುದಾಗಿದೆ. ಆ ಕುರಿತು ಪರಿಶೀಲಿಸಿದ್ದರಲ್ಲಿ ಗೋಚರವಾಗುವ ಕೆಲವೊಂದು ವಿಚಾರಗಳು ಸಂಕ್ಷೇಪವಾಗಿ ಹೀಗಿವೆ :
ಕಾಳಿದಾಸನು ಹೇಳಿರುವಂತೆ೧೩ ನಾಟ್ಯಶಾಸ್ತ್ರವು ಪ್ರಯೋಗಪ್ರಧಾನವಾದ ಶಾಸ್ತ್ರವೇ ಆಗಿರುವುದಾದರೂ ಪ್ರಯೋಗಾರ್ಹವಾದ ನಾಟಕಾದಿರೂಪಕಗಳನ್ನು ಕವಿಗಳು ಹೇಗೆ ರಚಿಸಬೇಕು, ಅವುಗಳ ಸಂಧಿಸಂಧ್ಯಂಗಾದಿವಸ್ತುವಿನ್ಯಾಸ, ಅಂಕ ವಿಭಾಗ, ಭಾಷೆ, ಛಂದಸ್ಸು, ವಾಕ್ಯರಚನೆ, ಅಲಂಕಾರಾದಿ ಕಾವ್ಯಗುಣಗಳು ಹೇಗಿರಬೇಕು ಎಂಬ ಲಕ್ಷಣ ಗಳನ್ನು, ವಾಚಿಕಾಭಿನಯದ ವಿಷಯವಾಗಿ ಭರತನು ಹೇಳಿರುತ್ತಾನೆ.೧೪ ಅಲ್ಲಿ ಶ್ಲೋಕ ವೃತ್ತಾದಿ ಪಾಠವಸ್ತುಗಳನ್ನಷ್ಟೇ ಕಾವ್ಯರಚನೆಗೆ ನಿರ್ದೇಶಿಸಿರುವುದು ಹೊರತು ಹಾಡತಕ್ಕ ಗೀತೆಗಳನ್ನು ಕವಿಗಳು ರಚಿಸಬೇಕೆಂದೇನೂ ಹೇಳಿರುವುದಿಲ್ಲ.೧೫ ಆ ಪ್ರಕರಣಾರಂಭ ಕ್ಕಿರುವ ಉದ್ದೇಶಾನುಕ್ರಮಣಿಯಲ್ಲಿಯೂ ಗೇಯ ರಚನೆಗಳ ಸೂಚನೆ ಇಲ್ಲ. ಕಾವ್ಯಬಂಧ ಗಳಲ್ಲಿ ಕವಿಗಳು ರಚಿಸಬೇಕಾಗಿರುವುದು ಇದಿಷ್ಟೇ ಎಂದರೆ ಪಾಠ್ಯವಿಷಯ ಮಾತ್ರ ಎಂದು ಹೇಳಿ ಆ ಪ್ರಕರಣವನ್ನು ಅಲ್ಲಿಗೇ ಮುಗಿಸಿಬಿಟ್ಟಿದ್ದಾನೆ. ಗೀತರಚನೆಯ ಕುರಿತು, ಮುಂದೆ ಅಭಿನಯ ವಿಚಾರಗಳನ್ನೆಲ್ಲ ಮುಗಿಸಿದ ಮೇಲೆ, ಕೊನೆಯದಾದ ಸಂಗೀತ ವಿಭಾಗದಲ್ಲಿ (ಆತೋದ್ಯವಿಧಿ) ಹೇಳುತ್ತಾನೆ. ನಾಟ್ಯಪ್ರಯೋಗದಲ್ಲಿ ಗೇಯಾಂಶಕ್ಕೆ ವಿಶೇಷ ಪ್ರಾಧಾನ್ಯವನ್ನು ಕೊಟ್ಟಿದ್ದರೂ, ಅರ್ಥವತ್ತಾದ ಹಾಗೂ ರಸಾನುಗುಣವಾದ ಗೀತವನ್ನೇ ಹಾಡುವುದಾಗಿದ್ದರೂ ಭರತನು ಸಂಗೀತವನ್ನು ಅಭಿನಯವೆಂದು ಪರಿಗಣಿಸಲಿಲ್ಲ. ನೃತ್ಯವನ್ನಾದರೆ ಆಂಗಿಕಾಭಿನಯದ ವಿಷಯವಾಗಿ ಪರಿಗಣಿಸಿರುತ್ತಾನೆ. ಆ ಲೆಕ್ಕದಲ್ಲಿ ಗೀತವನ್ನೂ ವಾಚಿಕಾಭಿನಯದ ಅಂಗವೆಂದೆಣಿಸಲು ನ್ಯಾಯವಿತ್ತು. ಹಾಗಿದ್ದರೂ ಅದನ್ನೇಕೆ ಹೊರತುಪಡಿಸಿದ್ದಾನೆ ಎಂದು ಯೋಚಿಸಿದರೆ ಕೆಲವು ವಿಚಾರಗಳು ವ್ಯಕ್ತ ವಾಗುತ್ತವೆ : ನಾಟ್ಯಪ್ರಯೋಗದಲ್ಲಿ ಅಭಿನಯವೆಂಬುದು ನಟರ ಕೆಲಸ, ಅಭಿನೇಯ
೧೩. 'ಪ್ರಯೋಗಪ್ರಧಾನಂ ಹಿ ನಾಟ್ಯಶಾಸ್ತ್ರಂ'(ಮಾ. ಅಗ್ನಿಮಿತ್ರ ಅಂ ೧)
'ವಾಚಾ ವಿರಚಿತಃ ಕಾವ್ಯನಾಟಕಾದಿತ್ತು ವಾಚಕಃ(ಸಂ. ರ. ೭-೨೨)
೧೪. ವೃರೇವಂ ತು ವಿವಿಧರ್ನಾನಾಛಂದಃ ಸಮುದ್ರತ್ಯೆ
ಕಾವ್ಯಬಂಧಾಸ್ತು ಕರ್ತವ್ಯಾಃ ಷಟ್‌ತ್ರಿಂಶಲ್ಲ ಕ್ಷಣಾನ್ವಿತಾಃ|| ೧೬೯ ||
೧೫. ದಶರೂಪ ವಿಧಾನೇತು ಯೋಜ್ಯಂ ಪಾಠಂ ಪ್ರಯೋಕ್ರಭಿಃ|| ೭೭ ||