ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೧೯

ಅಸಂಖ್ಯವಾಗುತ್ತವೆ ಎಂಬುದನ್ನು ಅಭಿನವಗುಪ್ತನು ಹೀಗೆ ಹೇಳುತ್ತಾನೆ- 'ಗುರು ಲಘು ಸನ್ನಿವೇಶ ಅಕ್ಷರಮಾಶ್ರೀಯತ್ತಾ ರಸಭಾವಪ್ರಕೃತಿಭೇದಶ್ಚ | ತದಾಶ್ರಯೇಣ ಪ್ರಕಾರ ನಾನಾಂ | ತಥಾಹಿ ಪ್ರಾವೇಶಿಕಾ ಏವ ಸ್ಥಿತಾಕಾರಾದಿ ಭೇದಾಂತರಾತ್... ಛಂದೋವೃತ್ತ ಭೇದಾಚ್ಚ ಸಂಖ್ಯಾಭೇದಾಃ |

ಹೀಗೆ ನಾನಾ ರಸಭಾವ ಸಂದರ್ಭಗಳಿಗಿರುವ ಗೀತೆಗಳನ್ನು ಆಯಾ ಸಂದರ್ಭಗಳಿಗೆ ಉಚಿತವಾದ ಔಪಮ್ಮ ಗುಣದಲ್ಲಿ ರಚಿಸಬೇಕು ಎನ್ನುತ್ತಾನೆ. ನಾಟಕದಲ್ಲಿ ಬರುವ ನಾನಾ ಭೂಮಿಕೆಗಳ ಜಾತಿ, ಸ್ವಭಾವ, ಗುಣ, ಧರ್ಮ, ವಯಸ್ಸು, ರೂಪಾದಿಗಳ ತಾರತಮ್ಯಕ್ಕನುಸಾರವಾಗಿ ಒಂದೊಂದಕ್ಕೂ ಯಾವ ಯಾವ ಪ್ರಾಣಿಗಳು ಅಥವಾ ವಸ್ತು ಗಳು ಉಪಮಾನವಾಗಿ ಸಲ್ಲುತ್ತವೆ ಎಂಬುದನ್ನೂ ಹೇಳುತ್ತಾನೆ. ಇಂಥ ನೂರಾರು ಗೀತೆಗಳನ್ನು ಭರತನು ತಾನೇ ಉದಾಹರಿಸಿರುವುದಲ್ಲದೆ ನಾಟ್ಯಾಚಾರ್ಯನೇ ಮೊದಲಾದ ನಾಟಕ ಪ್ರಯೋಕ್ಷಗಳು ಸಂದರ್ಭೋಚಿತವಾಗಿ ಬೇಕಷ್ಟು ಗೀತೆಗಳನ್ನು ರಚಿಸಿಕೊಳ್ಳ ಬೇಕೆಂದು ಹೇಳಿದ್ದಾನೆ. ಪ್ರತಿಯೊಂದು ಗೀತಕ್ಕೂ ಅದು ಪ್ರಯೋಗಿಸಲ್ಪಡುವ ಸಂದರ್ಭದ ರಸಭಾವಗಳಿಗನುಗುಣವಾಗಿ ವಿಶಿಷ್ಟ ರೀತಿಯ ಬಂಧ, ವರ್ಣವಿನ್ಯಾಸ, ತಾಳ, ಲಯ, ಸ್ವರಾಲಂಕಾರ ಹಾಗೂ ರಾಗ ರಾಗ ಜಾತಿಗಳು ಒಂದಕ್ಕೊಂದು ನಿಯತವಾದ ಸಂಬಂಧವನ್ನು ಹೊಂದಿಕೊಂಡಿರಬೇಕು ಎನ್ನುತ್ತಾನೆ. ವೀರೋತ್ಸಾಹ ಸಂದರ್ಭದಲ್ಲಿ ಉತ್ತಮ ಪುರುಷಪಾತ್ರವೊಂದು ರಂಗವನ್ನು ಪ್ರವೇಶಿಸುವಾಗ ಹಾಡತಕ್ಕ ಪ್ರಾವೇಶಿಕೀ . ಧ್ರುವಾಗೀತ (ಆಕ್ಷಿಪ್ತಿಕಾ, ಶೀರ್ಷಕಾ) ಒಂದರ ತಾಳಲಯಾದಿಗಳಾವುವೂ ಅದೇ ಪಾತ್ರದ


೧೮.ಆದಿತ್ಯಸೋಮಪವನಾ ದೇವಪಾರ್ಥಿವಯೋರ್ಮತಾಃ
ದೈತ್ಯಾನಾಂ ರಾಕ್ಷಸಾನಾಂ ಚ ಮೇಘಪರ್ವತಸಾಗರಾಃǁ೩೫೩ǁ
ಸಿದ್ಧ ಗಂದರ್ವಯಕ್ಷಾಣಾಂ ಗೃಹೋರು ವೃಷಭಾ ಮತಾಃ
ತಪಃ ಸ್ಥಿತಾನಾಂ ಸರ್ವೇಷಾಂ ಸೂರ್ಯಾಗ್ನಿ ಪವನಾ ಮತಾಃ
ಹವ್ಯವಾಹಸ್ತು ವಿಪ್ರಾಣಾಂ ಏಚಾನೇ ಚ ತಪಃ ಸ್ಥಿತಾಃ
ಏತೇಷಾಮೇವಯಾ ನಾರ್ಯಸ್ತಾಸಾಮೌನಮ್ಮ ಸಂಶ್ರಯಾ
ವಿದ್ಯುದುಲಾರ್ಕರಾದಿ ದಿವ್ಯಾನಾಮಪಿ ಚ ಸ್ಮೃತಾಃ
ದೇವಾನಾಂ ತು ಪ್ರಯೋಜ್ಯಾ ಯೇ ನೃಪಾಣಾಮಪಿ ತೇ ಸ್ಮೃತಾಃ
ಉತ್ತಮಾನಾಂ ಪ್ರಯೋಕ್ತವ್ಯಾ ನಾನಾ ರಸ ಸಮಾಶ್ರಯಾಃ
ಮತ್ತಮಾತಂಗ ಸಹಿತಾ ರಾಜಹಂಸಾಶ್ಚಯೋಭಿ
ಕೋಕಿಲಂ ಷಟ್ಟದಂ ಧ್ಯಾಂಕ್ಷಂ ಕುರರಂ ಕೌಶಿಕಂ ಬಕಂ
ಪಾರಾವತಂ ಸಕಾದಂಬಮಧಮೇಷು ಪ್ರಯೋಜಯೇತ್
ಶರ್ವರೀಚ ಸುಧಾ ಜ್ಯೋತ್ಸಾ ನಲಿನೀ ಕರಿಣೀ ನದೀ
ನೃಪಣಾಂ ಭವಂತಾ ಔಪಮ್ಮ ಗುಣಸಂಶ್ರಯಾಃǁ೩೬೨ǁ
ಯದ್ರವ್ಯಂ ವಸುಧಾಸಂಸ್ಥಂ ಋತೇ ದೈವತ ಮಾನುಷಾತ್
ತತ್ಸರ್ವಮುಪನೇಯಂ ತು ಗಾನಯುಪಮಾಶ್ರಯಂǁ೩೬೯ǁ
೧೯.ಏವಂ ಭಾವಾನ್ ವಿದಿತಾತು ಧ್ರುವಾ ಕಾರ್ಯಾ ಪ್ರಯೋಕ್ಷಭಿಃ
ವಸ್ತು ಪ್ರಯೋಗಂ ಪ್ರಕೃತಿಂ ರಸಭಾವಾನ್ವಪುಂ ವಯಃ
ದೇಶಂ ಕಾಲಮವಸ್ಥಾಂ ತು ಜ್ಞಾತ್ವಾ ಯೋಚ್ಯಾ ಧ್ರುವಾ ಬುದ್ಧǁ೩೪೫ǁ
ವ್ಯಾ 'ನಾಟ್ಯಾಚಾರ್ಯೋತ್ರಪ್ರಯೋಜಕಃ(ನಾ. ಶಾ. ಅ. ೩೨)