ಈ ಪುಟವನ್ನು ಪ್ರಕಟಿಸಲಾಗಿದೆ

೨೨೨ / ಕುಕ್ಕಿಲ ಸಂಪುಟ

ಗಡುಸಾಗಿರುವುದಿಲ್ಲ. ರೋಷಾವೇಶ, ರೌದ್ರಾದ್ಭುತ ಸನ್ನಿವೇಶಗಳಲ್ಲಿ ಉದ್ಧತ ನೃತ್ಯ ವಿದ್ದರೆ ಆಗ ಗೀತೆಗಳನ್ನು ಹಾಡುವುದಿಲ್ಲ. ಅಂಥಲ್ಲಿ ತಾಳವಿಧಿಗನುಸಾರವಾದ ವಾದ ಘೋಷಗಳಿಂದ ಮಾತ್ರ ನಿರ್ವಹಿಸಬೇಕು.೨೭ ಈ ಸಂದರ್ಭಗಳಲ್ಲಿ ಪಾತ್ರಗಳು ಅತಿ ಸಂಭ್ರಮದಿಂದ ಪ್ರವೇಶಿಸುವಾಗ ಹಾಗೂ ಹೊರಟುಹೋಗುವಾಗ ಸಹ ಧ್ರುವಗಳನ್ನು ಹಾಡುವುದಿಲ್ಲ.೩೮ ವಾದ್ಯಗಳ ಛಂದೋಗತಿಗನುಸಾರವಾದ ನೃತ್ಯಗತಿಯಲ್ಲಿ ಅವುಗಳು ಪ್ರವೇಶಿಸುತ್ತವೆ. ಯುದ್ಧ ಮಾಡುತ್ತಿರುವಾಗಲೂ ವಾದ್ಯಗಳೇ ಹೊರತು ಗೀತಗಳಿಲ್ಲ. ಗೀತಸಹಿತವಾದ ಇತರ ಸಂದರ್ಭಗಳಲ್ಲಿಯೂ ಸಾಮಾನ್ಯವಾಗಿ, ಗೀತದುದ್ದಕ್ಕೂ ನರ್ತನ ವಿರುವುದಿಲ್ಲ. ಸ್ವಲ್ಪಾಂಶ ನಾಟ್ಯಾಭಿನಯ, ಸ್ವಲ್ಪಾಂಶ ವೃತ್ತ ಹೀಗೆ ಸಾಗುತ್ತದೆ. ಆದರೆ ಗೀತ ಕಾಲದಲ್ಲಿ ಪಾತ್ರಗಳು ಸುಮ್ಮನೇ ನಿಂತಿರುವಂತೆ ಇಲ್ಲ. ತಾಳಕ್ಕೆ ತಕ್ಕ ಹೆಜ್ಜೆ ಇಟ್ಟುಕೊಂಡು, ಭಾವಕ್ಕೆ ತಕ್ಕ ಅಂಗಚೇಷ್ಟೆಗಳಿಂದ ರಂಗಕ್ಕೆ ಸುತ್ತಾಡುತ್ತಾ ಅಡ್ಡಾಡುತ್ತಾ ಇರುತ್ತವೆ.೨೯ ಇದಕ್ಕೆ ಗತಿಪ್ರಚಾರ, ಪರಿವರ್ತನ, ಪರಿಕ್ರಮಣ ಎಂಬ ಸಂಜ್ಞೆಗಳಿವೆ. ಹೆಚ್ಚಿನ ಗೀತ ಸಂದರ್ಭಗಳಲ್ಲಿ, ಮುಖ್ಯವಾಗಿ ಪ್ರವೇಶಕಾಲದಲ್ಲಿ ಗೀತವಾದ ನೃತ್ಯಗಳು ಏಕಕಾಲದಲ್ಲಿ ಒಟ್ಟಿಗೇ ಸುರುವಾಗುವುದಿಲ್ಲ. ಗಾಯಕನು ಗೀತವನ್ನಾರಂಭಿಸಿ ಒಂದಿಷ್ಟು ಮುಂದುವರಿಯುವಾಗ ವಾದ್ಯಗಳು ತೊಡಗುತ್ತವೆ.೩೦ ವಾದ್ಯಗಳಲ್ಲಿ ತಾಳದ ಒಂದೆರಡು ಆವರ್ತನಗಳಷ್ಟು ಮುಂದುವರಿಯುವಾಗ ಪಾತ್ರಗಳು ಆ ತಾಳಗತಿಯಿಂದ ಪ್ರವೇಶಿಸಿ, ಮುಂದೆ ವಾಚ್ಯವಾಗಿ ಹೇಳಲಿಕ್ಕಿರುವ ವಾಕ್ಯಾರ್ಥಗಳನ್ನು ಸೂಚಿಸುವ ಸೂಚೀ೩೧,ಅಂಕುರ ಮೊದಲಾದ ಅಭಿನಯಗಳೊಂದಿಗೆ ರಂಗಪರಿವರ್ತವನ್ನು ಮಾಡುತ್ತವೆ. ಕೊನೆಗೆ ಗೀತಾವಸಾನದಲ್ಲಿ 'ಗೀತಮೋಕ್ಷ'ದ ವಾದ್ಯವಿಧಿಗೆ ಅನುಸಾರವಾಗಿ ಕುಣಿದು ನಿಲ್ಲುತ್ತವೆ. ಆಮೇಲೆ ನಾಟಕದ ಮಾತುಕಥೆ, ಅಭಿನಯ ಇತ್ಯಾದಿಗಳು ಕ್ರಮದಂತೆ ನಡೆಯುತ್ತವೆ.


೨೭. ಸಂಭ್ರಮಾವೇಗಹರ್ಷೇಷು ಪ್ರವೇಶಾ ಯೇ ಭವಂತಿ ಹಿ
ಗ್ರಹೋಗಾನ ಸಮೋ ಯತ್ರ ಸೋದ್ಘಾತ್ಯಃ ಸಂಪ್ರಕೀರ್ತಿತಃ
ಭೂಷಣವಾಸಃ ಪತನೇ ವೈಕ ವಿಸ್ಮತೇ ಪರಿಶ್ರಾಂತೇ
ದೋಷಾಚ್ಛಾದನಹೇತೋರುದ್ಧಾತ್ಯಃ ಸಂಪ್ರಯೋಜ್ಯಸ್ತುǁ ೪೨೩ ǁ
ವ್ಯಾ- ಸಂಭ್ರಮಾದೌ ಉದ್ಘಾತ್ಯೇನ ಉದ್ರೇಕಹನನಾರ್ಹೇಣ 'ಖಲಖಲೇನ'

(ನಾ. ಶಾ. ಅ. ೩೨)

ಸಂಭ್ರಮಾವೇಗ ಹರ್ಷಾರ್ಥ ವಿಸ್ಮಯೋತ್ಸಾಹಶೋಕಜೇ |
ಗ್ರಹೋಗಾನಸ್ಮಯದ್ವಾದ್ಯಮುದ್‌ಘಾತ್ಯಂ ಸಂಪ್ರಕೀರ್ತಿತಂ ǁ(ಅ. ೩೪-೨೪೯)

೨೮. ಅಪಟಾಕ್ಷೇಪ ಕೃತಾ ಚೇದಾತ್ಯಯಿಕೀ ಹರ್ಷರಾಗಶೋಕೋಭ್ಯ
ವಿಚ್ಛೇದಸ್ತತ್ರ ಸಮಃ ಕಾರ್ಯಜ್ಞೆ: ಪ್ರವೇಶೇಷುǁ ೪೧೩ ǁ

೨೯. ಗತ್ಯಾಶ್ರಯೇಣ ನಾಜ್ಞೆ: ಪಾದ್ಯರನುಗತೈಸ್ತಥಾ
ಪರಿಕ್ರಮೇಣ ರಂಗಸ್ಯ ಗಾನೇನಾರ್ಥವಶೇನ ಚ ǁ

(ನಾ. ಶಾ. ಅ. ೩೨)

೩೦. ಪೂರ್ವ೦ ಗಾನಂ ತತೋ ವಾದ್ಯಂ ತತೋ ನೃತ್ತಂ ಪ್ರಯೋಜಯೇತ್ǁ ೩೭೮ ǁ

೩೧. ನಿವೃತ್ತಂಕುರಸೂಚಾಸು ಕಾರ್ಯಭಿನಯಾನ್ವಿತಃ
ತತ್ರ ಪ್ರಾಸಾದಿಕೀ ಯೋಚ್ಯಾ ಪ್ರಹರ್ಷಾರ್ಥಗುಣೋದ್ಭವಾ ǁ

(ನಾ. ಶಾ. ಅ. ೩೨)