ಈ ಪುಟವನ್ನು ಪ್ರಕಟಿಸಲಾಗಿದೆ

೨೩೪ / ಕುಕ್ಕಿಲ ಸಂಪುಟ

ಮಹಾಭಾರತದಲ್ಲಿಯೂ ಅಶ್ವಮೇಧದ ಸಂದರ್ಭದಲ್ಲಿ ಪಶ್ಚಿಮ ದಿಗ್ವಿಜಯಕ್ಕೆ ಹೊರಟ ನಕುಲನು ಅಲ್ಲಿರುವ ಯವನರನ್ನು ಜಯಿಸಿದನೆಂಬ ವರ್ಣನೆಯಿದೆ-

ತತೋ ಸಾಗರ ಕುಷಿಸ್ಥಾನ ಮೇಲ್ಮಾನ್ ಪರಮದಾರುಣಾನ್
ಪಹ್ಮವಾನ್ ಬಾರ್ಬರಾಂಶೈವ ಕಿರಾತಾನ್ ಯವನಾನ್ ಶಕಾನ್
ತತೋ ರತ್ನಾನ್ಯುಪಾದಾಯ ವಶೇಕೃತಾತು ಪಾರ್ಥಿವಾನ್
ನ್ಯವರ್ತತ ಕುರುಶ್ರೇಷ್ಟೋ ನಕುಲಶ್ಚಿತ್ರ ಮಾರ್ಗವಿತ್ ||

(ಮ. ಭಾ. ಸಭಾ. ಅ. ೩೨)

ಮಹಾಭಾರತದಲ್ಲಿ ಇನ್ನೂ ಕೆಲವೆಡೆ ಯವನರನ್ನು ಕುರಿತಾದ ಸಂದರ್ಭಗಳು ಹೀಗಿವೆ :

ಕರ್ಣನು ನಾನಾ ಜನಾಂಗದವರ ಸ್ವಭಾವಗುಣಗಳನ್ನು ಶಲ್ಕನಿಗೆ ವಿವರಿಸುತ್ತಾ ಯವನರನ್ನೂ ಕುರಿತು-

ಸಮರ್ಥಾ ಯವನಾ ರಾಜನ್‌ ಶೂರಾವ ವಿಶೇಷತಃ ಎನ್ನುತ್ತಾನೆ.

ಶಾಂತಿಪರ್ವದಲ್ಲಿಯೂ ನಾನಾದೇಶದ ಯೋಧರುಗಳ ಸ್ವಭಾವಗುಣಗಳನ್ನು ವರ್ಣಿಸುವಲ್ಲಿ-

ತಥಾ ಯವನ ಕಾಂಭೋಜಾ: ಮಥುರಾಮಭಿತಶ್ಚಯೇ
ಏತೇ ನಿಯುದ್ಧ ಕುಶಲಾ:-ಎ೦ದಿದೆ.

ಭೀಷ್ಮಪರ್ವದಲ್ಲಿ, ಭಾರತವರ್ಷದ ಜನಪದ ವರ್ಣನೆಯಲ್ಲಿಯೂ ಹೀಗಿದೆ :

ಋಷಿಕಾ ವಿಭಡಾ: ಕಾಕಾಸಂಗಣಾ ಪರತಂಗಣಾ
ಉತ್ತರಾಶ್ಚಾಪರಾಯ್ತಚ್ಛಾ: ಶೂರಾಭರತ ಸತ್ತಮ
ಯವನಾಯ್ಕನ ಕಾಂಭೋಜಾಃ ದಾರುಣಾ ಮೈಚ್ಛಜಾತಯಃ
ಸಕೃದ್ಧಹಾಃ ಕುಲುತ್ಮಾಶ್ಚ ಹೂಣಾಃ ಪಾರಸಿಕ್ಕೆ: ಸಹ

ವನಪರ್ವದಲ್ಲಿ ಕಲಿಪ್ರಭಾವ ಕಥನ :

ಬಹವೋ ಮೇಚ್ಛರಾಜಾನಃ ಪೃಥಿವ್ಯಾಂ ಮನುಜಾಧಿಪ
ಮೃಷಾನುಶಾಸಿನಃ ಪಾಪಾಮೃಷಾವಾದ ಪರಾಯಣಃ
ಆಂಧ್ರಾ ಶಕಾಃ ಪುಳಿಂದಾಶ್ಚ ಯವನಾಶ್ಚ ನರಾಧಿಪಾ
ಕಾಂಭೋಜಬಾಹ್ಲಿಕಾಶೂರಾಧಾಭೀರಾನರೋತ್ತಮ-ಇತ್ಯಾದಿ.

ರಾಮಾಯಣದಲ್ಲಿಯೂ ಯವನರನ್ನು ಅಶ್ವಾರೋಹಿಗಳಾದ ವೀರಯೋಧರೆಂದು ವರ್ಣಿಸಲಾಗಿದೆ. ಹೀಗೆ ನಾನಾ ಗ್ರಂಥಗಳಲ್ಲಿ ವರ್ಣಿಸಿರುವ ಪ್ರಕಾರ ಯವನರು ಸಿಂಧು, ಪಂಚನದ, ಗಾಂಧಾರ, ಸೌವೀರ, ಕಾಂಭೋಜ ದೇಶಗಳ ಪಶ್ಚಿಮಕ್ಕಿರುವ ಜನಾಂಗ ವೆಂದೂ, ಅಶ್ವಾರೋಹಿಗಳಾದ ವೀರಯೋಧರೆಂದೂ ತಿಳಿಯುವುದಲ್ಲದೆ ಪುರಾತನ ಕಾಲದ ನಮ್ಮ ರಾಜರುಗಳ ಯುದ್ಧೋದ್ಯಮಗಳಲ್ಲಿ ಅವರು ಸಹಾಯಕರಾಗಿಯೂ, ಇದಿರಾಳುಗಳಾಗಿಯೂ ಕಾಣಿಸಿಕೊಳ್ಳುತ್ತಾರೆ.

ಪರ್ಶಿಯದೊಡನೆ ಮಾತ್ರವಲ್ಲ, ಅರೇಬಿಯಾದೊಡನೆಯೂ ನಮಗೆ ಬಹು ಪುರಾತನ ಕಾಲದಿ೦ದಲೇ ಸಂಪರ್ಕವಿತ್ತು. ಅವರನ್ನು ನಾವು ಯವನರೆಂದೇ