ಈ ಪುಟವನ್ನು ಪ್ರಕಟಿಸಲಾಗಿದೆ

ಸಂಗೀತ ರತ್ನಾಕರ - ವ್ಯಾಖ್ಯಾನ
ಸ್ವರಾಧ್ಯಾಯ

ನಾದೋತಿ ಸೂಕ್ಷ್ಮ: ಸೂಕ್ಷ್ಮಶ್ಚ ಪುದ್ಯೋSಪುಷ್ಪಶ್ಚ ಕೃತ್ರಿಮ:
ಇತಿ ಪಂಚಾಭಿಧಾ೦ ಧತ್ತೇ ಪಂಚಸ್ಥಾನಸ್ಥಿತಃ ಕ್ರಮಾತ್ǁ೫ǁ

ಮನುಷ್ಯ ಶರೀರದಲ್ಲಿ ಹುಟ್ಟುವ ನಾದವು ನಾಭಿ, ಹೃಯ, ಕಂಠ, ಶಿರಸ್ಸು, ಮುಖ ಈ ಐದು ಸ್ಥಾನಗಳಲ್ಲಿ ಇರುವಾಗ ಕ್ರಮವಾಗಿ ಅತಿಸೂಕ್ಷ್ಮ, ಪುಷ್ಪ, ಅಪುಷ್ಪ, ಕೃತ್ರಿಮ ಎಂಬ ಐದು ಹೆಸರುಗಳನ್ನು ಪಡೆಯುತ್ತದೆ. ನಾದ ಶಬ್ದಕ್ಕೆ ಮಂತ್ರ ಶಾಸ್ತ್ರಾನುಸಾರವಾದ ನಿರ್ವಚನವನ್ನು ಹೇಳುತ್ತಾನೆ :
ನಕಾರಂ ಪ್ರಾಣ ನಾಮಾನಂ ದಕಾರಮನಲಂ ವಿದುಃ
ಜಾತಃ ಪ್ರಾಣಾಗ್ನಿಸಂಯೋಗಾದ್ರೇನ ನಾದೋಽಭಿಧೀಯತೇǁ೬ǁ

ನ ಎಂಬ ಅಕ್ಷರವನ್ನು ಪ್ರಾಣ ಎಂದೂ, 'ದ' ಎಂಬ ಅಕ್ಷರವನ್ನು ಅಗ್ನಿ ಎಂದೂ ತಿಳಿಯಲಾಗಿದೆ. ಪ್ರಾಣ (ವಾಯು) ಮತ್ತು ಅಗ್ನಿ ಇವೆರಡರ ಸಂಯೋಗದಿಂದ ಹುಟ್ಟಿದ್ದಾಗಿ ಇದನ್ನು 'ನಾದ' ಎಂದು ಹೇಳಲಾಗಿದೆ.
ವ್ಯವಹಾರೇತ್ಯಸೌ ತ್ರೇಧಾ ಹೃದಿ ಮಂದ್ರೋSಭಿಧೀಯತೇ
ಕಂಠೇ ಮಧ್ಯೆ ಮೂರ್ಥಿ ತಾರೋ ದ್ವಿಗುಣಕ್ಕೋತ್ತರೋತ್ತರ:ǁ೭ǁ

(ಹಿಂದೆ ಹೇಳಿದ ಪ್ರಕಾರ) ಶರೀರದಲ್ಲಿ ಪ್ರಾಣಾಗ್ನಿ ಸಂಯೋಗದಿಂದ ಹುಟ್ಟುವ ಈ ನಾದವು ಆಗಮಾದಿಗಳಲ್ಲಿ ಅತಿಸೂಕ್ಷ್ಮ, ಸೂಕ್ಷ್ಮ, ಪುಷ್ಪ, ಅಪುಷ್ಪ, ಕೃತ್ರಿಮ ಎಂದು ಐದು ಸಂಜ್ಞೆಗಳನ್ನು ಪಡೆದಿರುವುದಾದರೂ ಲೋಕರೂಢಿಯಲ್ಲಿ ಅದು ಹೃದಯಸ್ಥಾನ ದಲ್ಲಿ ಮಂದ್ರನಾದವೆಂದೂ, ಕಂಠಸ್ಥಾನದಲ್ಲಿ ಮಧ್ಯವೆಂದೂ, ಶಿರಸ್ಥಾನದಲ್ಲಿ ತಾರ ಎಂದೂ ಮೂರೇ ವಿಧವಾಗಿ ವ್ಯವಹಾರದಲ್ಲಿರುವುದು. ಈ ನಾದವು ಸ್ಥಾನದಿಂದ ಸ್ಥಾನಕ್ಕೆ ಉತ್ತರೋತ್ತರವಾಗಿ ದ್ವಿಗುಣಿತವಾಗುವುದು; ಎಂದರೆ ಇಮ್ಮಡಿ ತೀವ್ರವಾಗುವುದು ಎಂದರ್ಥ.
ತಸ್ಯದ್ವಾವಿಂಶತಿರ್ಭೇದಾಃ ಶ್ರವಣಾತ್‌ ಶ್ರುತಯೋಮತಾಃ |
ಹೃದೂರ್ಧ್ವ ನಾಡೀ ಸಂಲಗ್ನಾ ನಾಡೋ ದ್ವಾವಿಂಶತಿರ್ಮತಾǁ೮ǁ
ತಿರಶ್ಚಾಸ್ತ್ರಾಸುತಾವತ್ಯಃ ಶ್ರುತಯೋಮಾರುತಾಹತಾಃ |
ಉಚ್ಚಚ್ಚತರತಾಯುತ್ತಾ: ಪ್ರಭವಂತ್ಯುತ್ತರೋತ್ತರಂǁ೯ǁ
ಏವಂ ಕಂಠೇ ತಥಾ ಶೀರ್ಷ ಶ್ರುತಿರ್ದ್ವಾವಿಂಶತಿರ್ಮತಾಃ

ಹೀಗೆ ತ್ರಿಸ್ಥಾನಗತವಾದ ನಾದಕ್ಕೆ ೨೨ ಭೇದಗಳಿವೆ. ಅವುಗಳಿಗೆ ಶ್ರುತಿಗಳೆಂದು ಹೆಸರು. 'ಶ್ರವಣಾತ್' ಎಂದರೆ ಕಿವಿಗೆ ಕೇಳಿಸುವುದು ಎಂಬ ವ್ಯುತ್ಪತ್ತಿಗೆ ಅನುಸಾರವಾಗಿ ಇವುಗಳನ್ನು ಶ್ರುತಿಗಳು ಎಂದು ತಿಳಿಯಲಾಗಿದೆ. ಹೃದಯದಲ್ಲಿ ಊರ್ಧ್ವನಾಡಿಗೆ ತಾಗಿರುವ ೨೨ ಅಡ್ಡನಾಡಿಗಳಿವೆ. ಅವುಗಳಿಗೆ ಒಂದೊಂದಕ್ಕೆ ಪ್ರಾಣವಾಯು ಹೊಡೆಯು ವಾಗ ಒಂದಕ್ಕೊಂದು ಏರಿರುವ ೨೨ ಶ್ರುತಿಗಳು ಹುಟ್ಟುತ್ತವೆ. ಅವು ಹೀಗೆ ಕಂಠ ಮತ್ತು ಶಿರಸ್ಥಾನಗಳಲ್ಲಿಯೂ ಏರುತ್ತಿರುತ್ತವೆ.