ನಿಷಾದ ಸ್ವರವು ಷಡ್ಡದ ಎರಡು ಸ್ವರಗಳನ್ನು ಆಶ್ರಯಿಸಿದರೆ, ಎಂದರೆ ತನ್ನ ನಿಯತ ಶ್ರುತಿಗಿಂತ ಎರಡು ಶ್ರುತಿ ಮೇಲಕ್ಕೇರಿದರೆ ಕಾಕಲೀ ಎಂಬ ಹೆಸರನ್ನೂ, ಅದರಂತೆ ಗಾಂಧಾರ ಸ್ವರವು ಮಧ್ಯಮದ ಎರಡು ಶ್ರುತಿಗಳನ್ನು ಆಶ್ರಯಸಿದರೆ ಅಂತರ ಎಂಬ ಹೆಸರನ್ನೂ ಪಡೆಯುವುದು.
ಯಾವುದಾದರೂ ಮೂರ್ಛನೆಯು ಆ ಗ್ರಾಮದಲ್ಲಿ ಇಂತಿಷ್ಟನೆಯದು ಎಂಬ ಸಂಖ್ಯಾ ಪರಿಜ್ಞಾನೋಪಾಯವನ್ನು ಹೇಳುತ್ತಾನೆ-
ಯಸ್ಯಾಂ ಯಾವತಿತ್ ಷಡ್ಡಮಧ್ಯಮಾ ಗ್ರಾಮಯೋ ಕ್ರಮಾತ್
ಮೂರ್ಛನಾ ತಾವದಿತೈವ ಸಾ ನಿಃಶಂಕೇನ ಕೀರ್ತಿತಾ ǁ
ಷಡ್ವಗ್ರಾಮದ ಯಾವುದಾದರೊಂದು ಮೂರ್ಛನೆಯಲ್ಲಿ ಷಡ್ವವು ಆರಂಭದಿಂದ ಎಷ್ಟನೆ ಸ್ವರವಾಗಿರುವುದೋ ಆ ಮೂರ್ಛನೆಯು ಆ ಗ್ರಾಮದ ಅಷ್ಟನೇ ಸಂಖ್ಯೆಯ ದಂದು ತಿಳಿಯಬೇಕು. ಹಾಗೆಯೇ ಮಧ್ಯಮ ಗ್ರಾಮದಲ್ಲಿ ಸಹ ಮಧ್ಯಮ ಸ್ವರದ ಸಂಖ್ಯೆಯೇ ಮೂರ್ಛನೆಯ ಸಂಖ್ಯೆಯಾಗಿರುವುದು.
ಪ್ರತಿಯೊಂದು ಮೂರ್ಛನೆಯಲ್ಲಿಯೂ ಮತ್ತೆ ಏಳು ವಿಧ ಮೂರ್ಛನೆಗಳಾಗುವು ದೆಂದು ಹೇಳುತ್ತಾನೆ-
ಪ್ರತಿವಾದಿ ಸ್ವರಾರಂಭಾದೇಕೈಕಾ ಸಪ್ತಧಾ ಭವೇತ್ ǁ
ತಾಸೂಚ್ಚಾರ್ಯಾಂತ್ಯಸ್ಟರಾಂಸ್ತಾನ್ ಪೂರ್ವಾನುಚ್ಚಾರಯೇತ್ ಕ್ರಮಾತ್ ǁ
ತೇ ಕ್ರಮಾಸ್ತಷ್ಟು ಸಂಖ್ಯಾ ಸ್ಯಾತ್ ದ್ಯಾನವತ್ಯಾಶತತ್ರಯಂ ǁ
ಮೇಲೆ ಹೇಳಿದ ೫೬ರಲ್ಲಿ ಪ್ರತಿಯೊಂದು ಮೂರ್ಛನೆಯ ಒಂದೊಂದೇ ಸ್ವರಗಳಿಂದ ಆರಂಭಿಸಿ ಪ್ರತ್ಯೇಕ ಸಪ್ತಸ್ವರ ಮೂರ್ಛನೆಗಳನ್ನು ಮಾಡಲಾಗುವುದು. ಅದೆಂದರೆ ಒಂದು ಮೂರ್ಛನೆಯ ಅಂತ್ಯಸ್ವರವನ್ನೇ ಕ್ರಮವಾಗಿ ಇನ್ನೊಂದು ಮೂರ್ಛನೆಯ ಆರಂಭ ಸ್ವರವನ್ನಾಗಿ ಮಾಡುವುದಾಗಿದೆ. ಈ ಕ್ರಮದಲ್ಲಿ ಒಟ್ಟು ಮೂರ್ಛನೆಗಳು (೫೬ X2) = ೩೯೨ ಆಗುವವು.
(ಮೂರ್ಛನೆಗಳಿಗೆ ನಾರದೀಯ ಶಿಕ್ಷೆಯಲ್ಲಿರುವ ಹೆಸರುಗಳನ್ನೂ ಮೂರ್ಛನೆಗಳ ಯಕ್ಷರಕ್ಷಾದಿ..... ದೇವತೆಗಳನ್ನೂ ಕೊಡುತ್ತಾನೆ.)
(ಭರತನು ಹೇಳುವ ಕ್ರಮದಲ್ಲಿ ಷಾಡದೌಡವಗಳೆಂಬ ಲೋಪಸ್ವರ ಮೂರ್ಛನಾ ರೂಪದ ೮೪ ತಾನಗಳನ್ನೂ, ಭರತೋಕ್ತವಲ್ಲದ ಕೂಟ ತಾನಗಳನ್ನೂ ಅವುಗಳ ನಷ್ಟದೃಷ್ಟ ಸಂಖ್ಯಾ ಪರಿಜ್ಞಾನೋಪಾಯಕ್ಕಾಗಿ ಖಂಡಮೇರು ಪ್ರಸ್ತಾದಿಗಳನ್ನೂ ಹೇಳಿದ್ದಾನೆ).
ಮೂರ್ಛನೆಗಳ ಹಾಗೂ ತಾನಗಳ ಉಪಯೋಗ ಪ್ರಯೋಜನಗಳನ್ನು ಹೀಗೆ ಹೇಳುತ್ತಾನೆ-
ಗಾಂಧರ್ವೇ ಮೂರ್ಛನಾಸ್ತಾನಾ ಶ್ರೇಯಸೇ ಶ್ರುತಿಚೋದಿತಾಃ |
ಗಾನೇ ಸ್ಥಾನಸ್ಯ ಲಾಭೇನ ತೇ ಕೂಟಾಸ್ಕೋಪಯೋಗಿನಃǁ೯ǁ
ಗಾಂಧರ್ವದಲ್ಲಿ ಮೂರ್ಛನೆಗಳು ಹಾಗೂ ತಾನಗಳು ವೇದೋಕ್ತ ಪ್ರಕಾರ ಶ್ರೇಯಃ ಪ್ರಾಪ್ತಿಗಾಗಿ ಪ್ರಯೋಗಿಸಲ್ಪಡುವಂಥವು. ಗಾನದಲ್ಲಿ ತ್ರಿಸ್ಥಾನಪ್ರಾಪ್ತಿಯ ಸೌಲಭ್ಯ ವುಂಟಾಗುವುದರಿಂದ ಅವುಗಳ ಮತ್ತು ಕೂಟ ತಾನಗಳ ಸಹ ಉಪಯೋಗವಿದೆ.