ಈ ಪುಟವನ್ನು ಪ್ರಕಟಿಸಲಾಗಿದೆ
ಎರಡು ವಿಮರ್ಶೆಗಳು / ೩೦೧

ನ್ಯಾಯವೆಂದು ಸಮ್ಮತಿಸಿ ಆತನ ೭೨ ಮೇಳ ವಿಭಾಗವನ್ನು ತತ್ವಶಃ ಒಪ್ಪಿಕೊಂಡು ಅವುಗಳಲ್ಲಿ ಹಿಂದುಸ್ಥಾನಿ ಪದ್ಧತಿಯ ಮಟ್ಟಿಗೆ ಪರ್ಯಾಪ್ತವೆಂದೆನಿಸಿದ ೧೦ ಮೇಳ ಗಳನ್ನು ದಿ| ಭಾತ್‌ಖಂಡೆಯವರು ಅಂಗೀಕರಿಸಿದ್ದಾಗಿದೆ ಎಂಬುದು ಅವರ ಲಕ್ಷ್ಮ ಸಂಗೀತದಿಂದ ಸ್ಪಷ್ಟವಾಗುವುದು.

ದ್ವಿಸಪ್ತತಿ ಮೇಲಕೇಷು ತ್ಯಾ ತಾನನವಶ್ಯಕಾನ್ |
ಸ್ವೀಕುರ್ಮೋ ದಶ ಸಂಖ್ಯಾಸ್ತಾನ್ ಲಕ್ಷ್ಮರ್ವನಿ ವಿಶ್ರುತಾನ್||೨||

ಪ್ರಚರದ್ರೂಪಸಂಗೀತಮಶೇಷಂ ಸ್ಯಾತ್ ಪರಿಸ್ಸುಟಂ |
ತನ್ಮಲೇಷು ಸಮಾವಿಷ್ಟಮಿತಿ ಮರ್ಮವಿದಾಂ ಮತಂ ||೩||

(ಲಕ್ಷ್ಯಸಂಗೀತ, ದ್ವಿತೀಯಾಧ್ಯಾಯ)

ಮೇಲೆ ಹೇಳಿದ ಈ ಹತ್ತು ಮೇಳಗಳನ್ನವರು ದಾಕ್ಷಿಣಾತ್ಯ ಹೆಸರಿನಿಂದಲೇ ಕರೆದಿರುವು ದಲ್ಲದೆ ಅವುಗಳಿಗೆ ಹಿಂದುಸ್ಥಾನಿಯ ಪ್ರತಿನಾಮಗಳನ್ನೂ ಅಲ್ಲಲ್ಲಿ ಕೊಟ್ಟಿರುತ್ತಾರೆಂಬುದು ಗಮನಿಸತಕ್ಕ ವಿಚಾರ :

ಶಂಕಾರಭರಣೇ ಮೇಲೇ ವೇಲಾವರೀತಿ ನಾಮಕಃ |
ಮೇಲಾನ್ಮಾಲವಗೌಳೀಯಾಜ್ಞಾತೋ ರಾಗೋ ಗುಣಪ್ರಿಯಃ ||
ಹರಪ್ರಿಯಾಖ್ಯಮೇಲೋಸ್‌ ಲಕ್ಷೇತ್ರ ಕಾಫಿಸಂಜಿತಃ |
ನಟಭೈರವಿಕಾ ಮೇಲೇ ಪ್ರೋಕ್ತಾ ದೇಶೀ ಗುಣಿಪ್ರಿಯಾ ||

ಇತ್ಯಾದಿ ಲಕ್ಷ್ಮಸಂಗೀತ ಗ್ರಂಥದ ವಾಕ್ಯಗಳಿಂದ ಇದು ಸ್ಪಷ್ಟವಾಗುವುದು. ಶ್ರೀ ಪುರಂದರೆಯವರು ತಮ್ಮ ಗ್ರಂಥದಲ್ಲಿ ಈ ದಾಕ್ಷಿಣಾತ್ಯ ನಾಮನಿರ್ದೇಶವನ್ನು ಯಾಕೆ ಕೊಡಲಿಲ್ಲವೊ! ಕೊಟ್ಟಿದ್ದರೆ ಮೂಲಗ್ರಂಥಕಾರರು ಗೌರವಿಸಿದ್ದ ಸಮನ್ವಯ ದೃಷ್ಟಿಯನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬಹುದಿತ್ತು. ಮತ್ತು ನಮ್ಮ ಎರಡೂ ಸಂಪ್ರದಾಯ ಗಳ ಪ್ರಗತಿಯ ದೃಷ್ಟಿಯಿಂದ ಅದು ಅವಶ್ಯವಾಗಿತ್ತು.

ಜನ್ಯರಾಗಗಳ, ಲಕ್ಷಣನಿರೂಪಣೆಯಲ್ಲಿ ದಿ| ಭಾತ್‌ಖಂಡೆಯವರ ಸಂಗೀತ'ಕ್ಕೂ ಈ ಗ್ರಂಥಕ್ಕೂ ಕೆಲಮಟ್ಟಿಗೆ ವಿಸಂವಾದವಿರುವುದನ್ನೂ ಸೂಚಿಸಬೇಕಾಗು ವುದು, ಉದಾಹರಣೆಗಾಗಿ 'ಸಿಂಧು ಭೈರವಿ' ರಾಗವು ಅಸಾವರೀ ಮೇಳಜನ್ಯವೆಂದು ಲಕ್ಷ್ಯ ಸಂಗೀತದಲ್ಲಿರುವುದಾದರೆ ಈ ಗ್ರಂಥದಲ್ಲಿ ಅದನ್ನು ಭೈರವೀ ಮೇಳಜನ್ಯವೆಂದು ಕೊಡಲಾಗಿದೆ! (ಪುಟ ೩೪೩) “ಸಿಂಧು ಭೈರವಿರಾಗವು ಭೈರವಿ ಥಾಟಿನಲ್ಲಿಯ ಸಂಪೂರ್ಣ ರಾಗವಿದ್ದು ಧೈವತವು ವಾದಿಸ್ವರವಾಗಿದೆ' ಎನ್ನುತ್ತಾರೆ.

ಲಕ್ಷ ಸಂಗೀತದಲ್ಲಿ ಆ ಲಕ್ಷಣಶ್ಲೋಕವು ಹೀಗಿದೆ :

ಅಸಾವರೀ ಸುಮೇಲಾಚ್ಚ ಭೈರವೀಸಿಂಧುಪೂರ್ವಿಕಾ |

ಆರೋಪೇಚಾವರೋಹಣಪಿ ಸಂಪೂರ್ಣಾಧೃವತಾಂಶಿಕಾ ||

ಇದು ಪ್ರಾಮಾದಿಕವಾದ ಸ್ಟಾಲಿತ್ಯವೋ, ಅಲ್ಲ ಲಕ್ಷಾನುರೋಧವಾಗಿ ಉದ್ದಿಷ್ಟವೋ ಎಂಬುದನ್ನು ಗ್ರಂಥಕರ್ತರು ವ್ಯಕ್ತಪಡಿಸದಿರುವುದನ್ನು ದೋಷವೆಂದೇ ಹೇಳಬೇಕಾಗಿದೆ. ಇದಲ್ಲದೆ ಈ ಗ್ರಂಥದಲ್ಲಿ ಅಲ್ಲಲ್ಲಿ ಉದ್ಧರಿಸಿಕೊಟ್ಟಿರುವ ಸಂಸ್ಕೃತ ಶ್ಲೋಕಗಳು ತೀರ ತಪ್ಪಾಗಿರುವುದೂ ಈ ಗ್ರಂಥಕ್ಕೆ ಒಂದು ಕಳಂಕವೆಂದೇ ಹೇಳಬೇಕು. ಆ ಶ್ಲೋಕಗಳ ಅರ್ಥವನ್ನಾದರೂ ಕೊಡುತ್ತಿದ್ದರೆ ಇದು ಕ್ಷಮ್ಯವಾಗುತ್ತಿತ್ತು. ಒಪ್ಪೋಲೆಯಲ್ಲಿಯೂ ಈ