ವ್ಯವಹಾರವೂ ಸಲ್ಲುತ್ತದೆ. (ವಸ್ತುತಃ ಲಯವೊಂದೇ ತಾಳವಲ್ಲ- 'ಅಂಗಭೂತಾ ಹಿ ತಾಲಸ್ಯ ಯತಿಪಾಣಿಲಯಾಃ ಸ್ಮೃತಾ' ಭ. ನಾ. ೩೧-೩೬೯)*
ಹೀಗೆ ಛಂದಸ್ಸಿನಲ್ಲಿಯೂ ಸಂಗೀತದಲ್ಲಿಯೂ ಲಯವೆಂಬುದಕ್ಕೆ ಪ್ರತ್ಯೇಕ ನಿಶ್ಚಿತ ವಾದ ಅರ್ಥಗಳಿದ್ದರೂ ರೂಢಿಯಲ್ಲಿ ವರ್ಣಗಳ ಗತಿಯನ್ನು ಲಯವೆನ್ನುವುದು ಸಾಮಾನ್ಯವಾಗಿ ಬಂದಿದೆ. ಅಕ್ಷರಗಳನ್ನು ವೇಗವಾಗಿ ಉಚ್ಚರಿಸುವುದಕ್ಕೆ ದ್ರುತಲಯ ಎಂದೂ ನಿಧಾನವಾಗಿ ಉಚ್ಚರಿಸುವಲ್ಲಿ ವಿಲಂಬಿತಲಯವೆಂದೂ ಹೇಳುತ್ತಾರೆ. ನ್ಯಾಯ ವಾಗಿ ಅದನ್ನು ವಿಲಂಬಗತಿ, ಮಂದಗತಿ ಎಂದೇ ಹೇಳಬೇಕು.
ಸಂಗೀತದಲ್ಲಿ ನಾದಕ್ಕೆ ಸಂಬಂಧಿಸಿ, ಏಕೀಭವಿಸುವುದು ಎಂಬ ಅರ್ಥದಲ್ಲಿಯೂ ಲಯಶಬ್ದವನ್ನು ಪ್ರಯೋಗಿಸುವುದುಂಟು- ಸ್ವರಲಯ, ನಾದಲಯ, ಶ್ರುತಿಲಯ ಇತ್ಯಾದಿ. ನಾದಲಯವೆಂದರೆ ಸ್ವರಸಾಮ್ಯವೆಂದರ್ಥ; ಬೇರೆ ಬೇರೆ ವಾದ್ಯಸ್ವರಗಳು ಹಾಗೂ ಕಂಠವಾದ್ಯಗಳ ಸ್ವರಗಳು ಅನುರಕ್ತವಾಗಿರುವಲ್ಲಿ ಸ್ವರಲಯ ಶುದ್ಧವಾಗಿದೆ ಎನ್ನುತ್ತೇವೆ. ಸಂವಾದ-ಅನುವಾದಗಳು ಸರಿಯಾಗಿರುವಲ್ಲಿ ಶ್ರುತಿಲಯ ಶುದ್ಧವಾಗಿದೆ ಎನ್ನುತ್ತೇವೆ. ಸ್ವರಗಳು ಆಧಾರಶ್ರುತಿಯಲ್ಲಿ ಲೀನವಾಗುವುದಕ್ಕೂ 'ಶ್ರುತಿಲಯ' ವೆನ್ನುತ್ತೇವೆ.*
ನಮ್ಮ ಛಂದಸ್ಸಿನ 'ಲಯ'ವೆಂಬುದು ಇಂಗ್ಲಿಷ್ 'Rythm' ಶಬ್ದಕ್ಕೆ ಸಮಾನ ವಾದ್ದೆಂದು ಕೆಲವರು ಊಹಿಸುವುದು ಕಾಣುತ್ತದೆ. ಆದರೆ, ಇದು ಸರಿಯಲ್ಲ. ಏಕೆಂದರೆ ಇಂಗ್ಲಿಷ್ 'ರಿದಂ'ನಲ್ಲಿ ಗುರು-ಲಘು ಪ್ರಮಾಣಗಳು ಸಾಪೇಕ್ಷವಾಗಿರಬೇಕೆಂದಿಲ್ಲ, ಸಾಮಾನ್ಯವಾಗಿ ಇರುವುದೂ ಇಲ್ಲ. ಅವರ ಛಂದಸ್ಸಿನ ಪಾಠ (Recitation) ಕ್ರಮ ದಲ್ಲಿ ಹೆಚ್ಚಾಗಿ ಪ್ರಸ್ತ ಕಾಲವು ದೀರ್ಘಚ್ಚಾರದ ಅರ್ಧಕ್ಕಿಂತ ಕಡಿಮೆಯಾಗಿರುವುದು ಕಾಣುತ್ತದೆ; ಕೆಲವೊಂದು 'ಲಯ' (Rythm) ಭೇದಗಳಲ್ಲಿ ದೀರ್ಘದ ಕಾಲಂಶದಷ್ಟೂ ಇರುವುದಿಲ್ಲವೆಂಬುದನ್ನೂ ಲಕ್ಷಿಸಬಹುದು. ನಮ್ಮ ಛಂದಸ್ಸಿನ ಪಾಠದಲ್ಲಿ ಹೀಗೆ ನ್ಯೂನಾಧಿಕ್ಯವಿರುವುದಿಲ್ಲ, ಇರಬಾರದು. ಆದುದರಿಂದ ಅವರ 'ರಿದಂ' ನಮ್ಮ ಛಂದೋ ಲಯವಾಗುವುದಿಲ್ಲ. ನಮ್ಮ ದೇಶೀತಾಳಭೇದಗಳಲ್ಲಾದರೆ ಗುರುಲಘುಗಳು ಸಾಪೇಕ್ಷ ವಾಗಿ ಇಲ್ಲದಿರುವುದುಂಟು. ಹಾಗೂ ಲಘುವಿನ ಅಂಶಾಂಶಗಳೂ ತಾಳಾಂಗಗಳಾಗಿ ಬರುವುದರಿಂದ, ಆ ಆ ವಿಶಿಷ್ಟ ತಾಳಭೇದಗಳಲ್ಲಿ 'ರಿದಂ'ನ ಸಮಾನ ಲಯವನ್ನು ಕಾಣಬಹುದು. ಪ್ರಚಲಿತ ನಮ್ಮ ಸಂಗೀತಗಾನದಲ್ಲಿ ಅಂಥ ತಾಳಲಯಗಳು ವಿರಳ ವಾದರೂ ನೃತ್ತಪದ್ಧತಿಗಳಲ್ಲಿ ಸಾಮಾನ್ಯವಾಗಿ ಇರುತ್ತವೆ- 'ತಿತ್ತಿತ್ಸೆ', 'ನರ್ತನಕಾಲ' 'ನಾಟ್ಯಮಟ್ಟ' ಇತ್ಯಾದಿ. ಆದುದರಿಂದ 'ರಿದಂ' ಎಂಬುದು ನಮ್ಮ ವೃತ್ತಲಯವಾಗ
- ಯತಿ ಪಾಣಿಭ್ಯಾಮುಪಕ್ರಿಯಮಾಣೋ
ಲಯ ಏವ ತಾಲ (ಭ. ನಾ. ೩೧೩೭೫) ಲಯಸ್ಕಾಲಃ (ಭ. ನಾ. ೩೧-೩೭೨) ವಿಶಿಷ್ಟ ಕ್ರಿಯಾಪರಿಚ್ಛೇಯವಚ್ಛನ್ನೂ
- ಶ್ರುತಿನಾಂ ಲೀಯಮಾನತ್ವಂ ಲಯೋ ನೀಚೋಚ್ಚಭಾವತಃ |
ತಾಧಾ ಸ್ಯುಃ ಪುನರ್ಭಿನ್ನಾ ನ್ಯೂನಾಧಿಕವಿಭಾಗತಃ || ಗೀತವಾದ್ಯಪದನ್ಯಾಸ ಕ್ರಿಯಾಣಾಂ ಸಮತಾಮಿಥ ತಥಾ ಕ್ರಿಯಾತಾಲಯೋರ್ವಾ ಲಯ ಇತ್ಯುಚ್ಯತೇ ಬುಧ್ಯೆಃ || ತಾಲಃ ಕಾಲಕ್ರಿಯಾಮಾನಂ, ಲಯಃ ಸಾಮ್ಯಮಥಾಯಾಂ || (ಭಾವಪ್ರಕಾಶ) (ವಾಚಸ್ಸತ್ಯಂ) (ಅಮರ)