ಈ ಪುಟವನ್ನು ಪ್ರಕಟಿಸಲಾಗಿದೆ
ಪೀಠಿಕೆ / ೩೪೯

ಎರಡನೇ ನಾಲ್ಕನೇ ಪಾದಾಂತಗಳಲ್ಲಿ ತಂತ್ರಿಲಯವಿರುವುದನ್ನು ಇದರಲ್ಲಿಯೂ ಲಕ್ಷಿಸಿರಿ. ಪಿಂಗಳನು ಇದರ ಪಾಠಕ್ಕೆ ವಿಶೇಷ ವಿಧಿಯನ್ನು ಸೂಚಿಸುತ್ತಾನೆ, ಒಂದನೇ ಪಾದಾಂತ್ಯದಲ್ಲಿ ವಿಲಂಬಿಸದೆ ಎರಡನೇ ಪಾದವನ್ನು ಪ್ರಾರಂಭಿಸಬೇಕು ಎನ್ನುತ್ತಾನೆ(ಉದ್ಭತಾಮೇಕರ್ತ ಪಠೇತ್೫-೨೫). ಉಪಸ್ಥಿತಪ್ರಚುಪಿತವೆಂಬುದು ಇದರಲ್ಲಿಯೇ ಒಂದು ಭೇದವಾಗಿದೆ. ಪ್ರಥಮ ದ್ವಿತೀಯ ಪಾದಗಳನ್ನು ಮಧ್ಯ ವಿಲಂಬಿಸಿ ವಿಂಗಡವಾಗಿಯೇ ಹಾಡಬೇಕೆಂಬುದು ಅದರ ವಿಶೇಷ ಲಕ್ಷಣ, (ಉಪಸ್ಥಿತಪ್ರಚುಪಿತಂ ಪೃಥಗಾದ್ಯಂ ಪಿಂ, ೫-೨೮), ಮೂರನೇ ಪಾದದಲ್ಲಿ ಮಾತ್ರ ಅಕ್ಷರವ್ಯತ್ಯಾಸವಿರುವ 'ಸೌರಭಕ, 'ಲಲಿತ' ಎಂಬ ಇನ್ನೆರಡು ಭೇದಗಳೂ ಉದ್ಭತದಲ್ಲಿರುತ್ತವೆ.

ಉಪಸ್ಥಿತ ಪ್ರಚುಪಿತ- ಮೊದಲಪಾದದಲ್ಲಿ ಮ + ಸ + ಜ + ಭ + ಗ + ಗ ಸೇರಿ ಹದಿನಾಲ್ಕು ಅಕ್ಷರಗಳು, ಎರಡನೆಯದರಲ್ಲಿ ಸ + ನ + ಜ + ರ + ಗ ಸೇರಿ ಹದಿಮೂರು ಅಕ್ಷರಗಳು, ಮೂರನೆಯ ಪಾದದಲ್ಲಿ ಎರಡು ನಗಣಗಳು ಮತ್ತು ಒಂದು ಸಗಣ ಸೇರಿ ಒಂಬತ್ತಕ್ಷರಗಳು, ನಾಲ್ಕನೆಯದರಲ್ಲಿ ಮೂರು ನಗಣಗಳ ಮುಂದೆ ಒಂದು ಜಗಣ ಮತ್ತು ಯಗಣ ಒಟ್ಟು ಹದಿನೈದು ಅಕ್ಷರಗಳಿರುತ್ತವೆ. ಉದಾ

ರಾಮಾಕಾಮುಕರೇಣುಕಾ ಮೃಗಾಯತನೇತ್ರಾ ।
ಹೃದಯಂ ಹರತಿ ಪಯೋಧರಾವನಮಾ ॥
ಇಯಮತಿಶಯಸುಭಗಾ ।
ಬಹುವಿಧನಿಧುವನಕುಶಲಾ ಲಲಿತಾಂಗೀ ॥

ಇದರಲ್ಲಿಯೂ ಮೂರನೇ ಪಾದ ಒಂದರಲ್ಲಿ ಒಂದರಲ್ಲಿ ಮಾತ್ರ ಅಕ್ಷರವ್ಯತ್ಯಾಸವಿರುವ 'ವರ್ಧಮಾನ', 'ಶುದ್ಧವಿರಾಟ್' ಎಂಬ ಇನ್ನೆರಡು ಭೇದಗಳಿರುತ್ತವೆ.

ಅರ್ಧಸಮವೃತ್ತಗಳಲ್ಲಿ ಉಪಚಿತ್ರಕಾ, ದ್ರುತಮಧ್ಯಾ, ವೇಗವತೀ, ಭದ್ರವಿರಾಟ್, ಕೇತುಮತೀ, ಆಖ್ಯಾನಕೀ, ವಿಪರೀತಾಖ್ಯಾನಕೀ, ಹರಿಣಪುತಾ, ಅಪರವಕ್ರಾ, ಪುಷ್ಪತಾಗ, ಯವಮತೀ, ಶಿಖಾ, ಖಂಜಾ, ಎಂಬ ಹದಿಮೂರು ಭೇದಗಳನ್ನು ಪಿಂಗಳನ್ನು ಹೇಳುತ್ತಾನೆ. ಅವುಗಳ ಗಣನಿಯಮ ಹೀಗೆ-

ಉಪಚಿತ್ರಕಾ- ಸ + ಸ + ಸ + ಲ + ಗ / ಭ + ಭ + ಭ + ಗ + ಗ

(ಉತ್ತರಾರ್ಧದ ಎರಡು ಪಾದಗಳು ಕ್ರಮವಾಗಿ ಇದರಂತೆಯೇ ಇರುವುವು. ಕೆಳಗಿನ ಲಕ್ಷಣಗಳಲ್ಲಿಯೂ ಹೀಗೆ ಊಹಿಸಿಕೊಳ್ಳಬೇಕು)

ದ್ರುತಮಧ್ಯಾ- ಭ + ಭ + ಭ + ಗ + ಗ / ನ + ಜ + ಜ + ಯ
ವೇಗವತೀ- ಸ + ಸ + ಸ + ಗ / ಭ + ಭ + ಭ + ಗ + ಗ
ಭದ್ರವಿರಾಟ್- ತ + ಜ+ ರ + ಗ / ಮ + ಸ + ಜ + ಗ + ಗ
ಕೇತುಮತೀ- ಸ + ಜ + ಸ + ಗ / ಭ + ರ + ನ + ಗ + ಗ
ಆಖ್ಯಾನಕೀ- ತ + ತ + ಜ + ಗ + ಗ / ಜ + ತ + ಜ + ಗ + ಗ
ವಿಪರೀತಾಖ್ಯಾನಕೀ- ಜ + ತ + ಜ + ಗ + ಗ / ತ + ತ + ಜ + ಗ + ಗ
ಹರಿಣಪ್ಲುತಾ- ಸ + ಸ + ಸ + ಲ + ಗ / ನ + ಭ + ಭ + ರ
ಅಪರವಕ್ತ್ರ- ನ + ನ + ರ + ಲ + ಗ / ನ + ಜ + ಜ + ರ
ಪುಷ್ಪತಾಗ್ರಾ- ನ + ನ + ರ + ಯ / ನ + ಜ + ಜ + ರ + ಗ