ಈ ಪುಟವನ್ನು ಪ್ರಕಟಿಸಲಾಗಿದೆ

ಮರೆಯದ ನೆನಪು

ಇವ ಬಡೆಕ್ಕಿಲ - ನನ್ನ ಹುಟ್ಟಿದ ಮನೆ, ಪೂಜ್ಯರಾದ ಶ್ರೀ ವೆಂಕಟರಮಣಭಟ್ಟರು ನನ್ನ ತಾಯಿಯ ದೊಡ್ಡಣ್ಣ, ನನ್ನ ದೊಡ್ಡ ಮಾವ, ನನ್ನನ್ನು ಎತ್ತಿ ಆಡಿಸಿದವರು. ಕಳೆದು ಹೋದ ಆ ಚಿಕ್ಕಂದಿನ ದಿನಗಳಲ್ಲಿ, ನನ್ನ ದೊಡ್ಡ ಮಾವ ನಮ್ಮ ಮನೆಗೆ ಬಂದಿದ್ದ ಅದೊಂದು ದಿನವೇ ನನ್ನ ನೆನಪಿನ ಮೊದಲ ದಿನ. ನನಗದು ಎಂದೂ ಮರೆಯಲಾಗದ ದೊಡ್ಡ ದಿನ.

ಅಂದು ನನಗೆ ಪ್ರಾಯ ಏಳೋ-ಎಂಟೋ ವರ್ಷ. ನನ್ನ ಅಜ್ಜ (ಕುಕ್ಕಿಲ ಅಪ್ಪಯ್ಯ ಯಾನೆ ಕೃಷ್ಣ ಭಟ್ಟರು) ತಾವೇ ಪ್ರತಿ ತೆಗೆದ ಭಾಗವತ, ಭಾರತ, ಓಲೆಗ್ರಂಥಗಳಿಂದ ದಿನಕ್ಕೆ ಒಂದು ಸಂಧಿಯಂತೆ ನನಗೆ ಓದಿಸುತ್ತಿದ್ದರು. ಈ ಖಡ್ಡಾಯ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾನು ಹೊಟ್ಟೆನೋವು, ಕಿವಿನೋವು, ತಲೆಕುತ್ತು ಇತ್ಯಾದಿ ಹಳೆಗಳನ್ನು ಮಾಮೂಲಾಗಿ ಹೇಳುವುದಿತ್ತು. ದೊಡ್ಡಮಾವ ಬಂದ ಆ ದಿನವಾದರೂ ಅಜ್ಜನ ಪಾಠಕ್ಕೆ ಆಡಿಗೆ ಇರಬಹುದೆಂದೆಣಿಸಿದ್ದೆ, ಆದರೆ ಅಜ್ಜ ಮಾಡಿನ ನೆರಳು ತುಳಸಿಕಟ್ಟೆಗೆ ಮುಟ್ಟುವ ಮಾಮೂಲಿನ ಹೊತ್ತಿಗೆ ಸರಿಯಾಗಿ ಗ್ರಂಥ ಬಿಚ್ಚಿ 'ಮಾಣಿ' ಎಂದು ಕರೆದೇ ಬಿಟ್ಟರು. ಉಂಡು ಮಲಗಿದ್ದ ದೊಡ್ಡ ಮಾವನೂ ಎದ್ದು ಕುಳಿತಿದ್ದರು. ಹೇಳುವ ನೆಪ ಕಾಣಲಿಲ್ಲ. ಅಥವಾ ಹೇಳಿ ಬೈಸಿಕೊಂಡರೆ ಮಾವನ ಮುಂದೆ ನಾಚಿಕೆ ಬೇರೆ. ವಿಧಿಯಿಲ್ಲದೆ ಓದಲು ಕುಳಿತ. ಹತ್ತೆಂಟು ಪದ್ಯ ಓದುವುದರೊಳಗೆ ಕಣ್ಣು ತುಂಬಿತು, ಒಂದೆರಡು ಹನಿ ಓಲೆಯ ಮೇಲೆ ಬಿತ್ತು. ಅಷ್ಟಾಯಿತೆಂದರೆ ಅಜ್ಜನಿಗೆ ದೊಡ್ಡ ಕೋಪ ಬರುವುದಿತ್ತು. ಅಜ್ಜನ ಕೋಪ ಆಟಿ ಬಿಸಿಲು' ಎಂದು ನನಗೂ ಗೊತ್ತಿತ್ತು. 'ಫಂಗ, ನಡೆ, ದನಗಳ ಮೇಸು' ಎಂದೊಮ್ಮೆ ಅಗ್ಗಳಿಸಿ, 'ನಿತ್ಯಾತುಮನ ಕರುಣದಲೀ' ಎಂದು ಸಂಧಿಯ ಕೊನೆಯ ಪದ್ಯವನ್ನು ತಾವೇ ಓದಿ ಅಜ್ಜ ಪುಸ್ತಕ ಕಟ್ಟಿದರು.

ಅಂದೇ ಹಿಂತಿರುಗಿ ಹೊರಡುವುದರಲ್ಲಿದ್ದ ದೊಡ್ಡ ಮಾವ ಹೊರಡುತ್ತಾ ಅಜ್ಜನವರನ್ನು ಕರೆದು ಮಾವ ಮಾಣಿ ನನ್ನೊಂದಿಗೆ ಬರಲಿ. ನಮ್ಮಲ್ಲಿ ಶಾಲೆಗೆ ಹಾಕುತ್ತೇನೆ' ಎಂದರು. 'ನಿನ್ನಿಷ್ಟ' ಎಂದು ಅಜ್ಜನ ಉತ್ತರ ಬಂತು. ತಾಯಿ ನಮ್ಮನ್ನು ಹೊರಡಿಸಿದರು. ಅಜ್ಜ ಮತ್ತೆ ಮಾವನವರೊಡನೆ 'ವೆಂಕಟರಮಣಾ, ಶಾಲೆಗೆ ಹಾಕಿದರೂ ದಿನಕ್ಕೊಂದು ಸಂಧಿ ಓದಿಸದೆ ಇರಬೇಡ ಹಾಗೂ ಹತ್ತು ಶ್ಲೋಕ ಅಮರ ಹೇಳಿಸಿದರೆ ನಾಲಗೆ ಶುದ್ಧ ಅಕ್ಕು' ಎಂದು ಹೇಳಿದರೇ ನನ್ನನ್ನು ಕರೆದು 'ಮಾಣೀ, ದೊಡ್ಡ ಮಾವನ ಒಟ್ಟಿಗೆ ಹೋದರಷ್ಟೇ ಸಾಲದು, ದೊಡ್ಡ ಮಾವನಪ್ಪಾಗ ದೊಡ್ಡ ಮಾವನ ಹಾಂಗೇ ಓದಿ ಗಟ್ಟಿಗನಾಗಬೇಕು ತಿಳಿಯಿತೇ' ಎಂದು ಹರಸಿ ಕಳುಹಿಸಿಕೊಟ್ಟರು.

ದಾರಿಯಲ್ಲಿ ಮಾವ ಆಗಾಗ ಒಂದು ಪದ್ಯ ಹೇಳುತ್ತಿದ್ದರು. ಅಜ್ಜನ 'ದಂಡಕಾರದ ಪದ್ಯಗಳಿಗಿಂತ ಅವು ನನಗೆ ನನಗೆ ಎಷ್ಟೋ ಅಂದವಾಗಿ ಕೇಳಿಸಿದುವು. 'ಬೋಜನ ಕಾಲೇ-ಚೂರ್ಣಿಕೆ' ಹೇಳುವುದಕ್ಕೆ ಆ ಪದ್ಯ ಬಹಳ ಲಾಯಕು ಎಂದೆನಿಸಿತು. ಒಂದು ಪದ್ಯ ನನಗೆ ಹೇಳಿಕೊಡಬೇಕೆಂದು ಕೇಳಿದೆ. 'ಹಾಂಗಾದರೆ ಹೇಳು ನೋಡುವ' ಎಂದು 'ಶ್ರೀ ರಾಮಾನಟಿ ಕೌಸ್ತುಭದ್ರುತಿಕಿರತುಷ್ಪಾಂಜಲಿಕ್ಷೇಪ...' ಎಂಬೊಂದು ಉದ್ದವಾದ ಪದ್ಯ