ಈ ಪುಟವನ್ನು ಪ್ರಕಟಿಸಲಾಗಿದೆ
ಉನ್ನತ ಶ್ರೇಣಿಯ ಸಂಶೋಧಕ ವಿದ್ವಾಂಸ / ೩೬೧

ಗೇಯ ಪಾಠ್ಯಗಳ ವಿಚಾರ, ವಸ್ತುಕ ವರ್ಣಕ ವಿಚಾರ, ತಮಿಳಿನ ಅಶೈಗಳಿಗೂ ಕನ್ನಡದ ಗಣಗಳಿಗೂ ಇರುವ ವೃತ್ಯಾಸ, ನಮ್ಮ 'ಲಯ'ದ ಕಲ್ಪನೆಗೂ ಪಾಶ್ಚಾತ್ಯರ 'ರಿದಂ'ಗೂ ಇರುವ ಭೇದ, ಗತಿ ವಿಚಾರ, ವೈದಿಕ ಛಂದಸ್ಸು- ಹೀಗೆ ಹತ್ತಾರು ಸಂಗತಿಗಳಲ್ಲಿ ಮೂಲಭೂತವಾದ ವಿಚಾರಗಳು ಇದರಲ್ಲಿವೆ. ಛಂದಸ್ಸಿನ ಅಧ್ಯಯನ ಮಾಡುವವರಿಗೆ ಬೇಕಾಗುವ ವಿಸ್ತಾರವಾದ ಮಾಹಿತಿಯೂ, ಪ್ರೌಢ ವಿವೇಚನೆಯೂ ಇರುವ ಈ ಗ್ರಂಥ.. ಛಂದಸ್ಸಿನ ಮೇಲೆ ಬಲು ಉತ್ಕೃಷ್ಟ ಸ್ವತಂತ್ರ ಗ್ರಂಥದ ಮೌಲ್ಕ ಹೊಂದಿದೆ.

“ಭಾರತೀಯ ಸಂಗೀತ ಶಾಸ್ತ್ರ (ಪ್ರ. : ಡಿ.ವಿ.ಕೆ. ಮೂರ್ತಿ)- ಇದು ಕುಕ್ಕಿಲರ ಇನ್ನೊಂದು ಗ್ರಂಥ. ಸಂಗೀತ ಸಂಶೋಧನೆಯಲ್ಲಿ ಅಪೂರ್ವವೆನಿಸಿದ ಗ್ರಂಥವಿದು. ಶ್ರುತಿ` ಸಮಸ್ಯೆ, ಇಪ್ಪತ್ತೆರಡು ಶ್ರುತಿಗಳ ವಿಚಾರ, ಮುಂತಾದವುಗಳ ವಿವೇಚನೆಯಲ್ಲದೆ, ಸಂಗೀತದ ಬಗೆಗೆ ಐತಿಹಾಸಿಕ ಮತ್ತು ಖಚಿತ ಶಾಸ್ತ್ರ ಜ್ಞಾನದ ಪರಿಚಯ ನೀಡುವ ಈ ಅಸಾಮಾನ್ಯ ಗ್ರಂಥವು ಸಂಗೀತದ ಒಂದು ಗಹನವಾದ ಸಮಸ್ಯೆಯಾದ ಶ್ರುತಿ ವಿಚಾರ ದಲ್ಲಿ ಹೇಳಿರುವ ಕೆಲವು ವಿಷಯಗಳನ್ನು, ಬೇರಾವನೇ ಸಂಗೀತ ಶಾಸ್ತ್ರಜ್ಞನ ಹೇಳಿಲ್ಲ ಎಂದು ಸೇಡಿಯಾಪು ಅವರ ಮತವಿದೆ. (ಮುನ್ನುಡಿಯಲ್ಲಿ)'

ಕುಕ್ಕಿಲರು ಇಡಿಯ ಬದುಕಿನಲ್ಲಿ ಆತುಕೊಂಡ ಒಂದು ಆಸಕ್ತಿ, ಪಾರ್ತಿಸುಬ್ಬನ ಯಕ್ಷಗಾನಗಳು. ಅವರ ಈ ಆಸಕ್ತಿಯ ಫಲವೇ ಅವರು ಸಂಪಾದಿಸಿದ 'ಪಾರ್ತಿಸುಬ್ಬನ ಯಕ್ಸಗಾನಗಳು'. ಇದು ಯಕ್ಷಗಾನ ಸಾಹಿತ್ಯದಲ್ಲಿ ಒಂದು ಮುಖ್ಯ ಗ್ರಂಥ. ಸುಬ್ಬನ ಎಲ್ಲ ಪ್ರಸಂಗಗಳನ್ನು ಅವನು ಹೇಳಿದ 'ಬತ್ತೀಸರಾಗ', "ಬತ್ತೀ ಸತಾಳ'ಗಳೊಂದಿಗೆ ಅಳವಡಿಸಿ ಇಲ್ಲಿ ಕೊಟ್ಟಿದೆ. ಸುಬ್ಬನ ಕಾಲ, ಕರ್ತೃತ್ವಗಳ ಕುರಿತಾದ ನಿರ್ಣಾಯಕ ಅಂಶಗಳೂ. ಇದರಲ್ಲಿವೆ. ಡಾ| ಹಾ. ಮಾ. ನಾಯಕ ಮತ್ತು ಡಾ! ಜಿ. ಶಂ. ಪರಮಶಿವಯ್ಯರವರ ಆಸಕ್ತಿಯಿಂದಾಗಿ ಇದು ಪ್ರಕಟವಾಯಿತು.

ಹಲವು ಮೌಲಿಕ ಲೇಖನಗಳನ್ನೂ ಕುಕ್ಕಿಲರು ಬರೆದಿದ್ದಾರೆ. "ಬೆದಂಡೆ ಚತ್ತಾಣ, ದೇಶೀ ಛಂದಸ್ಸುಗಳ ಮೂಲ, "ಸುಬ್ಬನ ಕಾಲ, ಕರ್ತೃತ್ವ, "ಕರ್ನಾಟಕ ಆಂಧ್ರ ಯಕ್ಷಗಾನ ವಿಚಾರ,. ಯವನ-ಯವನಿಕಾ”, "'ಸೂಡ ಸೂಳಾದಿ ಸಾಲಗ, "ಯಕ್ಷಗಾನದ ಶಾಸ್ತ್ರೀಯತೆ, "ಸಭಾಲಕ್ಷಣ ವಿಚಾರ, ಎಕ್ಕಲಗಾಣ- ಈ ಎಲ್ಲ ಲೇಖನಗಳೂ, ಆ ಆ ಕ್ಷೇತ್ರದಲ್ಲಿ ಹೊಸ ವಿಚಾರಗಳನ್ನು ತೆರೆದು ತೋರುವವು ಗಳಾಗಿದ್ದು, ಒಂದೊಂದು ಮಹಾಪ್ರಬಂಧದ ಬೀಜರೂಪದಲ್ಲಿರುವುವು. ಪ್ರಚಲಿತವಾದ ಎಷ್ಟೊ ತಪ್ಪು ಕಲ್ಪನೆಗಳನ್ನು ತರ್ಕಯುಕ್ತವಾಗಿ ಅಲ್ಲಗಳೆದು, ಸಂಶೋಧನ ರಂಗಕ್ಕೆ ಮಹದುಪಕಾರವನ್ನು ಮಾಡಿವೆ. ಉದಾ- "ಯವನ-ಯವನಿಕಾ ಲೇಖನವು, “ಯವನ ಎಂಬುದಕ್ಕೆ 'ಗ್ರೀಕ್‌' ಎಂಬ ಅರ್ಥವಲ್ಲವೆಂದೂ, ಅರಬಿ-ಪಾರ್ಸಿ ಎಂಬ ಅರ್ಥವೆಂದೂ ಹೇಳಿ, ಸಾಂಸ್ಕೃತಿಕ ಸಂಶೋಧನೆಯಲ್ಲಿ ಕ್ರಾಂತಿ ಮಾಡಿದೆ. "ಕರ್ನಾಟಕಾಂಧ್ರ ಯಕ್ಷಗಾನ ವಿಚಾರವು, ಯಕ್ಷಗಾನದ ಮೂಲದ ಬಗ್ಗೆ ಹೊಸ ಶೋಧನೆ.

ಸಂಸ್ಕೃತ, ಕನ್ನಡ, ತೆಲುಗು, ಮಲೆಯಾಳ, ತಮಿಳು, ಪ್ರಾಕೃತಗಳಲ್ಲಿ ಪಾಂಡಿತ್ಯವಿದ್ದ ಕುಕ್ಕಿಲರು, ಯಾವುದೇ ' ವಿಚಾರವನ್ನು ತೆಗೆದುಕೊಂಡರೂ ಆಳವಾಗಿ, ಪಟ್ಟು ಹಿಡಿದು ಅಧ್ಯಯನ ನಡೆಸಿದವರು. ಗಟ್ಟಿಯಾದ ಪಾಂಡಿತ್ಯ , ಸತತ ಪರಿಶೀಲನೆ ಮತ್ತು ಪರಿಪುಷ್ಪವಾದ ತೀರ್ಮಾನಗಳಿಂದ ಕೂಡಿದ ಬಿಗಿಯಾದ ಸಂಶೋಧನೆ ಅವರದು. ಅವರ ಶೈಲಿ ಸ್ವಲ್ಪ ಹಳೆತರಹ, ಮತ್ತು ಸುಲಭ ಗ್ರಾಹ್ಯದಲ್ಲದ್ದು. ಆದರೆ, ತುಂಬ ಅಚ್ಚುಕಟ್ಟು. ಸಂಕ್ಷೇಪ ಮತ್ತು ನಿಖರತೆಗಳಲ್ಲಿ ಮಾದರಿಯಾದ ಶೈಲಿ ಆದು.