ಈ ಪುಟವನ್ನು ಪರಿಶೀಲಿಸಲಾಗಿದೆ

ಅನುಬಂಧ ಕುಕ್ಕಿಲ ಕೃಷ್ಣ ಭಟ್ಟರ ಸಂಕ್ಷಿಪ್ತ ಜೀವನ ವಿವರ

೩-೭-೧೯೧೧

ಜನನ ನಿಧನ

೨೧-೭-೧೯೮೮

ತಂದೆ ತಾಯಿ

ನಾರಾಯಣ ಭಟ್ಟ
ಗೌರಮ್ಮ

ವಿದ್ಯಾಭ್ಯಾಸ : ಬೋರ್ಡ್ ಹೈಸ್ಕೂಲು, ಪುತ್ತೂರು, ಸಂಸ್ಕೃತ ಮತ್ತು ಕನ್ನಡ ವಿದ್ವಾನ್ ಪರೀಕ್ಷೆಗೆ ತಯಾರಿ, ಪರೀಕ್ಷೆ ಬರೆಯಲಾಗಲಿಲ್ಲ. ದಿ| ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿ ಮತ್ತು ದಿ| ಮಿತ್ತೂರು ನಾರಾಯಣ ಶಾಸ್ತ್ರಿಗಳಿಂದ ಸಂಸ್ಕೃತ, ಮಂಗಳೂರಲ್ಲಿ ದಿ| ಕೃಷ್ಣ ಉಡುಪರಿಂದ ಸಂಗೀತ ಕಲಿಕೆ. ದಿ| ಬಲಿಪ ಭಾಗವತ, ನಡೆ ನರಸಿಂಹ ಭಟ್ಟರ ನಿಕಟ ಸಂಪರ್ಕ, ೧೯೫೮ರಿಂದ ೧೯೭೫ರ ತನಕ ಯಕ್ಷಗಾನ ಸಂಗೀತಗಳ ಬಗ್ಗೆ ವಿಶೇಷ ಸಂಶೋಧನೆ. ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲೂ ಪಾಂಡಿತ್ಯವಿತ್ತು. ವಾಸ ಪತ್ನಿ ಮಕ್ಕಳು

೧೯೫೯ರ ತನಕ ಕುಕ್ಕಿಲದಲ್ಲಿ. ೧೯೫೯-೬೩ ಮಂಗಳೂರಲ್ಲಿ, ೧೯೬೩-೭೫

ಮೈಸೂರಲ್ಲಿ. ೧೯೭೫ರಿಂದ ಪುನಃ ಕುಕ್ಕಿಲದಲ್ಲಿ.

ಲಕ್ಷ್ಮಿ ಅಮ್ಮ
  • ನಾಲ್ವರು ಹೆಣ್ಣು, ನಾಲ್ವರು ಗಂಡು

೧) ನಾರಾಯಣ ಭಟ್ಟ : ಕೆಲಕಾಲ ಸಂಸ್ಕೃತ ಪ್ರಾಧ್ಯಾಪಕರು. ಈಗ ಕೃಷಿಕರು, ಸಂಚಾಲಕರು : ಶ್ರೀ ವೀರಾಂಜನೇಯ ಸ್ವಾಮಿ ಯಕ್ಷಗಾನ ಮಂಡಲಿ, ಕೋಡಪದವು. (ಪತ್ನಿ : ಶ್ರೀಮತಿ ಸವಿತಾ) ೨) ಈಶ್ವರ ಭಟ್ಟ : ಎಂಜಿನಿಯರ್. ಈಗ ಕೃಷಿಕರು. (ಪತ್ನಿ : ಶೀಮತಿ ಶಿವಸುಂದರಿ) ೩) ಶಂಕರ ಭಟ್ಟ : ಮೃದಂಗ ವಿದ್ವಾನ್, ಕೃಷಿಕರು. (ಪತ್ನಿ : ಗೌರಿ) ೪) ಪುರಂದರ ಭಟ್ಟ : ಬಿ. ಬಿ. ಎಮ್. ಪದವೀಧರ. ಕೃಷಿಕರು. (ಪತ್ನಿ : ಶ್ರೀಮತಿ ದುರ್ಗಾಪರಮೇಶ್ವರಿ) ೫) ಶ್ರೀಮತಿ ಮಿಂಚಮ್ಮ : (ಪತಿ: ಕೆ.ಎನ್. ಮಹಾಲಿಂಗ ಭಟ್, ಎಡ್ವಕೇಟ್, ಈಗ ಕೃಷಿಕರು) ೬) ಶ್ರೀಮತಿ ಸರಸ್ವತಿ : (ಪತಿ : ಡಾ| ಮುಳ್ಳಂಕೊಚ್ಚಿ ಗಣಪತಿ ಭಟ್ ಮಕ್ಕಳ ತಜ್ಞರು, ಮಂಗಳೂರು) ೭) ಶ್ರೀಮತಿ ಶಂಕರಿ : (ಪತಿ : ಕೆ. ಕೃಷ್ಣ ಭಟ್, ಎಷ್ಟೊ ಕೇಟ್, ಮಂಗಳೂರು) ೮) ಶ್ರೀಮತಿ ಸಾವಿತ್ರಿ : (ಪತಿ : ಎಂ.ಎಸ್. ಭಟ್, ಚಾರ್ಟಡ್್ರ ಎಕೌಂಟೆಂಟ್, ಮುಂಬಯಿ)