ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ - ತೆಂಕಮಟ್ಟು

ಘಟ್ಟದ ಕೆಳಗಿನ ನಮ್ಮ ಕನ್ನಡ ಜಿಲ್ಲೆಗಳಲ್ಲಿ 'ಯಕ್ಷಗಾನ ದಶಾವತಾರ ಆಟವು' ಎಲ್ಲಿ ಹುಟ್ಟಿತು, ಅದರ ಮೊದಲ ಸ್ವರೂಪ ಯಾವುದು- ತೆಂಕಮಟ್ಟೋ, ಬಡಗ ಮಟ್ಟೋ? ಶಾಸ್ತ್ರೀಯವೋ, ಜಾನಪದವೋ? ಮೂಲ ಪ್ರವರ್ತಕನು ಯಾರು? ಎಂಬ ವಿಚಾರ.

ನಮ್ಮ ದಕ್ಷಿಣ ಕನ್ನಡದಲ್ಲಿ ಮೊದಲಿನಿಂದಲೂ ಪ್ರತೀತಿ ಇರುವಂತೆ, ಕುಂಬಳೆಯ ಕವಿ ಪಾರ್ತಿಸುಬ್ಬನೇ, ರಾಮಾಯಣ ಪ್ರಸಂಗಗಳನ್ನೂ ಪೂರ್ವರಂಗ ವಿಧಿಯ ಸಭಾಲಕ್ಷಣ ಗ್ರಂಥವನ್ನೂ ರಚಿಸಿ, ಕೇರಳದಲ್ಲಿದ್ದ ಕೂತ್ತುಕ್ಕಳಿಗಳಂತೆಯೇ ನಮ್ಮಲ್ಲಿ 'ದಶಾವತಾರ ಆಟ'ವನ್ನು ಉಂಟುಮಾಡಿದವನು; ಹಾಗೂ ಮೊದಲ ಆ 'ದಶಾವತಾರ ಮೇಳ'ವು ಕುಂಬಳೆಯ ಕಣಿಪುರ ಕೃಷ್ಣ ದೇವಸ್ಥಾನದಿಂದ ಹೊರಟದ್ದಾಗಿತ್ತು. ನಮ್ಮ ಜಿಲ್ಲೆಯ ಅನೇಕ ಮಂದಿ ವಿದ್ವಾಂಸರು ಈ ಶತಕಾರಂಭದಿಂದಲೇ, ಈ ವಿಚಾರವನ್ನು ಲೇಖನ ಭಾಷಣಗಳ ಮೂಲಕ ಪ್ರಕಾಶಪಡಿಸಿರುತ್ತಾರೆ. ಅಂತಹವರಲ್ಲಿ ಕೀರ್ತಿಶೇಷರಾದ ಕೆಲವರ ಉಲ್ಲೇಖಗಳನ್ನು ಇಲ್ಲಿ ಸ್ಮರಿಸಬಹುದು :


ತುಳುನಾಡಿನ ಇತಿಹಾಸ ಸಂಶೋಧನೆಯಲ್ಲಿ ಶ್ರಮಿಸಿದವರಾಗಿದ್ದ ಹಾಗೂ ಗಣ್ಯ ವಿದ್ವಾಂಸರಾದ ದಿ| ಬಡಕಬೈಲು ಪರಮೇಶ್ವರಯ್ಯ ಎಂಬ ಯಕ್ಷಗಾನ ಕವಿಗಳು ತಾವು ರಚಿಸಿದ "ತುಳು ಕೃಷ್ಣಸಂಧಾನ" ಯಕ್ಷಗಾನ ಗ್ರಂಥದ ಮುನ್ನುಡಿಯಲ್ಲಿ ಹೀಗೆ ಹೇಳಿರುತಾರೆ- "ಈ ಯಚ್ಚಗಾನೊಣ್ಪಿನಾವು ನಮ್ಮ ತುಳುನಾಡ್‌ ಪಿರಾಕ್‌‍ಡ್ದ್ ಆ ಕಣಿಪುರತ ಕಿಟ್ಟದೇವರೆ ದೇವತ್ತಾನದ ಪಾಟಾಳಿ ಪರ್ವದಿಮಗೆ ಸುಬ್ಬಾಡ್ದ್ ಉದಿಯಾದ್ ಇತ್ತೆ ಐನ್ ಪಿಂದಿನ ಮಾತೆರೆ ಮುಗತಾಮರೆಡ್‍ಲಾ ಆಯ ಪುದಾರ್ ಪುಟ್ಟಂದೆ ಇದ್ದಿ. ಅ೦ಚಾನಗ ಆಯನೇ ಈ ಕಲೆನ್ ಮೂಳ್ ಉಂಡುಮಾಳಿ, ಬೆರ್ಮೇಂದ್‌‍ಂಡ ದಾನ ಕುಂದು?... ಅತ್ತಂದೆ ಆಯಗ್ ಕನ್ನಡದಾತ ತುಳುಟು ಪಿರಿತಿ ಇತ್ತ್ಂಡ್‌ಂದ್ ಪಣಿಯೆರೆ ಕಣಿಪುರತ ಕಿಟ್ಟದೇವರ ಗುರ್ತ ದೀದ್ ಆಯೆ ಮಳ್ತಿನ ಏತೇತೋ ತುಳು ಕೀರ್ತನೆಳು ಇತ್ತೆ ಅನೇಕ ಜನ ತುಳುವೆರೆ ಬಾಯಿಡ್ ತೂವರೆ ತಿಕ್ಕುಂಡು. ಎಚ್ಚದಾಯೆ? ೧೯೦೫ನೆ ಇಸವಿಡ್ ಕಾರ್ಲದ ವೆಂಕಟ್ರಮಣ ದೇವರೆ ಮಲ್ಲ ದೀಪದಾನಿ ಮಣ್ಣಗೋಪುರದಳ್ಪ ಒರಿ ಕೈಕಾರ್‌ ಸಮದಂತೆ ನಟ್ಟುಮಾನ್ಯೆ ಗುರ್ಜಿಡಿತ್ತಿನ ದೇವೆರೆನ್ ತೂವೊಂದು ಕೈಮುಗಿದ್ ಪಂಡೊಂಡಿತ್ತಿನ 'ನಾಣೆಂಚ್ ಗತಿಯೇ‌ ಪಣ್‌ಲೇ ರಂಗಯ್ಯ, ಕಾಣಿಕೆ ಈರೆಗ್ ಎನ ಮನಸಯ್ಯ... ಕಣ್ವಪುರೊಂತ ಶ್ರೀಕೃಷ್ಣನ ಧ್ಯಾನೊ' ಈ ಪದಕುಳೇನ್ ಕೇಂಡಿನಾಗ ಇತ್ತೆಲ ಎನ ಮೈ ಚುಂಗರಿದ್ ಕಣನೀ‌ರ್ ಉರ್ಕುಂಡು".

ಇದರ ತಾತ್ಪರ್ಯ ಹೀಗೆ: “ಈ ಯಕ್ಷಗಾನವೆಂಬುದು ಹಿಂದಕ್ಕೆ ನಮ್ಮ ತುಳುನಾಡಿನ ಕಣಿಪುರದ ಕೃಷ್ಣ ದೇವಸ್ಥಾನದ ಪಾಟಾಳಿಯಾಗಿದ್ದ ಪಾರ್ವತಿಯ ಮಗ ಸುಬ್ಬನಿಂದ ಉದಯಕ್ಕೆ ಬಂದಿತು. ಯಕ್ಷಗಾನವನ್ನು ಬಲ್ಲ ಸರ್ವರ ಬಾಯಿಂದಲೂ ಆತನ ಮಾತು ಕೇಳಿಬರುತ್ತಿದೆ. ಆತನಿಗೆ ಕನ್ನಡದಲ್ಲಿ ಇದ್ದಷ್ಟೇ ಆದರ ತುಳುವಿನಲ್ಲೂ ಇತ್ತು ಎಂಬುದಕ್ಕೆ ಆತನು ಕಣಿಪುರದ ಕೃಷ್ಣದೇವನ ಅಂಕಿತದಲ್ಲಿ ರಚಿಸಿದ ಅದೆಷ್ಟೋ ತುಳು