ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೪೫

ಬಿರುದಾಂಕಿತನಾಗಿದ್ದನು. ಈತನ ನಂತರ ಇವನ ಕೃತಿಗಳನ್ನೇ ಮೇಲ್ಪಂಕ್ತಿಯಾಗಿಟ್ಟು ಕೊಂಡು ಮೂಲ್ಕಿಯ ವೆಂಕಣ್ಣಕವಿ, ಗೆರಸೊಪ್ಪೆ ಶಾಂತಪ್ಪಯ್ಯ, ಮಟ್ಟಿ ವಾಸುದೇವ ಪ್ರಭು ಮೊದಲಾದ ಕೀರ್ತಿಶೇಷ ಕವಿಗಳು ಯಕ್ಷಗಾನ ಪ್ರಬಂಧಗಳನ್ನು ಮಾಡಿರುವರು.. ಕಥಕಳಿಯೆಂದು ಮಲಬಾರಿನಲ್ಲಿದ್ದ ಈ ದೃಶ್ಯಕಲೆಯನ್ನು ಪಾರ್ತಿಸುಬ್ಬನು ಅಲ್ಲಿಂದ ಸಂಗ್ರಹಿಸಿ ದಕ್ಷಿಣ ಕನ್ನಡಕ್ಕೆ ತಂದು ಪರಿವರ್ತನೆಗೊಳಿಸಿದ್ದನೆಂಬುದಕ್ಕೆ ಆತನಿಂದ ವಿರಚಿತ ವಾದ 'ಸಭಾಲಕ್ಷಣ'ವೇ ಆಧಾರವಾಗಿದೆ. ಅದರಲ್ಲಿ, ಕೇರಳದಲ್ಲಿ ಪ್ರಸಿದ್ಧಿಯಿರುವ ಕಥಕ್ಕಳಿಯ ಮೂಲಸೂತ್ರದ ಮಾತೃಕೆಗಳಿರುತ್ತವೆ. ಕರ್ನಾಟಕಕ್ಕಿಂತಲೂ ಮೊದಲೇ ಕೇರಳದಲ್ಲಿ ದಶಾವತಾರ ನಾಟಕಗಳು ಪ್ರಸಿದ್ದಿಯಲ್ಲಿದ್ದುವೆಂದು ತಿಳಿದುಬರುತ್ತದೆ' ಎಂದಿರುತ್ತಾರೆ.

ದಿ| ಮಂಜೇಶ್ವರ ಗೋವಿಂದ ಪೈಗಳು ಮದ್ರಾಸ್ ಆಕಾಶವಾಣಿಯಿಂದ ಮಾಡಿದ ಭಾಷಣದಲ್ಲಿ ಹಾಗೂ ಬರೆದ ಲೇಖನಗಳಲ್ಲಿ- ಯಕ್ಷಗಾನ ಸಾಹಿತ್ಯದ ಕಬ್ಬಿಗನೂ, ಗುರುವೂ, ಆಚಾರ್ಯನೂ ಆದ ಪಾರ್ವತಿಯ ಮಗ ಸುಬ್ಬನೇ ಎಂದರೆ ಪಾರ್ತಿಸುಬ್ಬನೇ ವಿನಾ ಅನ್ಯನಲ್ಲವೆಂದು ಬೇಕಾದಷ್ಟು ನಿಷ್ಕೃಷ್ಟವಿರುತ್ತದೆ. ಆತನು ಪಾಟಾಳಿಗಳ ಮನೆತನ ದವನಾಗಿದ್ದನು. ಆತನು ಕುಂಬಳೆಯ ಬಯಲಾಟದ ಮೇಳದಲ್ಲಿ ಭಾಗವತನಾಗಿದ್ದ ನೆಂದೂ ಲೋಕವಾದವಿದೆ. ೧೮೦೯ರಲ್ಲಿ ಕೈಲಾಸವಾಸಿಗಳಾದ ಕುಂಬಳೆ ರಾಯಪ್ಪ ನಾಯಕರು ಕಟ್ಟಿಸಿದ ಮೇಳದಲ್ಲಿ ಆತನೂ ಭಾಗವತನಾಗಿದ್ದಿರಬಹುದು. ಪಾರ್ತಿಸುಬ್ಬನು ತಿರುವಾಂಕೋಡು ರಾಜ್ಯಕ್ಕೆ ಹೋಗಿ ಅಲ್ಲಿ ಕೊಂಚ ಸಂಸ್ಕೃತವನ್ನು ಕಲಿತಿದ್ದನೆಂದೂ, ತಾನು ಅಲ್ಲಿ ಕಂಡ ಕೂತ್ತೂಕಳಿಗಳ ಬಗೆಯವೇ ಆದ ವೇಷಗಳನ್ನು ತುಳುನಾಡಿನಲ್ಲಿಯೂ ಬರೆಯಿಸಿದನು ಎಂಬ ಪ್ರವಾದವಿದೆ. ಸಭಾಲಕ್ಷಣ ಗ್ರಂಥವನ್ನೂ ಆತನು ಬರೆದಿದ್ದನೆಂಬ ಹೇಳಿಕೆಯಿದೆ ಎಂದಿರುತ್ತಾರೆ.

ಮಂಗಳೂರಿನವರಾದ ದಿ| ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಆತನ ಹಾಗೂ ಆತನ ಕೃತಿಗಳ ವಿಮರ್ಶೆಯಾಗಿ 'ಪಾರ್ತಿಸುಬ್ಬ' ಎಂಬ ಗ್ರಂಥವನ್ನು ರಚಿಸಿರುವುದು ಎಲ್ಲರೂ ತಿಳಿದಿರುವ ವಿಚಾರ.

ಆತನ ಕುಟುಂಬದವರೆನ್ನಲಾದ ಕುಂಬಳೆ ಊರಿನ ನಾರಂಪಾಡಿಯೆಂಬರುವ ಪಾಟಾಳಿ ಸುಬ್ಬರಾಯರ ಮಗ ಪ್ರಸಿದ್ಧ ಯಕ್ಷಗಾನ ವೇಷಧಾರಿಗಳಾಗಿದ್ದ ರಾಮಯ್ಯ ನವರು ಈಗ ಹತ್ತು ವರ್ಷಕ್ಕೆ ಹಿಂದೆ ನಮ್ಮಲ್ಲಿ ಮುಖತಃ ಹೇಳಿದ ವಿಚಾರ ಹೀಗಿದೆ: ಸುಬ್ಬನು ಮಲೆಯಾಳ ಭಾಷೆಯನ್ನು ಚೆನ್ನಾಗಿ ಬಲ್ಲವನಾಗಿದ್ದನೆಂದು ಆತನು ಪ್ರತಿ ಮಾಡಿದ ಓಲೆಗ್ರಂಥಗಳಿಂದ ತಿಳಿಯುವುದು. ಯಕ್ಷಗಾನದಲ್ಲಿ ಭಾಗವತಿಕೆ ಮಾಡುತ್ತಿದ್ದ ನೆಂದೂ, ಚುಟ್ಟಿ ಬರೆಯುತ್ತಿದ್ದನೆಂದೂ, ನಾಟ್ಯ ಕಲಿಸುತ್ತಿದ್ದನೆಂದೂ ಹಿರಿಯರ ಹೇಳಿಕೆ ಇದೆ. ರಾಮಾಯಣ ಪ್ರಸಂಗಗಳನ್ನಲ್ಲದೆ ಕೃಷ್ಣಲೀಲೆ ಐರಾವತಗಳನ್ನೂ ಮಾಡಿದ್ದನು. ಅವನ ತಮ್ಮನೊಬ್ಬನು ಹನುಮಂತನ ವೇಷದಲ್ಲಿ ಬಹಳ ಪ್ರಸಿದ್ಧಿಪಟ್ಟವನೆಂಬ ಖ್ಯಾತಿಯಿದ್ದುದನ್ನು ನಮ್ಮ ಹಿರಿಯರು ಹೇಳುತ್ತಿದ್ದರು. ಹನುಮಂತನ ವೇಷಕ್ಕಾಗಿ ಅನಂತಶಯನದ ಅರಸರಿಂದ ಆತನು ಪ್ರಶಸ್ತಿ ಪಡೆದಿದ್ದನಂತೆ. ಆ ಕೂತ್ತುಕುಳಿಯಲ್ಲೂ ಸುಬ್ಬನು ಭಾಗವತ ಮಾಡುತ್ತಿದ್ದನೆಂದೂ ಹಿರಿಯರ ಹೇಳಿಕೆಯಿದೆ.”

ಕರ್ನಾಟಕ ಕವಿಚರಿತೆಯಲ್ಲಿಯೂ ಪಾರ್ತಿಸುಬ್ಬನು ಕುಂಬಳೆಯ ಕಣಿಪುರದವ ನೆ೦ದೂ ರಾಮಾಯಣದ ಪ್ರಸಂಗಗಳನ್ನು ರಚಿಸಿದ ಯಕ್ಷಗಾನದ ಕವಿಯೆಂದು ಕೊಡಲಾಗಿದೆ, ಇತ್ಯಾದಿ.