ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೫೫

೧೫. ಹಲ್ಲೆ ಬಾಬ್ತು ಬೆಂಗಡೆಗೆ ಕಟ್ಟುವ ಸಣ್ಣ ಡಾಬು - ೧
೧೬. ಎಳೆ ಆರರ ಬಾಬ್ತು ಉಪ್ಪುಮಣಿ (ಉಪ್ಪಿಮಣಿ?) ವಾ ಮಡಂದಲೆ ಮಣಿ
ಸುರಿದಿರುವ ಪ೦ಚಮಾಲೆ ಸರ - ೧
೧೭. ಗುಂಡುಸರ - ೧
೧೮. ಕಾಲ ಮುಳ್ಳು ಜೋಡು - ೪
೧೯. ಕಾಲಚಂಡು ಜೋಡು - ೩
೨೦. ಈ ಪ್ರಕಾರ ಸಾಮಾನುಗಳು ಇರುವ ಕಟ್ಟುವೇಷದ ಸಾಮಾನುಗಳು-೭. (ಕಟ್ಟುವೇಷವೆಂದರೆ ಈಗ ರೂಢಿಯಲ್ಲಿರುವಂತೆ 'ಮುಖ್ಯವೇಷ'ವಾಗಿರುತ್ತದೆ.)

ಸ್ತ್ರೀವೇಷದ ಸಾಮಾನು ೧ರ ಬಾಬ್ತು ವಿವರ :

೧. ಕೈಕಟ್ಟಿಗೆ ಕಟ್ಟುವ ಬಾಬ್ತು ಹಲ್ಲೆ ಬಾಲ್ಕು ಕಡ್ಡಿ ಹವಳಮಣಿ ಸಹಾ ಪವಣಿಸಿರುವ ಐದು ತರಗಳ ಬಾಬ್ತು ಕೈಕಟ್ಟು, ಜೋಡು - ೧
೨. ಹಲ್ಲೆ ಬಾಬ್ತು ಬಾಜುಬಂದು ಜೋಡು - ೧
೩. ನಾಲ್ಕು ಎಳೆ ಬಾಬ್ತು ಮಡಂದಲೆ ಮಣಿ ಬಾಬ್ತು ಕಾಯಿಸರ ಜೋಡು-೧
೪. ಹವಳ, ಗುಂಡು ಸಹ ಪವಣಿಸಿರುವ ಕಾಯಿಸರ ಜೋಡು - ೧
೫. ಐದು ಎಳೆ ಬಾಬ್ತು ಕಟ್ಟಾಣಿ ಗುಂಡು ಸರ - ೧
೬. ವಾಲೆ ಜೋಡು - ೧. ಇದಕ್ಕೆ ಸೇರಿರುವ ಸರಪಣಿ ಜೋಡು - ೨
೭. ಮುಂದಲೆ ಬೊಟ್ಟು ಉಪ್ಪು ಮಣಿಸರ ಸಹ ಇರುವ ಹೆರಳ ಭಂಗಾರ ವಗೈರೆ - ೧
೮. ಸೊಂಟದ ಹಲ್ಲೆ ಬಾಬ್ತು ವಾ ಕಡ್ಡಿಗಳು ಸಹ ಇರುವ ಎಳೆ ಎರಡರ ಬಾಬ್ತು ಡಾಬು- ೧
೯. ಕಡ್ಡಿ ಬಾಬ್ತು ಸರಪಣಿ - ೧
೧೦. ಈ ಪ್ರಕಾರ ಸಾಮಾನುಗಳು ಇರುವ ೮ ಸ್ತ್ರೀವೇಷದ ಬಾಬ್ತು ಸಾಮಾನುಗಳು ೮.
೧೧. ಮತ್ತೂ ಸ್ತ್ರೀವೇಷದ ಬಾಬ್ತು ಮುಖ್ಯ ವೇಷಗಳ ಹೊಸ ರೂಪದ ಬಾಬ್ತು ಪದಕ ಪವಣಿಸಿರುವ ಪುತ್ತಳಿ ಸರಗಳು - ೨
೧೨. ದೌಪದಿ ಮುಂದಲೆ ಬೊಟ್ಟು - ೧
೧೩. ಉಪ್ಪಾನೆ ಕನ್ನಡಿ ಸರ - ೧
೧೪. ಮುರ್ವ (ಮುಂದಲೆ, ಮರ್ಧ್ವಲೆ?) ಸರ - ೧
೧೫. ಪಂಚಮಾಲೆಗಳ ಸರ - ೨
೧೬. ಕಾಲಕಡಗ ಜೋಡು - ೨

(ದೌಪದೀ ಪ್ರತಾಪದ ಸ್ತ್ರೀವೇಷ, ಇದು ಪ್ರಮೀಳೆ ಇತ್ಯಾದಿ ವೀರವೇಷ)

೧. ರಾಮಲಕ್ಷ್ಮಣರ ಕಿರೀಟಗಳು - ೨
೨. ಈ ತರದ ಬಾಬ್ತು ಕಿರೀಟ - ೧೨
೩. ಹನುಮಂತನ ಕಿರೀಟ - ೧
೪. ಕೇಶವರ ಕಿರೀಟಗಳು - ೩
೫. ಕೇಶರತಟ್ಟಿಗಳು - ೩
೬. ಕುರಲಾರಗಳು - ೮