ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೬೧

ರೂರ್ಪಾಸಕ್ಕೆ 'ದಗಲೆ' ಹಾಗೂ ಕುಪ್ಪಸ ಎಂದೂ, 'ಚಲನ'ಕ್ಕೆ ಚಣವೆಂದೂ ನಮ್ಮಲ್ಲಿ ಹೇಳುತ್ತಾರೆ. ಮೊಣಕಾಲಿಂದ ಕೆಳಭಾಗಕ್ಕೆ ವಸ್ತ್ರವನ್ನು ಸುತ್ತಿ ಗೆಜ್ಜೆ ಕಟ್ಟಿರುವ ಚರ್ಮದ ಪಟ್ಟಿಯನ್ನು ಕಾಲಿಗೆ ಕಟ್ಟುವುದೂ ಸರಿಯಷ್ಟೆ? ಇದಕ್ಕೆ ನಮ್ಮಲ್ಲಿ 'ಹಲ್ಲೆಗೆಜ್ಜೆ' ಎನ್ನುತ್ತಾರೆ.
ದೃಶ್ಯ ಪ್ರಯೋಗದಲ್ಲಿ ಆಹಾರ್ಯಕ್ಕೆ ಎಂದರೆ ವೇಷ ಕಟ್ಟುವುದಕ್ಕೆ ವಿಶೇಷ ಗಮನ ಕೊಡಬೇಕೆಂದೂ, ಅದರಿಂದ ತಾನಾಗಿಯೇ ಭಾವಾಭಿವ್ಯಕ್ತಿಯು ಸುಲಭ ಸಾಧ್ಯವಾಗುವು ದೆಂದೂ ಭರತನು ಹೇಳುತ್ತಾನೆ :
ನಾನಾವಸ್ಥಾ: ಪ್ರಕೃತಯಃ ಪೂರ್ವನೇಪಥ್ಯ ಸಾಧಿತಾ: |
ಅಂಗಾದಿಭಿರಭಿವ್ಯಕ್ತಿಮುಗಚ್ಚಂತ್ಯಯತ್ನತಃ ||
ತತ್ರಕಾರ್ಯ: ಪ್ರಯತ್ನನ್ನು ನಾಟ್ಯಸ್ಯ ಶುಭಮಿಚ್ಛತಾ |
ತಸ್ಮಿನ್ ಯತ್ನನ್ನು ಕರ್ತವ್ಯೂ ನೇಪಥ್ಯ ಶುಭಮಿಚ್ಛತಾ ||
ಸಮಸ್ತಾಭಿನಯ ವಿಚಿತ್ರ ಪ್ರಯೋಗಸ್ಯ ಭಿತ್ತಿ ಸ್ನಾನಮಾಹಾರ್ಯ೦
ಇನ್ನು ಸಭಾಲಕ್ಷಣ (ಪೂರ್ವರಂಗ) ಪ್ರಯೋಗದ ಶಾಸ್ತ್ರೀಯತೆ :
ಇದರ ಮೊದಲ ವಿಧಿ ಎಂದರೆ ವಾದ್ಯಗಳನ್ನು ರಂಗಸ್ಥಳಕ್ಕೆ ತಂದು ಗೀತವಿಲ್ಲದೆ ಸ್ವಲ್ಪ ಕಾಲ ಜೋರಾಗಿ ಧ್ವನಿಗೊಳಿಸುವುದು. ನಾಟ್ಯಶಾಸ್ತ್ರದಲ್ಲಿ ಇದಕ್ಕೆ 'ಆಶ್ರಾವಣಾವಿಧಿ ಎಂದು ಹೆಸರು.
ವಾದ್ಯಾನಾಂ ಮುರಜಾದೀನಾಂ ಪ್ರಸ್ತುತಿ: ಕಾರ್ಯಮುಚ್ಯತೇ |
ಆತೋದ್ಯ ರಂಜನಾರ್ಥಂತು ಭವೇದಾಶ್ರಾವಣಾ ವಿಧಿಃ || (ಭ. ನಾ.)
ಎಂದರೆ ಸುತ್ತಮುತ್ತ ದೂರದಲ್ಲಿದ್ದವರಿಗೆಲ್ಲಾ ಕೇಳಿಸುವಂತೆ ವಾದ್ಯಘೋಷವನ್ನು ಮಾಡುವುದು ಎಂದರ್ಥ. ಇದನ್ನೇ ನಮ್ಮ ಯಕ್ಷಗಾನದಲ್ಲಿ 'ಕೇಳಿ ಬಡಿಯುವುದು' ಎನ್ನುತ್ತೇವೆ. ಕಥಕಳಿಯಲ್ಲಿ 'ಕೇಳಿಕೊಟ್ಟು' ಎನ್ನುತ್ತಾರೆ. ಆಮೇಲೆ ಸೂತ್ರಧಾರನು ಸ್ತುತಿ ಪದ್ಯಗಳನ್ನು ಹಾಡುವಾಗ ಇಬ್ಬರು ಪಾರಿಪಾರ್ಶ್ವಕರು ರಂಗಸ್ಥಳಕ್ಕೆ ಪ್ರವೇಶಿಸಿ ಕುಣಿತ ವಿಲ್ಲದೆ ದೇವರ ನಾಮಕೀರ್ತನೆ ಮಾಡುತ್ತಾ ಮಧ್ಯದಲ್ಲಿ ಆಗಾಗ, ನಾಟ್ಯಕ್ಕೆ ಶುಭವಾಗಲಿ, ದೇವತೆಗಳಿಗೆ ಜಯವಾಗಲಿ, ನಾಟಕವನ್ನು ನಾಟಕವನ್ನು ಆಡಿಸುವವರಿಗೂ, ಆಡುವವರಿಗೂ, ನೋಡುವ ಸಭಿಕರಿಗೂ ಸುಖಸಂತೋಷಗಳುಂಟಾಗಲಿ, ಲೋಕಕ್ಕೆ ಕ್ಷೇಮವಾಗಲಿ ಎಂದು ಘೋಷಿಸುತ್ತಾ ರಂಗಸ್ಥಳದಲ್ಲಿ ಅಡ್ಡಾಡಬೇಕೆಂದು ನಾಟ್ಯಶಾಸ್ತ್ರದಲ್ಲಿ ವಿಧಿ ಇರುತ್ತದೆ.
ಸೂತ್ರಧಾರ: ಪಠೇನ್ನಾಂದೀಂ ಮಧ್ಯಮಂ ಸ್ವರಮಾಶ್ರಿತಃ |
ನಮೋಸ್ತು ಸರ್ವದೇವೇಭೋ ದ್ವಿಜಾತಿಭ್ಯಃ ಶುಭಂ ತಥಾ ||
ಪ್ರಶಾಸ್ಮಿಮಾಂ ಮಹಾರಾಜಃ ಪೃಥಿವೀಂ ಚ ಸಸಾಗರಾಂ |
ರಾಜ್ಯಂ ಪ್ರವರ್ಧತಾಂ ಚೈವ ರಂಗಶ್ಚಾಯಂ ಸಮೃಧೃತಾಂ ||
ಪ್ರೇಕ್ಷಾಕರ್ತುರ್ಮಹಾನ್ ಧರ್ಮೋ ಭವತು ಬ್ರಹ್ಮಭಾವಿತಃ |
ಕಾವ್ಯಕರ್ತುರ್ಯಶಾಸ್ತು ಧರ್ಮಶ್ಚಾಪಿ ಪ್ರವರ್ಧತಾಂ ||
ಇಜ್ಯಯಾ ಚಾನಯಾ ನಿತ್ಯಂ ಪ್ರಿಯತಾಂ ದೇವತಾ ಇತಿ ||
ನಾಂದೀಪದಾಂತರೇಷ್ಟೇಷು ಹೈವಮತಿ ನಿತ್ಯಶಃ |
ವಂದೇತಾಂ ಸಮ್ಯಗುಕ್ಕಾಭಿರ್ಗೀಭಿ್ರಸ್ ಪರಿಪಾರ್ಶ್ವಕೆ |
ಏವಂ ನಾಂದೀ ವಿಧಾತಾ ಯಥೋಕ್ತಾ ಲಕ್ಷ್ಮಣ್ಯರ್ಮಯಾ |