ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೬೫

ಪ್ರದರ್ಶನ ಮಾಡುವ ಕ್ರಮಕ್ಕೆ ನಾವು 'ಅಬ್ಬರತಾಳ' ಎನ್ನುತ್ತೇವೆ. ಈ ಕ್ರಮ ಮತ್ತು ಹೆಸರು ಎಲ್ಲವೂ ಶಾಸ್ರೋಕ್ತವಾದುದೇ ಆಗಿವೆ. ಭರತಕಲ್ಪಲತಾಮಂಜರಿಯ ಈ ಶ್ಲೋಕಗಳನ್ನು ಪರಿಶೀಲಿಸಿರಿ:


ಕುಶೀಲವೈರ್ವಯತೇ ನೃತ್ಯಾದೌ ತೂರ್ಯಘೋಷಣಂ ।
ತದಬ್ಬರಮಿತಿ ಪ್ರೋಕ್ತಂ ನಾಟ್ಯಶಾಸ್ತ್ರವಿಶಾರದೈಃ ॥
ನಾಟ್ಯಂ ತತ್ರ ಪ್ರಯೋಕ್ತವ್ಯಂ ಝಂಪಾತಾಳಾನುಸಾರತಃ ।
ತತೋ ನಾಟಪದಸ್ಯಾಪಿ ಪ್ರಯೋಗೇ ರೀತಿರಿಷ್ಯತೇ ॥

ನಮ್ಮ ಆಟದ ಪ್ರಸಂಗಾರಂಭದಲ್ಲಿಯೂ ನಾಟಿರಾಗ ಜಂಪೆತಾಳದ ಪದವೇ ಇರುವುದಷ್ಟೆ? ಪಾತ್ರಗಳು ಪ್ರವೇಶ ಮಾಡುವ ಗತಿಪ್ರಚಾರವೂ ಜಂಪತಾಳಾನುಸಾರವಾಗಿಯೇ ಇರುವುದಾಗಿದೆ. ಮೇಲಿನ ಶ್ಲೋಕದ ತೆಲುಗು, ವ್ಯಾಖ್ಯಾನದಲ್ಲಿ ಅದನ್ನೇ ಹೇಳಿರುತ್ತಾನೆ. (ಜಂಪೆತಾಳಾನುಸಾರಂಗಾ 'ಜಗದತ್ತಾ' ಅನೇ ಅಕ್ಷರಾಲು ಜಾತನೇ ತತ್ತಕಾರ ಮುಂಚೇಯವಲೇನು- ನಾಟ ರಾಗಾನ ಪದಮು ಪಾಡೇಲಪ್ಪುಡು):

ಇನ್ನು ಕುಣಿತದ ಶಾಸ್ತ್ರೀಯತೆಯನ್ನು ಸ್ವಲ್ಪಮಟ್ಟಿಗೆ ನೋಡೋಣ, ತೆಂಕಮಟ್ಟಿನ ವೇಷಗಳ ಕುಣಿತದಲ್ಲಿ ನಾನಾ ವೈಶಿಷ್ಟ್ಯಗಳಿವೆ. ಪ್ರತಿಯೊಂದು ಭೂಮಿಕೆಗೂ ಅದರ ಸ್ವಭಾವಕ್ಕನುಗುಣವಾದ ಪ್ರತ್ಯೇಕ ನೃತ್ತವಿದೆ. ಎಲ್ಲ ಪುರುಷವೇಷಗಳೂ ನೃತ್ಯಾರಂಭದಲ್ಲಿ ರಂಗಸ್ಥಳದಲ್ಲಿ ಸುತ್ತಿಸುಳಿದು ಮತ್ತೆ ನಾನಾ ವಿಧದಲ್ಲಿ ಲಾಗ ಹಾಕುತ್ತವೆ. ದೊಡ್ಡ ಲಾಗ, ಗತ್ತಿನ ಲಾಗ, ಅಂತರಲಾಗ, ಅಡಂತರಲಾಗ ಇತ್ಯಾದಿ ನೃತ್ಯಗಳು ಹಲವು ವಿಧ. ನಿಂತಲ್ಲ ಬೊಗರಿಯಂತೆ ಗರಗರ ಚಕ್ರ ಸುತ್ತುತ್ತವೆ, ಎಡಕ್ಕೂ, ಬಲಕ್ಕೂ ಪ್ರದಕ್ಷಿಣ ಅಪ್ರದಕ್ಷಿಣವಾಗಿ ತಿರುಗುತ್ತವೆ, ತಿರುಗುಲಾಗದಲ್ಲಿಯೇ ರಂಗಸ್ಥಳಕ್ಕೆ ಸುತ್ತುತ್ತವೆ. ಆ ತಿರುಗು ಸುತ್ತಿನಲ್ಲಿ, ನಾಲ್ಕೂ ದಿಕ್ಕುಗಳಲ್ಲಿ ಕ್ಷಣಾರ್ಧ ನಿಂತು ಮತ್ತೆ ಗಾತ್ರವನ್ನು ಆಕುಂಚಿಸಿ, ಪುನಃ ಜಿಗಿಜಿಗಿದು ಲಾಗ ಹಾಕುತ್ತವೆ; ರಂಗಮಧ್ಯದ ಕೇಂದ್ರದಿಂದ ರಂಗದ ಪರಿಧಿಯವರೆಗೆ 'ಒರ್ಮ್ಮೆ ಲಾಗ'ದಿಂದ ಮುಂದಕ್ಕೆ ಜಿಗಿದು ಪುನಃ ಅದೇ ಗತಿಯಲ್ಲಿ ಹಿಂದಕ್ಕೆ ಹಾರಿ ಕೇಂದ್ರದಲ್ಲಿ ಹೆಜ್ಜೆ ಇಟ್ಟು, ಅಷ್ಟ ದಿಕ್ಕಿಗೂ ಚಕ್ರದ ಅರಗಳನ್ನು ಹೋಲುವಂತೆ, ಪುನಃ ಪುನಃ ಅದೇ ಗತಿಯನ್ನು ಆವರ್ತಿಸುತ್ತಾರೆ. ಪ್ರತಿಯೊಂದು ಲಾಗದ ಗತಿಯೂ ಚಂಡೆಮದ್ದಳೆಗಳ ವಿಶಿಷ್ಟ ಗತ್ತುಗಳನ್ನು ಅನುಸರಿಸಿಕೊಂಡೇ ಸಾಗುತ್ತದೆ.

ನಿಲ್ಲುವಾಗ ಕಾಲುಗಳನ್ನು ಅಗಲಿಸಿ ನಿಲ್ಲುವುದು ನಮ್ಮ ವೇಷಗಳ ಕ್ರಮ. ಹೀಗೆ ಅಗಲಿಸುವ ಅಂತರವು ಬೇರೆ ಬೇರೆ ವೇಷಗಳಿಗೆ ಭಿನ್ನ ಪ್ರಮಾಣದಲ್ಲಿರುತ್ತದೆ. ಗತಿಪ್ರಚಾರದಲ್ಲಿ ಎಂದರೆ ರಂಗಸ್ಥಳದಲ್ಲಿ ಸುತ್ತಾಡುವಾಗ, ಹಜ್ಜೆಯಿಂದ ಹಜ್ಜೆಗೆ ಇರುವ ದೂರದಲ್ಲಿ ವ್ಯತ್ಯಾಸವಿರುತ್ತದೆ. ಈ ಗತಿವೈವಿಧ್ಯವನ್ನು ಪ್ರತ್ಯಕ್ಷ ಕಾಣಬೇಕಲ್ಲದೆ ಹೇಳಿ ತಿಳಿಸುವುದು ಅಸಾಧ್ಯ. ಇವೆಲ್ಲ ಶಾಸ್ರೋಕ್ತ ಕ್ರಮಗಳೇ ಆಗಿವೆ. ಇವಕ್ಕೆಲ್ಲ ಪ್ರತ್ಯೇಕ ಲಕ್ಷಣವೂ, ಹೆಸರೂ ಶಾಸ್ತ್ರದಲ್ಲಿದೆ. ಪ್ರತಿಯೊಂದರ ಲಕ್ಷಣವನ್ನು ಬರೆದರೆ, ಅದೇ ಒಂದು ದೊಡ್ಡ ಗ್ರಂಥವಾಗಬಹುದು. ಈ ಚಿಕ್ಕ ಲೇಖನದ ವ್ಯಾಪ್ತಿಗೆ ಅದು ಒಳಪಡದು,ಕೆಲವನ್ನು ಮಾತ್ರ ಸೂಚಿಸುತ್ತೇನೆ.

ದೇವತಾವೇಷಗಳೂ, ರಾಜವೇಷಗಳೂ ಕಾಲುಗಳನ್ನು ನಾಲ್ಕು ಗೇಣುಗಳಷ್ಟು ಅಂತರದಲ್ಲಿ ಅಗಲಿಸಿಡಬೇಕೆಂದೂ, ಮಧ್ಯಮವೇಷಗಳ ಕಾಲುಗಳು ಎರಡು ಗೇಣು