ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಟಂಪರಾಕ್ರಮ . 7. ಸಾಮಾನ್ಯ ರ್ಪಾಕ್ರಮವಲ್ಲ, ಅತಾಯಿಖಾನನು ತನ್ನ ತಂದೆಯನ್ನು ರಕ್ಷಿಸುತ್ತಿರುವಾಗ ವಿಶ್ವಾಸರಾಯನ ಬಂದೂಕಿನೊಳಂದ ಹೊರಟವೊದು ಗುಂಡು ಆತನ ಎದೆಗೆ ಒಡೆಯ ಲು ಆತನು- ಯಾ ಅಲ್ಲ” ಎಂದು ಒದರಿ ತಂದೆಯಮೇಲೆ ಬಿದ್ದು ಗತಣನಾದನು. ಈತನು ಹಿಂದಕ್ಕೆ, ಗೋವಿಂದಪತ ಬಂದಲೆಯ ತಿರಸನು, ಜೊಜು ಹಾಗೆ ಆಟಿಕೆ ಯಾಗಿ ಅರ್ಪಿಸಿದ್ದನು. ಮಗನ ಈ ದುರವಸ್ಥೆಯನ್ನು ನೋಡಿ ಶಹಾವಲ್ಲಿಯು ಮೂರ್ಛಿ ತವಾಗಿ ಹಿಂದಕ್ಕೆ ಬಿದ್ದನು. ಅಷ್ಟರಲ್ಲಿ ಬಳಿಯಲ್ಲಿದ್ದವರು ಆತನನ್ನು ದರ ಏರ ಎಳೆಯೊ ಯುಗಲು; ವಿಶ್ವಾಸರಾಯನ ಗಜರಾಜನು ಮದೋದಕವನ್ನು ಪ್ರವಿಸುತ್ತ ಅತಾಯಿಖಾ ನನ ಶವದ ಮೇಲೆ ಧೈ ಧೈಯಿಂದ ಕುಣಿದು ಅದನ್ನು ನೆಲಕ್ಕೊರಿಸಿಬಿಟ್ಟಿತು! ಅಶ್ವ ಬೀರಿ ಕಡೆಯಲ್ಲಿಯ ಉಳಿದ ಮೊಗಲರು, ಅಫಗಾಣರು, ಪಠಾಣರು, ರೋಹಿಲರು ಮೊದಲಾದ ವರನ್ನು ಮರಾಟರು ಹೊಡೆದು ಹಿಂದಕ್ಕಟದರು, ಈ ಘನಘೋರ ಸಂಗ್ರಾಮದಲ್ಲಿ ಮರಾಟರ ಅಸಂಖ್ಯದಳದ ಸಂಹಾರವಾಯಿ ೯೦. ರಣಭೂಮಿಯಲ್ಲಿ ರಕ್ತವು ಸರವುಗಟ್ಟ ಹರಿಯಹತ್ತಿತು. ಹೀಗೆ ಮರಾಟರು ಜಯಶಾಲಿಗಳಾಗುತ್ತಿರ ವ ಗ ಒಮ್ಮೆಲೆ ದುರ್ದೈ ವದ ವಕ್ರದೃಷ್ಟಿಯು ಅವರ ಮೇಲೆ ಹೊರಳಿತು. ದುವಾಣಿಯ ಸೈನ್ಯವು ಮತ್ತೆ ಮರಾಟಿತ ಮೇಲೆ ವೇಗದಿಂದಬಿದ್ದಿತು. ಆಗ ಮರಾಟರು ಹಿಂದಕ್ಕೆ ಸರಿಯಹತ್ತಿದರು. ಇದನ್ನು ನೋಡಿ ಭಾವುಸಾಹೇಬನು ತನ್ನ ಆನೆಯನ್ನು ಒತ್ತರದಿಂದ ಮುಂದಕ್ಕೆ ನೂಕಿದನು. ಎಡಗಡೆ ಯಿಂದ ವಿಶ್ವಾಸರಾಯನೂ ಭರದಿಂದ ಏರಿಬಂದನು, ಬಲಗಡೆಯಿಂದ ಜನಕೋಣಿಂದೆ ಯ, ಮಹದಾಜಿಸಿಂದೆಯ: ಸೈನ್ಯವನ್ನು ಸಂಹರಿಸುತ್ತ ಮುಂದಕ್ಕೆ ಸಾಗಿಬಂದರು, ಬಾಣಗಳ ಯುದ್ಧವು ನಿಂತು ಖಡ್ಡಗಳ ಯುದ್ದಕ್ಕೆ ಆರಂಭವಾಯಿತು. ಒಂದು ಪ್ರಹರ ದವರೆಗೆ ಈ ಶಸಯುದ್ಧವು ನಡೆದ ರಣವು ಶವಮಯವಾಯಿತು. ಉಭಯ ದಳದ ವೀರರೂ ಒಬ್ಬರನ್ನೊಬ್ಬರು ಬೆರೆತು ಹೋಗಿ ಸ್ವ-ಪರಭೇದವನ್ನರಿಯದೆ ಆವೇಶದಿಂದ ಕಾದ ತೊಡಗಿದ್ದರು. ಎಲ್ಲರಿಗೂ ರಣವದ ಸೇರಿದಂತಾಗಿತ್ತು. ಉಭಯ ಶ್ರೀಮಂತರ ಆನೆಗಳೂ ಸೃ ಸೈನಿಕರನ್ನು ಪ್ರೋತ್ಸಾಹಿಸುತ್ತ ವೈರಿಗಳನ್ನು ಸಂಹರಿಸುತ್ತ ಮುಂದುವರಿ ದು ಸಾಗ'ತಲಿದ್ದವು. ಆಗ ಭಾವೂಸಾಹೇಬನು ಅಂಬಾರಿಯಿಂದ ಕೆಳಗಿಳಿದು ಎರಡೂ ಕೈಗಳಲ್ಲಿ ಎರಡು ಖಡ್ಡಗಳನ್ನು ಧರಿಸಿ ಕೃತಾಂತನಂತೆ ಶತ್ರುಗಳನ್ನು ಸಂಹರಿಸತೊಡಗಿ ದನು. ಇದನ್ನು ನೋಡಿ ಉಳಿದ ಮಾಟವೀರರೂ ರೊಚ್ಚಿಗೆದ್ದು ಶತ್ರುಗಳ ಮೇಲೆ ಬಿದ್ದು ಅವರನ್ನು ಸಂಹರಿಸ ತೊಡಗಿದರು. ಈ ಪ್ರಸಂಗದಲ್ಲಿ ನೂರಾರು ಜನ ಸರದಾರ ರು ಗಾಯವಡೆದು ಅವರ ದೇಹಗಳು ರಕ್ತಮಯವಾದವು. ಕೆಲವರು ರಣಭೂಮಿಯಲ್ಲಿ ಶಯನಮಾಡಿದರು; ಕೆಲವರು ಮೂರ್ಛಿತರಾದರು; ಕೆಲವರ ರುಂಡಗಳು ಪಟಚಂಡಿನಂತೆ ಹಾರಿದವು, ಕೆಲವರ ಹೊಟ್ಟೆಯೊಳಗಿನ ಕರಳುಗಳು ಹೊರಬಿದ್ದವು. ಯಾವ ಬಣದವರೂ ಕಾದುವಲ್ಲಿ ಕಸರುಮಾಡಲಿಲ್ಲ. ಈಗಿನ ಯುದ್ಧಾವೇಶದಲ್ಲಿ ವಿಶ್ವಾಸರಾಯನ ಆನೆಯ ಬಹಳ ಮುಂದಕ್ಕೆ ಸಾಗಿಹೋಗಿತ್ತು. ಅದನ್ನು ಹಿಂದಕ್ಕೆ ತಿರುಗಿಸಿ ಮಾದಲಿದ್ದ ಸ್ಥಳದ ಯೇ ನಿಲ್ಲಿಸಿದರು. ಬಳಿಕ ಭಾವುಸಾಹೇಬನು ತನ್ನ ಪ್ರೀತಿಯ ಕುದುರೆಯನ್ನೇರಿ