ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಮೆಯು ೬೫ ಸುಜಾಉ ದೌಲನ ಆಶೆ ಯು ನನಗೆ ಬಿಡಲೊಲ್ಲದು; ಆದ್ದರಿಂದ ಕಟ್ಟ ಕಡೆಯ ಪತ್ರವನ್ನು ಆತನಿಗೆ ಕಳಿಸಿಕೊಡಬೇಕೆನ್ನುತ್ತೇನೆ; ನಿಮ್ಮ ನಂಬಿಗೆಯ ಮನುಷ್ಯನನ್ನು ಕಳಿಸಿ ಇಷ್ಟು ಕೆಲಸ ಮಾಡಿಸಬೇಕು. ಈ ಕ್ಷಣದಲ್ಲಿ ಈ ಕಾರ್ಯವಾಗಬೇಕು. ತಡವಾದರೆ ಪ್ರಯೋಜನವಾಗದು. ನಾಳೆ ಬೆಳಗಾಗು ವದರೊಳಗಾಗಿ ಪತ್ರದ ಉತ್ತರವು ನನ್ನ ಕೈಗೆ ಬರಬೇಕು, ನೋಡಿರಿ, ಯಾ ರನ್ನು ಕಳಿಸಬೇಕೆಂಬುದನ್ನು ವಿಚಾರಮಾಡಿರಿ. ಇದು ಕಡೆಯ ಪ್ರಯತ್ನ ವು. ಸುಜಾ ಉದೌಲನ ದಿವಾಣನಾದ ಕಾಶೀರಾಜನು ಒಳ್ಳೆ ಧೂರ್ತನಿರುವನು. ಸುಜಾಉದೌಲನ ಕಡೆಗೆ ನಾವು ಕಳಿಸಿರುವ ಕಾಣಿಕೆಗಳನ್ನು ಆ ಧೂರ್ತ ಬ್ರಾ ಹ್ಮಣನು ಆಗಾಗ್ಗೆ ಮುಟ್ಟಿಸಿರುವನೋ ಇಲ್ಲವೋ ಯಾರಿಗೆ ಗೊತ್ತು. ಆತನು ನಮ್ಮ ಪತ್ರಗಳನ್ನು ಓದಿತೋರಿಸುತ್ತಿರಲಿಕ್ಕಿಲ್ಲ. ಓದಿ ತೋರಿಸಿದರೂ ಅದನ್ನು ಇದ್ದಕ್ಕಿದ್ದಹಾಗೆ ಓದಿಹೇಳುತ್ತಿರಲಿಕ್ಕಿಲ್ಲ ! ಮಹದಾಜಿ, ಅತ್ತ ಏನು ಆಗುತ್ತಿರ ಬಹುದೆಂಬದನ್ನು ಯಾರು ಹೇಳಬೇಕು ? ಈ ಪ್ರಸಂಗದಲ್ಲಿ ಅತ್ಯಂತ ಚತುರ ನಾದವನು ಸುಜಾನಕಡೆಗೆ ಹೋಗಬೇಕಾಗಿರುವದು. ಆ ಹೊ?ಗುವವನು ನಂಬಿ ಗೆಯವನಿರಬೇಕು; ಆ ಕಡೆಯವರಿಗೆ ಅಪರಿಚಿತನಾಗಿರಬೇಕು; ಅಂದರೆ ಕಾರ್ಯವಾಗುವದು. ಏನೇ ಮಾಡಿರಿ, ಇನ್ನು ಕಾರ್ಯವನ್ನು ಈಗಲೇ ನೀವು ಮಾಡಬೇಕು ! ” ಎಂದು ಹೇಳಿದನು. ಆಗ ಮಹದಾಜಿ ಯು ನಾನೇ ಸ್ವತಃ ಹೋಗಿಬರುತ್ತೇನೆನ್ನ ಲು, ಭಾವುಸಾಹೇಬನು ಅದಕ್ಕೆ ಒಪ್ಪಲಿಲ್ಲ. ನಾಳಿನ ಯುದ್ಧದಲ್ಲಿ ನೀವು ಇರಲೇಬೇಕಾದ್ದರಿಂದ ಬೇರೆ ಯಾರನ್ನಾದರೂ ಈ ಕಾರ್ಯ ಕೈ ನಿಯಮಿಸಬೇಕೆಂದು ಹೇಳಿ, ಸ್ವತಃ ಸುಜಾನಿಗೆ ಪತ್ರವನ್ನು ಬರೆದು ತನ್ನ ಮೊಹರುಮಾಡಿ ಮಹದಾಜಿಯ ಕೈಯಲ್ಲಿ ಕೊಟ್ಟನು. ಸಾ ಮಿ ನಿಷ್ಟನಾದ ಮಹದಾಜಿದು ತಿರುಗಿ ಮಾತಾಡಲಿಲ್ಲ ; ಆಗ ಮಾ ತಾಡಿ ಹೊತ್ತು ಕಳೆಯುವ ಹಾಗೂ ಇನ್ನಿಲ್ಲ ; ನಾಳೆ ಬೆಳಗಾಗುತ್ತಲೆ ಅವರು ದುರಾಣಿಯ ಮೇಲೆ ಸಾಗಿಹೋಗಬೇಕಾಗಿತ್ತು ; ಆದ್ದರಿಂದ ಮಹದಾಜಿರು ಶ್ರೀ ಮಂತರ ಮಾತಿಗೆ ಒಪ್ಪಿಕೊಂಡು ಕಾಗದ ತಕೊಂಡು ಮುಜರೆಮಾಡಿ ಹೊರಟು ಹೋದನು, ಈ ಕೆಲಸಕಾಗಿ ಯಾರನ್ನು ಕಳಿಸಬೇಕೆಂಬ ಬಗ್ಗೆ ಆತನು ಆಲೋ ಚಿಸತೊಡಗಿದನು;ಆದರೆ ಯೋಗ್ಯ ಮನುಷ್ಯರ ಗೊತ್ತು ಹತ್ತಲೊಲ್ಲದು. ಆತನು ಆಲೋಚಿಸುತ್ತಲೇ ಕುದುರೆಯನ್ನು ಇಳಿದು ಡೇರೆಯನ್ನು ಹೊಕ್ಕನು. ಅಲ್ಲಿ ಉಮೆಯು ಆತನ ಕಣ್ಣಿಗೆ ಬಿದ್ದಳು. ಆಕೆಯ ಸ್ವಾಭಾವಿಕವಾದ ಅಲೌಕಿಕ ತೇಜಸ್ಸನ್ನೂ, ಕರ್ತೃತ್ವ ಶಕ್ತಿಯನ್ನೂ, ಮನಸ್ಸಿನಲ್ಲಿ ತಂದು, ಆಕೆಯನ್ನೇ ಪುರುಷವೇಷದಿಂದ ಸುಜಾನಬಳಿಗೆ ಕಳಿಸಬೇಕೆಂದು ಆತನು ಮಾಡಿದನು. 'ಮುಣುಗುವವನಿಗೆ ಹುಲ್ಲು ಕಡ್ಡಿಯ ಆಧಾರವಾಗಿ ತೋರುತ್ತದೆಂಬ ಮಾತು ಸುಳ್ಳಲ್ಲ. ಉಮಯು ತರುಣಸ್ತಿಯಾದರೂ, ಕಾರ್ಯವಸಾಧಿಸು ವಳೆಂದು ಮಹದಾಜಿಯು ತಿಳಿದನು. ಕೊಡಲೆ ಆತನು ಉಮೆಯ ನ್ನು ಒತ್ತಟ್ಟಿ ಗೆ ಕರೆದು ಈ ಪ್ರಸಕ್ತಿಯನ್ನು ತೆಗೆಯಲು, ಆಕಯು ಸಂತೋಷದಿಂದ ಒಪ್ಪಿ