ಈ ಪುಟವನ್ನು ಪ್ರಕಟಿಸಲಾಗಿದೆ

24

ಕೋಟಿ ಚೆನ್ನಯ

ಉತ್ತರ- ಈಗಲೇ ಬಂದಾರು; ಕೂತುಕೊಳ್ಳಿ, ನೂಲು ಹಾಕಿದವರಾದರೆ ಕೆಂದಾಳೆಯ ಪದ್ಮಕಟ್ಟಿ ಇದೆ. ಒಕ್ಕಲಿಗರಾದರೆ ಬಡವರ ಚಪ್ಪರ ಇದೆ. ಜಾತಿಯವರಾದರೆ ಮೊಗಸಾಲೆಯಲ್ಲಿ ತೂಗುಯ್ಯಾಲೆ ಇದೆ”

ಗಂಡಸರಿಲ್ಲದ ಮನೆಯೊಳಕ್ಕೆ ತಾವು ತಲೆಹಾಕುವುದು ಸರಿಯಲ್ಲವೆಂದು ಹೇಳಿ, ಕೋಟಿಚೆನ್ನಯರು ಚಪ್ಪರದಲ್ಲಿ ಹಾಸುಕಂಬಳಿಯನ್ನು ಬಿಡಿಸಿ, ಅಲ್ಲೇ ಕುಳಿತುಕೊಂಡು, ಎಲೆಯ ಸಂಚಿಯನ್ನು ಬಿಚ್ಚಿ, ಬಾಯಿ ಕೆಂಪಗೆ ಮಾಡಿಕೊಂಡರು. ಆಗ ಚೆನ್ನಯನಿಗೆ ಅಡಕೆಯು ತಲೆಗೇರಿ ಬಾಯಾರಿ, ಜೋಮು ಬಂತು. ಕೋಟೆಯು “ನಮಗೆ ಒಂದು ಗಿಂಡಿ ನೀರು ಬೇಕು ಎಂದು ಗಟ್ಟಿಯಾಗಿ ಹೇಳಿದನು.

ಗಂಡಸರಿಲ್ಲದೆ ಮನೆಯ ಹೊರಗೆ ತಲೆಹಾಕುವುದು ಸರಿಯಲ್ಲವೆಂದು ಮಾತಿನಿಂದ ಹೇಳಿದರೂ ಆ ಹೆಂಗಸು ಕೆಲಸದಿಂದ ತೋರಿಸಲಿಲ್ಲ. ಆಕೆಯು ಮಡಿಯುಟ್ಟು, ಕಲ್ಲು ಕಟ್ಟಿದ ಬಾವಿಗೆ ಹೋಗಿ, ನೀರು ತುಂಬಿದ ಬಿಂದಿಗೆಯನ್ನು ಹಿಡಿದುಕೊಂಡು ಹೊರಕ್ಕೆ ಬಂದಳು.

ಇಷ್ಟರಲ್ಲಿ ಚೆನ್ನಯನು ಮರವೆ ತಿಳಿದು, ಕೈಬಟ್ಟೆಯಿಂದ ಮೋರೆಯನ್ನು ಒರಸಿಕೊಳ್ಳುತಿದ್ದನು. ಹೆಂಗಸು ನೀರಿನ ಬಿಂದಿಗೆಯನ್ನು ಹೊಸ್ತಿಲ ಹೊರಗಿಟ್ಟು, ಬಾಗಿಲ ಹಿಂದುಗಡೆ ನಿಂತಳು. ಬಿಂದಿಗೆಯನ್ನು ನೋಡಿ ಅಣ್ಣನು ತಮ್ಮನ ಮುಖವನ್ನೂ ತಮ್ಮನು ಅಣ್ಣನ ಮುಖವನ್ನೂ ದೃಷ್ಟಿಸುತ್ತಾ, ನೀರು ಮುಟ್ಟದೆ ಸುಮ್ಮನಿದ್ದ ರು. ಹೆಂಗಸು ಅದನ್ನು ಕಂಡು ನೀರು ಮಡಗಿದ್ದೇನೆ ” ಎಂದು ಹೇಳಿದಳು.

ಅದಕ್ಕೆ ಕೋಟಿಯು “ನಿನ್ನ ಕೈನೀರು ಕುಡಿಯಬೇಕಾದರೆ, ಹುಟ್ಟು ಬುಡ ಹೇಳಬೇಕು; ಜಾತಿಕುಲ ತಿಳಿಯಬೇಕು. ಎಂದನು. “ಅದಕ್ಕೇನು ಅಡ್ಡಿ? ಕಥೆ ಮಾತ್ರ ದೊಡ್ಡದಿದೆ. ಮನೆಯವರು ಬರಲಿಕ್ಕೂ ತಡ ಇದೆ

ಅಷ್ಟರೊಳಗೆ ಅವಳ ಗಂಡನು ಕಳ್ಳು ಹೊತ್ತುಕೊಂಡು, ಹಿತ್ತಿಲ ಕಡೆಯಿಂದ ಮನೆಗೆ ಬಂದದ್ದು ಆ ಹೆಂಗಸಿಗೆ ಗೊತ್ತಾಗಲಿಲ್ಲ, ಅವಳು ಪರಕೀಯರೊಡನೆ ಮಾತನಾಡುವುದನ್ನು ಅವನು ಕೇಳಿ, ಸಂಶಯದಿಂದ ಮನೆಯ