ಈ ಪುಟವನ್ನು ಪ್ರಕಟಿಸಲಾಗಿದೆ

36

ಕೋಟಿ ಚೆನ್ನಯ

ಚೆಂದುಗಿಡಿಯ ಬೆನ್ನು ಹಿಡಿದು, ರಾಜಾಂಗಣವನ್ನು ದಾಟಿ ಬರುತಿದ್ದ ಆ ವೀರಕುಮಾರರ ಬಿಳಿ ನಗುವಿನ ನಗುಮೊಗದ, ಮೊಗಸಿರಿಯ, ಸಿರಿಯಸಿಂಗಾರವನ್ನು ನೋಡುವುದಕ್ಕೆ ನೂರು ಕಣ್ಣು ಬಣ್ಣಿಸುವುದಕ್ಕೆ ನೂರು ನಾಲಗೆ ಇದ್ದರೂ ಸಾಲದು,

ಅವರು ಚಾವಡಿಯ ಮೇಲೆ ಬರುವಷ್ಟರಲ್ಲಿ ಚೆಂದುಗಿಡಿಯು ಒಳಕ್ಕೆ ಹೋಗಿ ಒಂದು ನಿಮಿಷದಲ್ಲಿಯೇ ಹೊರಕ್ಕೆ ಬಂದು, “ಬೈದ್ಯರೇ, ನಿಮ್ಮ ಕಾರ್ಯವು ರಹಸ್ಯದ್ದಿದ್ದರೆ, ನಿಮ್ಮಿಬ್ಬರಿಗೆ ಮಾತ್ರ ಒಳಗೆ ಅಪ್ಪಣೆಯಾಗಿದೆ” ಎಂದು ಹೇಳಿದನು.

ಅದಕ್ಕೆ ಕೋಟಿಯು “ಯಾವ ಗುಟ್ಟಾದರೂ ಬೀಡಿನಲ್ಲಿ ನಿಮ್ಮ ಕಿವಿಯ ಹೊರಗಲ್ಲವಷ್ಟೆ” ಎಂದನು.

ಚೆಂದುಗಿಡಿಯು “ಬಲ್ಲಾಳರ ಅಪ್ಪಣೆಯಂತೆ ನಡೆಯ ಬೇಕಾದದ್ದು ನನ್ನ ಕೆಲಸ, ಬಲ್ಲಾಳರಿಗೆ ಬೆಳಗ್ಗಿನಿಂದ ಮೈಯಲ್ಲಿ ಅಷ್ಟು ಸೌಖ್ಯವಿಲ್ಲವಂತೆ. ಆದುದರಿಂದ ನೀವಿಬ್ಬರೇ ಅವರನ್ನು ಹೋಗಿ ಕಾಣುವುದು ನನಗೆ ಮೇಲೆಂದು ತೋರುತ್ತದೆ. ಅದೇ-ಹೊಸತಾಗಿ ಕಟ್ಟಿಸಿದ ಮೇಲ್ಮಾಳಿಗೆ; ಅವರು ಅಲ್ಲಿಯೇ ಓಲಗವಾಗಿದ್ದಾರೆ. ನೀವು ಒಳಕ್ಕೆ ಹೋಗಿ; ನಾವು 'ಇಲ್ಲಿಯೇ ಕಾವಲು ಇದ್ದೇವೆ ” ಎಂದು ಅವರಿಬ್ಬರನ್ನು ಒಡಂಬಡಿಸಿದನು.

ಕೋಟಿಚೆನ್ನಯರು ಒಳಕ್ಕೆ ಹೋಗಿ, ಮಾಳಿಗೆಯ ಬಡಗು ಗೋಡೆಯ ಒತ್ತಿನಲ್ಲಿದ್ದ ಗದ್ದಿಗೆಯನ್ನು ಸಮೀಪಿಸುವಷ್ಟರಲ್ಲಿ ಅದರ ಮೇಲೆ ಅರೆ ಒರಗಿದ್ದವನು ಮೈಯಲುಗಿಸಿ, “ಬನ್ನಿ, ಇಲ್ಲೇ ಕುಳಿತುಕೊಳ್ಳಬಹುದು ” ಎಂದು ಹೇಳಿ, ಹೂವಿನ ಚಾಪೆ ಹಾಸಿದ್ದ ಹಲಗೆಯನ್ನು ತೋರಿಸಿ, “ಹಸೆ ಇದೆ, ಕುಳಿತುಕೊಳ್ಳಿ; ಇದು ನಾವು ಕಟ್ಟಿಸಿದ ಹೊಸ ಮಾಳಿಗೆ-ಹೇಗಿದೆ? ಎಂದು ತಾನೇ ಮಾತಾಡುವುದಕ್ಕೆ ಪ್ರಾರಂಭಿಸಿದನು.

ಅದಕ್ಕೆ ಚೆನ್ನಯನು “ಬುದ್ದಿ, ಕೇಳೆಬೇಕೆ? ಮಾಳಿಗೆ ಚೆನ್ನಾಗಿದೆ- ಬಳ್ಳಿಯಷ್ಟು ಬಾವು ಇಲ್ಲ ಮೂಗಿನಷ್ಟು ಮೊನೆ ಇಲ್ಲ ” ಎಂದನು.

ಕೋಟಿಯ ಕಣ್ಣು ಗದ್ದಿಗೆಯ ಮೇಲೆಯೇ ಇದ್ದಾಗ, ಅವನ ಕಿವಿಗೆ ಬಾಗಿಲಿನವನು ಬಾಗಿಲು ಮುಚ್ಚಿದ ಸದ್ದು ಬಿತ್ತು, ಕೀಲಿನವನು ಕೀಲು