ಉಪಕ್ರಮಣಿಕೆ ೧yan on Ant+Ador hop ವಾಗಿ ನಾನು ಅಡವಿಗೆ ಹೋಗಿದ್ದೆನು, ಆದರೆ ನಾನು ಹುಡುಗನೆಂದು ನನ್ನನ್ನು ಹಿಂದೆ ಇರೆಂದು ಹೇಳಿ ಮಿಕ್ಕವರೆಲ್ಲರೂ ಮುಂದೆ ಹೋದರು ಹದಿನಾರಾಣೆ ರಾಜಪೂತ ಸೇನಾಪತಿ ವಿಕ್ರಮಸಿಂಹನು ಒಂದು ಕಾಡುಹಂದಿಯನ್ನು ಆಕ್ರಮಣ ಮಾಡಿದನು, ಆ ಯುದ್ಧದಲ್ಲಿ ಸೇನಾಪತಿಯೇ ಸೋತುಹೋಗುವ ಹಾಗೆ ಕಂಡಿತು. ಹಂದಿಯ ಕೋರೆಹಲ್ಲುಗಳಿಂದ ಸೇನಾಪತಿಯ ಹೊಟ್ಟೆಯನ್ನು ಸೀಳಿತು. ಆ ಕೂಡಲೆ ನಾನು ಹೋಗಿ ಕತ್ತಿಯನ್ನು ಕೈಯಲ್ಲಿ ಹಿಡಿದು ಸೇನಾ ಪತಿಗೆದುರಾಗಿ ನಿಂತುಕೊಂಡೆನು. ಇದನೋಡು ! ನನ್ನೆದೆಯಲ್ಲಿ ಹಂದಿಯ ಹರಿ ರಕ್ತ ಸುರಿಯುತ್ತಿದೆ. ಆದರೆ ನಾನು ಭಯದಿಂದ ಹಿಂಜರಿದೆನೆ ? ಮತ್ತು ಹಕ್ಕಿಗಳನ್ನು ಹಿಡಿಯುವುದಕ್ಕೆ ಅಡವಿಯೊಳಗೆ ಹೊಕ್ಕಾಗ ಮೈಯೆಲ್ಲಾ ಎಷ್ಟು ಮುಳ್ಳು ಚುಚ್ಚಿಕೊಂಡಿದೆ, ನೋಡು ? ಒಂದು ಹೂವನ್ನು ತೆಗೆದುಕೊಡುವುದಕ್ಕೆ ಅಂಜುವೆನೆ ? ಆ ಹುಡುಗಿಯು ಹೂವು ನಕ್ಕು ವವೆಂದು ಹರುಷವನ್ನು ತಾಳಿದಳು, ಆದರೆ ಮನದಲ್ಲಿ, ತನಗೋಸ್ಕರ ಹೂವ ತರುವದಕ್ಕೆ ಹೋಗಿ ಹುಡುಗನ ಮೈಗೆ | ಮುಳ್ಳು ತಾಕಿ ಘಾಯವಾದೀತೆಂದು ಭಯಪಟ್ಟು, ಚಿಂತೆಯಿಂದ ಮನನೊಂದು, ಮೃಣಾಳದ ಹಾಗೆ ಸುಕುಮಾರವಾದ ಕುತ್ತಿಗೆಯ ಸಂಚಾಲನದಿಂದ ಕೆನ್ನೆ ಗಳ ಮೇಲೆ ಬಿದ್ದಿದ್ದ ಮುಂಗುರುಳ ಗೊಂಚಲುಗಳನ್ನು ಸರಿಮಾಡಿ ಕೊಂಡು, ಆದರೆ ನಿನ್ನ ಮೈಗೆ ಮುಳುತಾಕಿ ಫ್ಯಾಯವಾದರೆ ನನ್ನ ಮೇಲೆ ಕೋಪಮಾಡುವದಿಲ್ಲ ವಷ್ಟೆ ? 99 ಎಂದು ಹೇಳಿದಳು. ಹುಡುಗರು ಹುಡುಗಿಯ ಮುಖದ ಸೌಂದರ್ಯಕ್ಕೆ ತಕ್ಕ ಹಾಗೆ ಅವಳ ಮಾತುಗಳೂ ಅಷ್ಟು ಮಧರವಾದುದೆಂದು ತಿಳಿದುಕೊಂಡನು, ಆಗತಾನೇ ಸೂರ್ಯದೇವನು ಅಸ್ತನಾಗುತ್ತಿದ್ದನೆಂದು ಮೊದಲೇ ಹೇಳಿದ್ದೆವಷ್ಟೆ, ಅಸ್ತಮಿ ತರವಿಯ ರಕ್ತವರ್ಣದ ಛಾಯೆಯು ರಾಜಸಮುದ್ರದಲ್ಲಿ ಚಂಚಲವಾಗಿದ್ದ ಆಲೆ ಗಳ ಮೇಲೆ ಬಿದ್ದು ಪ್ರತಿಫಲಿತವಾಗಿ ಬಾಲೆಯು ಬಾಲೇಂದುವದನವನ್ನು ಮತ್ತ ಷ್ಟು ಉಜ್ವಲವಾಗಿ ಪ್ರಕಾಶಗೊಳಿಸಿತು. ಫಾಲ್ಗುಣ ಮಾಸದ ಮಧುರವಾದ ಯಾಮಿನಿಯ ಮೋಹನಯವಾದ ಕಾಂತಿಯ ಸ್ವಲ್ಪ ಅಸ್ಪಷ್ಟವಾಗುತ್ತ ಬಂದು ಮಸಕಾಗುತ್ತಿದ್ದ ಛಾಯೆಯು ಪ್ರಕೃತಿಯ ವಕ್ಷದಲ್ಲಿ ಬೀಳುತಬಂದಿತು. ಹಾಲ ಹಕ್ಕಿಯು ಜಗದಾಚ್ಛಾದಕರವಾದ ಚಂದ್ರನ ಪ್ರಣಯಿಯನ್ನು ಉಚ್ಚ ಕಂಠದಿಂದ
ಪುಟ:ಕೋಹಿನೂರು.djvu/೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.